IND vs ENG 4th Test: ಭಾರತ ಪರ ಇತಿಹಾಸ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್: ಈವರೆಗೆ ಯಾರೂ ಮಾಡಿಲ್ಲ ಈ ಸಾಧನೆ

Updated on: Feb 23, 2024 | 12:14 PM

Ravichandran Ashwin Record, India vs England 4th Test: ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಆಂಗ್ಲರ ವಿರುದ್ಧದ ಟೆಸ್ಟ್​ನಲ್ಲಿ 100 ವಿಕೆಟ್ ಕಿತ್ತರು. ಇದು ಇತಿಹಾಸವಾಗಿದೆ. ಭಾರತದ ಯಾವುದೇ ಬೌಲರ್ ಈ ಸಾಧನೆ ಮಾಡಿಲ್ಲ.

1 / 6
ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ (ಫೆಬ್ರವರಿ 23) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಆಂಗ್ಲರ ವಿರುದ್ಧದ ಟೆಸ್ಟ್​ನಲ್ಲಿ 100 ವಿಕೆಟ್ ಕಿತ್ತ ಇತಿಹಾಸದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ (ಫೆಬ್ರವರಿ 23) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಆಂಗ್ಲರ ವಿರುದ್ಧದ ಟೆಸ್ಟ್​ನಲ್ಲಿ 100 ವಿಕೆಟ್ ಕಿತ್ತ ಇತಿಹಾಸದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

2 / 6

ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಈ ಮೈಲಿಗಲ್ಲು ಸಾಧಿಸಿದರು. 37 ವರ್ಷದ ಜೇಮ್ಸ್ ಆಂಡರ್ಸನ್ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಈ ಅಶ್ವಿನ್ ಆಗಿದ್ದಾರೆ.

3 / 6

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆಂಗ್ಲರ ಲೆಕ್ಕಚಾರ ತಲೆಕೆಳಗಾಯಿತು. ಆರಂಭದಲ್ಲೇ ನಾಲ್ಕು ವಿಕೆಟ್​ಗಳು ಪತನಗೊಂಡವು. ಆಕಾಶ್ ದೀಪ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಂಗ್ಲ ಬ್ಯಾಟರ್​ಗಳ ಹುಟ್ಟಡಗಿಸಿ 3 ವಿಕೆಟ್ ಕಿತ್ತಿದ್ದಾರೆ.

4 / 6

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಆಕಾಶ್ ದೀಪ್ ಒಂದರ ಹಿಂದೆ ಒಂದರಂತೆ ಆಘಾತ ನೀಡಿದರು. ಭರ್ಜರಿ ಫಾರ್ಮ್​ನಲ್ಲಿದ್ದ ಬೆನ್ ಡಕೆಟ್ 11 ರನ್ ಗಳಿಸಿದ್ದಾಗ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಔಟಾದರೆ, ಬಂದ ಬೆನ್ನಲ್ಲೇ ಒಲೀ ಪೋಪ್ ಅವರು ಆಕಾಶ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಸಿಲುಕಿದರು.

5 / 6

ಇದರ ನಡುವೆ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಝಾಕ್ ಕ್ರಾಲಿ ಅವರನ್ನು ದೀಪ್ ಕ್ಲೀನ್ ಬೌಲ್ಡ್ ಮಾಡಿದರು. ಕ್ರಾಲಿ 42 ಎಸೆತಗಳಲ್ಲಿ 42 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಈ ಸಂದರ್ಭ ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿಗೆ 38 ರನ್ ಗಳಿಸಿದ್ದ ಬೈರ್​ಸ್ಟೋವ್ ಬಲಿಯಾದರು.

6 / 6

ನಾಯಕ ಬೆನ್ ಸ್ಟೋಕ್ಸ್ ಕೂಡ 3 ರನ್​ಗೆ ನಿರ್ಗಮಿಸಿದರು. ಸದ್ಯ ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 112 ರನ್​​ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಮೊದಲ ದಿನದ ಮೊದಲ ಸೆಷನ್ ಭಾರತದ ಪಾಲಾಗಿದೆ. ಆಕಾಶ್ ದೀಪ್ 3 ಹಾಗೂ, ಜಡೇಜಾ- ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.

Loading...
Unable to load recommendations.
Follow Us