
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 160 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಭರ್ಜರಿ ಆರಂಭವೇ ಸಿಕ್ಕಿತು. ಆರಂಭಿಕರಿಬ್ಬರು ಮೊದಲ ವಿಕೆಟ್ಗೆ ಕೇವಲ 6.2 ಓವರ್ಗಳಲ್ಲಿ 82 ರನ್ ಕಲೆಹಾಕಿದರು. ಮೈದಾನದ ತುಂಬ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದ ಆರಂಭಿಕರು ಅಫ್ಘನ್ ಬೌಲರ್ಗಳ ಬೆವರಿಳಿಸಿದರು(PC-BCCI X).
ಟಿ20 ವಿಶ್ವಕಪ್ ಬಳಿಕ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಸಂಜು ಸ್ಯಾಮ್ಸನ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಸಂಜು ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಈ ಪಂದ್ಯದಲ್ಲಿ ಅಬ್ಬರಿಸಲೇಬೇಕಿತ್ತು. ಇದು ಸಾಧ್ಯವಾಗದಿದ್ದರೆ, ಕೊನೆಯ ಟಿ20ಯಲ್ಲಿ ಸಂಜು ಬದಲಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುವ ಸಾಧ್ಯತೆಗಳಿದ್ದವು(PC-BCCI X).
ಟಿ20 ವಿಶ್ವಕಪ್ ನಂತರ ಸಂಜು ಅವರ ಬ್ಯಾಟ್ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿತ್ತು. ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಸಂಜು ಕ್ರಮವಾಗಿ 5, 0, 1, 27, ಮತ್ತು 10 ರನ್ ಬಾರಿಸಿದ್ದರು. ಏತನ್ಮಧ್ಯೆ, ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರನ್ನು ಕೈಬಿಡುವ ಒತ್ತಡ ಹೇರಲಾಗಿತ್ತು(PC-BCCI X).
ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಹಳೆಯ ಫಾರ್ಮ್ಗೆ ಮರಳಿದ್ದ ಸಂಜು ಸ್ಯಾಮ್ಸನ್ ಕೇವಲ 20 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆದಾಗ್ಯೂ ಅರ್ಧಶತಕದ ಬಳಿಕ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದ ಸಂಜು ತಮ್ಮ ಇನ್ನಿಂಗ್ಸ್ನಲ್ಲಿ 22 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 57 ರನ್ ಬಾರಿಸಿ ಔಟಾದರು. ಅಂದರೆ ಸಂಜು ಬರಿ ಬೌಂಡರಿ ಸಿಕ್ಸರ್‌ಗಳಿಂದಲೇ ತಮ್ಮ ಅರ್ಧಶತಕ ಪೂರೈಸಿದರು(PC-BCCI X).
ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್ಗೆ ಇದು ಅವರ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕವಾಗಿದೆ. 259.09 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸಂಜು 22 ಎಸೆತಗಳಲ್ಲಿ 57 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದ ನಂತರ ಔಟಾದರು(PC-BCCI X).