ಸದ್ಯದಲ್ಲೇ ರೋಹಿತ್ ಶರ್ಮಾ ಬಹುದೊಡ್ಡ ಘೋಷಣೆ ಸಾಧ್ಯತೆ: ಕ್ರಿಕೆಟ್ ಜೀವನಕ್ಕೆ ಪೂರ್ಣವಿರಾಮ?
Rohit Sharma Mumbai Indians: ಐಪಿಎಲ್ 2024 ರ ಹೊಸ ನಾಯಕತ್ವವನ್ನು ಮುಂಬೈ ಇಂಡಿಯನ್ಸ್ ಶುಕ್ರವಾರ ಪ್ರಕಟಿಸಿದ್ದು, ರೋಹಿತ್ ಶರ್ಮಾ ಜಾಗಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇದು ರೋಹಿತ್ ಕ್ರಿಕೆಟ್ ವೃತ್ತಿ ಜೀವನದ ಮೇಲೆ ದೊಡ್ಡ ಪರಿಣಾಮ ಬೀಳಲಿದೆ. ಅದು ಹೇಗೆ ನೋಡಿ.
1 / 7
ರೋಹಿತ್ ಶರ್ಮಾ ನಾಯಕರಾಗಿದ್ದ ಅವಧಿಯಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಐಸಿಸಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಐಸಿಸಿ ಏಕದಿನ ವಿಶ್ವಕಪ್ 2023, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಎಲ್ಲ ಸ್ಪರ್ಧೆಗಳಲ್ಲೂ ಸೋಲನ್ನು ಎದುರಿಸಬೇಕಾಯಿತು. ಆದಾಗ್ಯೂ, ಈ ಎಲ್ಲ ಟೂರ್ನಿಯಲ್ಲಿ ಅವರ ವೈಯಕ್ತಿಕ ಪ್ರದರ್ಶನ ಅದ್ಭುತವಾಗಿದೆ.
2 / 7
ಇವೆಲ್ಲದರ ನಡುವೆ ಐಪಿಎಲ್ 2024 ರ ಹೊಸ ನಾಯಕತ್ವವನ್ನು ಮುಂಬೈ ಇಂಡಿಯನ್ಸ್ ಶುಕ್ರವಾರ ಪ್ರಕಟಿಸಿದೆ. ಗುಜರಾತ್ ಟೈಟಾನ್ಸ್‌ನಿಂದ ವಾಪಸಾತಿ ಪಡೆದಿರುವ ಹಾರ್ದಿಕ್ ಪಾಂಡ್ಯಗೆ ಎಂಐ ಕ್ಯಾಪ್ಟನ್ಸಿ ಪಟ್ಟ ನೀಡಲಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ 17ನೇ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿದೆ.
3 / 7
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಈ ನಿರ್ಧಾರ ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆದ್ದಿದೆ. ಅವರನ್ನು ಈ ರೀತಿ ತೆಗೆದುಹಾಕಿರುವುದು ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಐಪಿಎಲ್‌ನಲ್ಲಿನ ಈ ಸುದ್ದಿ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಎಂದು ಹೇಳಲಾಗಿದೆ.
4 / 7
ರೋಹಿತ್ ಶರ್ಮಾ 2013 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ನಂತರ ಮುಂಬೈ ಗ್ರಾಫ್ ಏರುತ್ತಾ ಸಾಗಿತು. ಒಂದಲ್ಲ ಎರಡಲ್ಲ ಐದು ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಆದರೀಗ ಮುಂಬೈ ಇಂಡಿಯನ್ಸ್ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಮೇಲೆ ನಂಬಿಕೆ ಇಟ್ಟಿದೆ.
5 / 7
ಮುಂಬೈಯ ಈ ಒಂದು ನಿರ್ಧಾರ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಆಡುವ ಬಗ್ಗೆ ಕೂಡ ಗೊಂದಲ ಸೃಷ್ಟಿಯಾಗಿದೆ. ಐಪಿಎಲ್ ಬಳಿಕ ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಟೂರ್ನಿಗೆ ರೋಹಿತ್ ನಾಯಕನಾಗಬೇಕೆಂದು ಕ್ರೀಡಾ ಪ್ರೇಮಿಗಳು ಬಯಸಿದ್ದರು. ಆದರೆ ಇದೀಗ ಹಾರ್ದಿಕ್ ಪಾಂಡ್ಯಾಗೆ ಪಟ್ಟ ನೀಡುವ ಸಾಧ್ಯತೆ ಹೆಚ್ಚಿದೆ.
6 / 7
ರೋಹಿತ್ ಶರ್ಮಾ ಈ ವರ್ಷ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ರುತುರಾಜ್ ಗಾಯಕ್ವಾಡ್ ಭಾರತ ಟಿ20 ತಂಡದ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಕೆಲವೇ ಟಿ20 ಪಂದ್ಯಗಳನ್ನು ಆಡಲಿದೆ. ಹಾಗಾಗಿ ನಾಯಕತ್ವವನ್ನು ರೋಹಿತ್ ಶರ್ಮಾಗೆ ನಾಯಕತ್ವ ಹಸ್ತಾಂತರಿಸುವುದು ತುಂಬಾ ಕಷ್ಟ.
7 / 7
ಇದನ್ನೆಲ್ಲ ಮನಗಂಡು ಸ್ವತಃ ರೋಹಿತ್ ಶರ್ಮಾ ಅವರೇ ಅಂತರರಾಷ್ಟ್ರೀ ಟಿ20 ಕ್ರಿಕೆಟ್ಗೆ ದೂರ ಸಿರಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದೆ ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡರೆ ಅಚ್ಚರಿ ಪಡಬೇಡಬೇಕಿಲ್ಲ. ರೋಹಿತ್ ಅವರ ವಯಸ್ಸನ್ನು ಪರಿಗಣಿಸಿದರೆ, ಅವರ ಕ್ರಿಕೆಟ್ ಜೀವನಕ್ಕೆ ಕೂಡ ಸದ್ಯದಲ್ಲೇ ಫುಲ್ ಸ್ಟಾಪ್ ಬೀಳಲಿದೆ ಎಂದು ಕ್ರೀಡಾ ತಜ್ಞರು ಹೇಳುತ್ತಾರೆ.