ಸತತ 4 ವೈಫಲ್ಯಗಳ ನಂತರ ಅಬ್ಬರದ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್..!

Updated on: Oct 09, 2026 | 7:47 PM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯದಲ್ಲಿ, ಕಳಪೆ ಫಾರ್ಮ್‌ನಲ್ಲಿದ್ದ ಸಂಜು ಸ್ಯಾಮ್ಸನ್ ನಾಯಕನ ವಿಶ್ವಾಸ ಉಳಿಸಿಕೊಂಡು ಅಬ್ಬರದ ಅರ್ಧಶತಕ ಬಾರಿಸಿದರು. ರಾಂಚಿಯಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ, ಸಂಜು ಕೇವಲ 21 ಎಸೆತಗಳಲ್ಲಿ 50 ರನ್ ಗಳಿಸಿ ಮಿಂಚಿದರು. ಈ ಇನ್ನಿಂಗ್ಸ್ ಮೂಲಕ ಸ್ಯಾಮ್ಸನ್ ತಮ್ಮ ಕಂಬ್ಯಾಕ್ ಘೋಷಿಸಿ, ಟೀಂ ಇಂಡಿಯಾಕ್ಕೆ ಭರ್ಜರಿ ಆರಂಭ ನೀಡಿದ್ದಾರೆ.

1 / 5
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿದೆ. ತಂಡಕ್ಕೆ ಎಂದಿನಂತೆ ಸ್ಫೋಟಕ ಆರಂಭ ನೀಡುವಲ್ಲಿ ಆರಂಭಿಕರು ಯಶಸ್ವಿಯಾಗಿದ್ದಾರೆ(PC-PTI).

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿದೆ. ತಂಡಕ್ಕೆ ಎಂದಿನಂತೆ ಸ್ಫೋಟಕ ಆರಂಭ ನೀಡುವಲ್ಲಿ ಆರಂಭಿಕರು ಯಶಸ್ವಿಯಾಗಿದ್ದಾರೆ(PC-PTI).

2 / 5

ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಮೊದಲ ವಿಕೆಟ್​ಗೆ 42 ರನ್​ಗಳ ಜೊತೆಯಾಟ ನೀಡಿದರು. ಅದರಲ್ಲೂ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುತ್ತಿರುವ ಸಂಜು ಸ್ಯಾಮ್ಸನ್ ಆರಂಭದಿಂದಲೂ ಟಾಪ್​ ಗೇರ್​ನಲ್ಲೇ ಬ್ಯಾಟಿಂಗ್‌ ಮಾಡಿ ಅಬ್ಬರದ ಅರ್ಧಶತಕ ಬಾರಿಸಿದ್ದಾರೆ(PC-PTI).

3 / 5

ವಾಸ್ತವವಾಗಿ ಸಂಜು ಸ್ಯಾಮ್ಸನ್ ತಮ್ಮ ಕೊನೆಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಎರಡಂಕಿಯ ರನ್ ಕಲೆಹಾಕಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 11 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದ ಸಂಜು, ಪಾಕಿಸ್ತಾನ ವಿರುದ್ಧದ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಎರಡು ರನ್‌ ಮತ್ತು ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಏಳು ರನ್‌ಗಳಿಗೆ ಔಟಾಗಿದ್ದರು(PC-PTI).

4 / 5

ಅಲ್ಲದೆ ಜಪಾನ್ ವಿರುದ್ಧ ನಡೆದ ಏಕೈಕ ಪಂದ್ಯದಲ್ಲೂ ಸಂಜು ಕೇವಲ ಒಂಬತ್ತು ರನ್‌ಗಳನ್ನು ಗಳಿಸಿದ್ದರು. ಹೀಗಾಗಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಸಂಜುರನ್ನು ಈ ಪಂದ್ಯದಿಂದ ಕೈಬಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕೆಂಬ ಕೂಗು ಜೋರಾಗಿತ್ತು. ಆದರೆ ಗೆಲುವಿನ ಸಂಯೋಜನೆಯನ್ನು ಬದಲಾಯಿಸದ ನಾಯಕ ಶ್ರೇಯಸ್ ಅಯ್ಯರ್​ ಸಂಜುಗೆ ಮತ್ತೊಂದು ಅವಕಾಶ ನೀಡಿದರು(PC-PTI).

5 / 5

ಅದರಂತೆ ನಾಯಕನ ನಂಬಿಕೆಯನ್ನು ಉಳಿಸಿಕೊಂಡ ಸಂಜು ಸ್ಯಾಮ್ಸನ್ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಸಂಜು ಅವರ ಈ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್​ಗಳು ಸೇರಿವೆ. ಸಂಜು ಅವರ ಈ ಅಬ್ಬರದಿಂದಾಗಿ ಟೀಂ ಇಂಡಿಯಾ 8 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿದೆ(PC-PTI).

Published On - 7:47 pm, Fri, 9 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us