IND vs NED, ICC World Cup: ಇಂದಿನ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಮೂರು ಬದಲಾವಣೆ?: ಇಲ್ಲಿದೆ ಭಾರತದ ಪ್ಲೇಯಿಂಗ್ XI
India Expected Playing 11 vs Netherlands: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ-ನೆದರ್ಲೆಂಡ್ಸ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದು ಈಗಾಗಲೇ ಸೆಮಿ ಫೈನಲ್ಗೇರಿರುವ ಟೀಮ್ ಇಂಡಿಯಾಕ್ಕೆ ಇಂದಿನ ಪಂದ್ಯ ಲೆಕ್ಕಕ್ಕಿಲ್ಲದ ಕಾರಣ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇಲ್ಲಿದೆ ನೋಡಿ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್.
1 / 7
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಲೀಗ್ ಸುತ್ತಿನ ಕೊನೆಯ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ (India vs Netherlands) ತಂಡಗಳು ಮುಖಾಮುಖಿ ಆಗಲಿದೆ.
2 / 7
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂಡೋ-ನೆದರ್ಲೆಂಡ್ಸ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದು ಈಗಾಗಲೇ ಸೆಮಿ ಫೈನಲ್ಗೇರಿರುವ ಟೀಮ್ ಇಂಡಿಯಾಕ್ಕೆ ಇದೊಂದು ಔಪಚಾರಿಕ ಪಂದ್ಯ. ಇತ್ತ ನೆದರ್ಲೆಂಡ್ಸ್ ಟೂರ್ನಿಯಿಂದ ಹೊರಬಿದ್ದಾಗಿದೆ.
3 / 7
ಭಾರತಕ್ಕೆ ಇಂದಿನ ಪಂದ್ಯ ಲೆಕ್ಕಕ್ಕಿಲ್ಲದ ಕಾರಣ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ನಾಯಕ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರಿತ್ ಬುಮ್ರಾ ಹೊರಗುಳಿಯಬಹುದು. ಮೂವರು ಆಟಗಾರರಿಗೆ ವಿಶ್ರಾಂತಿ ನೀಡಿ ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
4 / 7
ರೋಹಿತ್ ಜಾಗಕ್ಕೆ ಇಶಾನ್ ಕಿಶನ್ ಬರುವ ಸಾಧ್ಯತೆ ಇದೆ. ಗಿಲ್ ಹಾಗೂ ಕಿಶನ್ ಇನ್ನಿಂಗ್ಸ್ ಆರಂಭಿಸಬಹುದು. ಬುಮ್ರಾ ಬದಲು ಶಾರ್ದೂಲ್ ಥಾಕೂರ್ಗೆ ಜಾಗಸಿಹಬಹುದು. ಹಾಗೆಯೆ ಕುಲ್ದೀಪ್ ಪ್ಲೇಸ್ನಲ್ಲಿ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ.
5 / 7
ಉಳಿದಂತೆ ಭಾರತ ತಂಡದಲ್ಲಿ ಬದಲಾವಣೆ ಅನುಮಾನ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಎಂದಿನಂತೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಕೊಹ್ಲಿ ಬೆಂಗಳೂರಿನಲ್ಲಿ ಶತಕ ಸಿಡಿಸಿ ಸಚಿನ್ ದಾಖಲೆ ಮುರಿಯುತ್ತಾರ ನೋಡಬೇಕು.
6 / 7
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಚಿಕ್ಕ ಗ್ರೌಂಡ್ ಆಗಿದ್ದು ಬ್ಯಾಟಿಂಗ್ ಪಿಚ್ಗೆ ಹೇಳಿಮಾಡಿಸಿದ್ದಾಗಿದೆ. ಇಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆಸುರಿಯುವುದು ಖಚಿತ. ಈ ಹಿಂದೆ ಈ ಮೈದಾನದಲ್ಲಿ ನಡೆದ ಪಂದ್ಯಗಳು ಸಹ ಇದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ಈ ಪಿಚ್ ಬ್ಯಾಟರ್‌ಗಳಿಗೆ ಉತ್ತಮ ಸ್ಕೋರ್ ಮಾಡಲು ಸಹಕಾರಿಯಾಗಿದೆ. ಈ ಪಂದ್ಯಕ್ಕೆ ಮಳೆಯ ಸೂಚನೆ ಇಲ್ಲ.
7 / 7
ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಇಶಾನ್ ಕಿಶನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ, ವಿ. ಕೀ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಥಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.