Asia Cup 2023: ಏಷ್ಯಾಕಪ್‌ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ..!

|

Updated on: Sep 13, 2023 | 8:26 AM

Asia Cup 2023: ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ 2023 ರ ಏಷ್ಯಾಕಪ್ ಸೂಪರ್ 4 ಸುತ್ತಿನ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಆರು ತಿಂಗಳ ನಂತರ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಒಟ್ಟಿಗೆ ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಏಕದಿನ ಸ್ವರೂಪದಲ್ಲಿ ಜೋಡಿಯಾಗಿ 5,000 ರನ್‌ಗಳನ್ನು ಪೂರ್ಣಗೊಳಿಸಿತು.

1 / 8
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ 2023 ರ ಏಷ್ಯಾಕಪ್ ಸೂಪರ್ 4 ಸುತ್ತಿನ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಹೊಸ ದಾಖಲೆಯನ್ನು ನಿರ್ಮಿಸಿದೆ.

2 / 8
ಆರು ತಿಂಗಳ ನಂತರ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ಒಟ್ಟಿಗೆ ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಏಕದಿನ ಸ್ವರೂಪದಲ್ಲಿ ಜೋಡಿಯಾಗಿ 5,000 ರನ್‌ಗಳನ್ನು ಪೂರ್ಣಗೊಳಿಸಿತು.

3 / 8
ಅಲ್ಲದೆ ಈ 5 ಸಾವಿರ ರನ್​ಗಳ ಜೊತೆಯಾಟದ ಮೈಲಿಗಲ್ಲನ್ನು ರೋಹಿತ್ ಮತ್ತು ವಿರಾಟ್ ಜೋಡಿ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಸಾಧಿಸಿದ್ದು, ಈ ಮೂಲಕ ವೆಸ್ಟ್ ಇಂಡೀಸ್ ದಂತಕಥೆ ಬ್ಯಾಟಿಂಗ್ ಜೋಡಿಯಾದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ ಅವರ ದಾಖಲೆಯನ್ನು ಮುರಿಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

4 / 8
ಒಟ್ಟಾರೆಯಾಗಿ, 5 ಸಾವಿರ ರನ್​ಗಳ ಜೊತೆಯಾಟ ನಡೆಸಿದ 8 ನೇ ಜೋಡಿ ಎನಿಸಿಕೊಂಡ ರೋಹಿತ್ ಮತ್ತು ಕೊಹ್ಲಿ, ಭಾರತೀಯರ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ಶಿಖರ್ ಧವನ್ ಮತ್ತು ಕೊಹ್ಲಿ ಅವರ ನಂತರ ಈ ಸಾಧನೆ ಮಾಡಿದ ಮೂರನೇ ಜೋಡಿ ಎನಿಸಿಕೊಂಡಿತು. ಇನ್ನು ಇವರಿಗಿಂತ ಮುನ್ನ ಈ ಸಾಧನೆ ಮಾಡಿದ ಜೋಡಿಗಳನ್ನು ನೋಡುವುದಾದರೆ..

5 / 8
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜೊತೆಯಾಗಿ ಒಟ್ಟು 8227 ರನ್ ಕಲೆಹಾಕಿದ್ದಾರೆ.

6 / 8
ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ಜಯವರ್ಧನೆ ಮತ್ತು ಸಂಗಕ್ಕಾರ ಇದ್ದು, ಈ ಜೋಡಿ ಒಟ್ಟಾರೆಯಾಗಿ 5992 ರನ್ ಕಲೆಹಾಕಿತ್ತು.

7 / 8
ಶ್ರೀಲಂಕಾದ ದಿಲ್ಶನ್ ಮತ್ತು ಸಂಗಕ್ಕಾರ ಜೋಡಿ 5475 ರನ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇದೇ ಶ್ರೀಲಂಕಾದ ಅಟಪಟ್ಟು ಮತ್ತು ಜಯಸೂರ್ಯ ಜೋಡಿ 5462 ರನ್​ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

8 / 8
ಇನ್ನು ಭಾರತೀಯರ ವಿಚಾರಕ್ಕೆ ಬಂದರೆ, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ನಂತರದ ಸ್ಥಾನದಲ್ಲಿರು ವ ರೋಹಿತ್ ಮತ್ತು ಧವನ್ ಜೋಡಿ ಒಟ್ಟು 5193 ರನ್​ಗಳ ಜೊತೆಯಾಟ ನಡೆಸಿದೆ.