IND vs SL: ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ; ಟೆಸ್ಟ್ ಸರಣಿಗೆ ಸ್ಟಾರ್ ಪ್ಲೇಯರ್ ಎಂಟ್ರಿ

Updated on: Aug 05, 2026 | 7:14 PM

India vs Sri Lanka Test: ಭಾರತ-ಶ್ರೀಲಂಕಾ ಟೆಸ್ಟ್ ಸರಣಿಗೆ ಮುನ್ನ ಸಾಯಿ ಸುದರ್ಶನ್ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿದ್ದಾರೆ. ಆರಂಭದಲ್ಲಿ ಟೀಂ ಇಂಡಿಯಾ ಜೊತೆ ಪ್ರಯಾಣಿಸದ ಅವರು, ಈಗ ಬೆಂಗಳೂರಿನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆಗಸ್ಟ್ 8 ರೊಳಗೆ ಶ್ರೀಲಂಕಾದಲ್ಲಿ ಟೀಂ ಇಂಡಿಯಾವನ್ನು ಸೇರಲಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ ಹಿಂದೆ ಶ್ರೀಲಂಕಾದಲ್ಲಿ ಭಾರತ ಎ ಪರ ಶತಕಗಳನ್ನು ಗಳಿಸಿದ್ದರು. ಅವರ ಫಿಟ್ನೆಸ್ ಟೀಂ ಇಂಡಿಯಾಗೆ ದೊಡ್ಡ ಬಲ ನೀಡಲಿದೆ.

1 / 5
ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇದೇ ಆಗಸ್ಟ್ 15 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಶ್ರೀಲಂಕಾ ತಲುಪಿದೆ. ಶುಭ್​ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಮೊದಲಿಗೆ ಅಭ್ಯಾಸ ಪಂದ್ಯವನ್ನು ಆಡಲಿದೆ. ಆ ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ(PC-PTI).

2 / 5
ಈ ಟೆಸ್ಟ್ ಸರಣಿಗಾಗಿ ತಂಡದ ಜೊತೆಗೆ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಶ್ರೀಲಂಕಾಕ್ಕೆ ಪ್ರಯಾಣಿಸಿರಲಿಲ್ಲ. ಹೀಗಾಗಿ ಅವರು ಈ ಸರಣಿಯನ್ನು ಆಡುವುದು ಅನುಮಾನ ಎನ್ನಲಾಗುತ್ತಿತ್ತು. ಇದಕ್ಕೆ ಕಾರಣ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಸಾಯಿ ಸುದರ್ಶನ್ ಎನ್​ಸಿಎಯಿಂದ ಫಿಟ್ನೆಸ್ ಕ್ಲಿಯರೆನ್ಸ್ ಪಡೆದುಕೊಂಡಿರಲಿಲ್ಲ(PC-PTI).

3 / 5
ಆದರೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಸಾಯಿ ಸುದರ್ಶನ್ ಸಂಪೂರ್ಣವಾಗಿ ಫಿಟ್ ಆಗಿದ್ದು ಬ್ಯಾಟಿಂಗ್ ಪ್ರಾರಂಭಿಸಿದ್ದಾರೆ. ವರದಿಗಳ ಪ್ರಕಾರ ಅವರು ಶೀಘ್ರದಲ್ಲೇ ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾವನ್ನು ಸೇರಲಿದ್ದಾರೆ. ಸಾಯಿ ಸುದರ್ಶನ್ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ತಮ್ಮ ಫಿಟ್‌ನೆಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ(PC-PTI).

4 / 5
ಸಾಯಿ ಸುದರ್ಶನ್ ಆಗಸ್ಟ್ 8 ರೊಳಗೆ ಶ್ರೀಲಂಕಾಕ್ಕೆ ತೆರಳುವ ಸಾಧ್ಯತೆಯಿದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಸುದರ್ಶನ್ ಆಗಸ್ಟ್ 7 ರಿಂದ ಪ್ರಾರಂಭವಾಗಲಿರುವ ಅಭ್ಯಾಸ ಪಂದ್ಯಗಳಲ್ಲಿ ಆಡುವುದಿಲ್ಲ. ಆದಾಗ್ಯೂ ಅವರು ಅಭ್ಯಾಸ ಪಂದ್ಯದ ನಡುವೆ ತಂಡವನ್ನು ಕೂಡಿಕೊಳ್ಳಲಿದ್ದಾರೆ(PC-PTI).

5 / 5
ಸಾಯಿ ಸುದರ್ಶನ್ ಫಿಟ್ ಆಗಿರುವುದು ಟೀಂ ಇಂಡಿಯಾಕ್ಕೆ ಒಳ್ಳೆಯ ಸುದ್ದಿ. ಏಕೆಂದರೆ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮುಖ್ಯವಾಗಿ, ಇತ್ತೀಚೆಗೆ ಶ್ರೀಲಂಕಾದ ಪರಿಸ್ಥಿತಿಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಈ ಹಿಂದೆ ಭಾರತ ಎ ಪರ ಶ್ರೀಲಕಾ ಪ್ರವಾಸ ಮಾಡಿದ್ದ ಸಾಯಿ ಸುದರ್ಶನ್ ಗಾಲೆಯಲ್ಲಿ ಎರಡೂ ಪಂದ್ಯಗಳನ್ನು ಆಡಿದರು. ಆ ಎರಡೂ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದರು. ಸುದರ್ಶನ್ ಎರಡು ಪಂದ್ಯಗಳಲ್ಲಿ ಅಜೇಯ 332 ರನ್ ಕಲೆಹಾಕಿದ್ದರು(PC-PTI).

Loading...
Unable to load recommendations.
Follow Us