IPL 2024: ಚೆನ್ನೈ, ಮುಂಬೈ ಅಲ್ಲ..; ಏಷ್ಯಾದ ಅತ್ಯಂತ ಜನಪ್ರಿಯ ತಂಡ ನಮ್ಮ ಆರ್​ಸಿಬಿ..!

|

Updated on: Dec 21, 2023 | 6:46 PM

RCB: ಇಲ್ಲಿಯವರೆಗೆ ಯಾವುದೇ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಇದೀಗ ಈ ತಂಡ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಚಾಂಪಿಯನ್ ತಂಡಗಳನ್ನು ಹಿಂದಿಕ್ಕಿ ಇನ್ಸ್ಟಾಗ್ರಾಮ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ರಾಯಲ್ ಚಾಲೆಂಜರ್ಸ್ ಅಪಾರ ಅಭಿಮಾನಿಗಳನ್ನು ಹೊಂದಿದೆ. ಇದುವರೆಗೆ ಈ ತಂಡ ಒಂದೇ ಒಂದು ಟ್ರೋಫಿಯನ್ನು ಗೆಲ್ಲದಿದ್ದರು ಈ ತಂಡಕ್ಕಿರುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅದರಲ್ಲಿ ಆಡುತ್ತಿರುವ ದೊಡ್ಡ ಆಟಗಾರರು.

2 / 7
ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಕೂಡ ಈ ತಂಡದಲ್ಲಿ ಆಡಿದ್ದಾರೆ. ಈ ತಾರಾ ಬಳಗಕ್ಕೆ ಇಲ್ಲಿಯವರೆಗೆ ಯಾವುದೇ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಇದೀಗ ಈ ತಂಡ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಚಾಂಪಿಯನ್ ತಂಡಗಳನ್ನು ಹಿಂದಿಕ್ಕಿ ಇನ್ಸ್ಟಾಗ್ರಾಮ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

3 / 7
ನವೆಂಬರ್ ತಿಂಗಳಿನಲ್ಲಿ ಇನ್ಸ್ಟಾಗ್ರಾಮ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ಜನಪ್ರಿಯ ಏಷ್ಯನ್ ಕ್ರೀಡಾ ತಂಡ ಎನಿಸಿಕೊಂಡಿದೆ. ಡಿಪೋರ್ಟೆಸ್ ಮತ್ತು ಫೈನಾನ್ಜಾಸ್ ವರದಿಯ ಪ್ರಕಾರ, ಆರ್​ಸಿಬಿ ಇನ್ಸ್ಟಾಗ್ರಾಮ್​ನಲ್ಲಿ 164 ಮಿಲಿಯನ್ ಸಂವಾದಗಳನ್ನು ನಡೆಸಿದೆ.

4 / 7
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಲ್ಲಿರುವ ಸಿಎಸ್​ಕೆ ಇನ್ಸ್ಟಾಗ್ರಾಮ್​ನಲ್ಲಿ 104 ಮಿಲಿಯನ್ ಸಂವಾದಗಳನ್ನು ನಡೆಸಿದೆ.

5 / 7
ಇದಲ್ಲದೇ ಮುಂಬೈ ಇಂಡಿಯನ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಇನ್ಸ್ಟಾಗ್ರಾಮ್​ನಲ್ಲಿ 88.1 ಮಿಲಿಯನ್ ಸಂವಾದಗಳನ್ನು ನಡೆಸಿದೆ.

6 / 7
ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಅಲನ್ಸರ್ ಎಫ್‌ಸಿ ಇನ್‌ಸ್ಟಾಗ್ರಾಮ್‌ನಲ್ಲಿ 60.8 ಮಿಲಿಯನ್ ಸಂವಾದಗಳನ್ನು ಪಡೆದುಕೊಂಡಿದೆ. ಗುಜರಾತ್ ಟೈಟಾನ್ಸ್ 46.1 ಮಿಲಿಯನ್ ಸಂವಾದಗಳೊಂದಿಗೆ ಐದನೇ ಸ್ಥಾನದಲ್ಲಿದೆ.

7 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್‌ಸ್ಟಾಗ್ರಾಮ್‌ನಲ್ಲಿ 11.9 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 6.9 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದೆ. ಈ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫ್ಯಾನ್ ಫಾಲೋಯಿಂಗ್ ಇದೆ.