ICC Rankings: ಬರೋಬ್ಬರಿ 31 ಸ್ಥಾನ ಮೇಲೇರಿದ ಸರ್ಫರಾಜ್; 10 ಸ್ಥಾನ ಕುಸಿದ ರಾಹುಲ್

|

Updated on: Oct 23, 2024 | 3:53 PM

ICC Rankings: ಐಸಿಸಿ, ಇಂದು ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ 99 ರನ್‌ಗಳ ಇನ್ನಿಂಗ್ಸ್‌ ಆಡಿದ್ದ ಪಂತ್, ಇದೀಗ ಟೆಸ್ಟ್ ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್​ನಲ್ಲಿ ಮೂರು ಸ್ಥಾನಗಳನ್ನು ಮೇಲೇರಿ ಇದೀಗ ಆರನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

1 / 7
ಐಸಿಸಿ, ಇಂದು ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ 99 ರನ್‌ಗಳ ಇನ್ನಿಂಗ್ಸ್‌ ಆಡಿದ್ದ ಪಂತ್, ಇದೀಗ ಟೆಸ್ಟ್ ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್​ನಲ್ಲಿ ಮೂರು ಸ್ಥಾನಗಳನ್ನು ಮೇಲೇರಿ ಇದೀಗ ಆರನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

2 / 7
ಪ್ರಸ್ತುತ 745 ರೇಟಿಂಗ್‌ ಪಾಯಿಂಟ್ಸ್ ಹೊಂದಿರುವ ರಿಷಬ್ ಪಂತ್ ಮೂರು ಸ್ಥಾನ ಮೇಲೇರಿದ್ದು ಟಾಪ್ 10 ರೊಳಗೆ ಸ್ಥಾನ ಪಡೆದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿ ಪಂತ್ ಸ್ಥಾನ ಪಡೆದಿದ್ದಾರೆ. ಪಂತ್ ಅಲ್ಲದೆ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಕೂಡ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದಾರೆ. ಆದರೆ ಕೊಹ್ಲಿ ಮಾತ್ರ ಒಂದು ಸ್ಥಾನ ಕಳೆದುಕೊಳ್ಳಬೇಕಾಗಿದೆ.

3 / 7
ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್​ನಲ್ಲಿ ಮಿಶ್ರ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ 780 ರೇಟಿಂಗ್ ಪಾಯಿಂಟ್ಸ್​ನೊಂದಿಗೆ 4ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಹಿಂದೆ 7ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಇದೀಗ 720 ರೇಟಿಂಗ್ ಪಾಯಿಂಟ್ಸ್​ಗಳೊಂದಿಗೆ 8ನೇ ಸ್ಥಾನಕ್ಕೆ ಜಾರಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಭಾರತದ ಮತ್ತ್ಯಾವ ಬ್ಯಾಟ್ಸ್‌ಮನ್ ಕೂಡ ಟಾಪ್ 10 ರೊಳಗೆ ಕಾಣಿಸಿಕೊಂಡಿಲ್ಲ.

4 / 7
ಆದರೆ ನ್ಯೂಜಿಲೆಂಡ್ ವಿರುದ್ಧ 150 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಸರ್ಫರಾಜ್ ಖಾನ್ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಬರೋಬ್ಬರಿ 31 ಸ್ಥಾನ ಮೇಲೇರಿದ್ದು, ಈ ಮೂಲಕ ಕನ್ನಡಿಗ ಕೆಎಲ್ ರಾಹುಲ್​ರನ್ನು ಹಿಂದಿಕ್ಕಿದ್ದಾರೆ. ಈ ಹಿಂದೆ 84ನೇ ಸ್ಥಾನದಲ್ಲಿದ್ದ ಸರ್ಫರಾಜ್ ಇದೀಗ 53ನೇ ಸ್ಥಾನಕ್ಕೆ ಬಂದಿದ್ದಾರೆ.

5 / 7
ಪ್ರಸ್ತುತ 509 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಸರ್ಫರಾಜ್ ಖಾನ್, ರಾಹುಲ್​ಗಿಂತ 6 ಸ್ಥಾನ ಮುಂಬಡ್ತಿ ಪಡೆದಿದ್ದಾರೆ. ಇತ್ತ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ರಾಹುಲ್ ಬರೋಬ್ಬರಿ 10 ಸ್ಥಾನಗಳನ್ನು ಕಳೆದುಕೊಂಡಿದ್ದು, ಇದೀಗ 59ನೇ ಸ್ಥಾನಕ್ಕೆ ಜಾರಿದ್ದಾರೆ.

6 / 7
ಉಳಿದಂತೆ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಅವರ ರೇಟಿಂಗ್ ಪಾಯಿಂಟ್ಸ್​ನಲ್ಲಿ ಕುಸಿತ ಕಂಡಿದ್ದು, ಈ ಹಿಂದೆ 932 ರೇಟಿಂಗ್ ಹೊಂದಿದ್ದ ರೂಟ್, ಇದೀಗ 917ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಇದರ ಹೊರತಾಗಿಯೂ, ಅವರು ಇನ್ನೂ ನಂಬರ್ ಒನ್ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

7 / 7
ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 821 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತ ಕಳೆದ ಬಾರಿ ಲಾಂಗ್ ಜಂಪ್ ಮಾಡಿದ್ದ ಹ್ಯಾರಿ ಬ್ರೂಕ್ ಒಂದು ಸ್ಥಾನ ಜಾರಿದ್ದು, ಇದೀಗ 803 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.