ಟನ್, ಟನ್ ಬಳಿಕ ಸಂಜು ಸ್ಯಾಮ್ಸನ್ ಟೊನ್ ಟೊನ್
Sanju Samson Records: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದ ಸಂಜು ಸ್ಯಾಮ್ಸನ್ ಇದೀಗ ಬ್ಯಾಕ್ ಟು ಬ್ಯಾಕ್ ಸೊನ್ನೆ ಸುತ್ತಿದ್ದಾರೆ. 2ನೇ ಪಂದ್ಯದಲ್ಲಿ 3 ಎಸೆತಗಳನ್ನು ಎದುರಿಸಿ ಝೀರೋಗೆ ಔಟಾಗಿದ್ದ ಸ್ಯಾಮ್ಸನ್, 3ನೇ ಪಂದ್ಯದಲ್ಲಿ 2 ಎಸೆತಗಳಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ.
1 / 5
ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಇದೀಗ ಸತತ ಸೊನ್ನೆ ಸುತ್ತುವ ಮೂಲಕ ಅನಗತ್ಯ ದಾಖಲೆಗಳಿಗೆ ಕೊರೊಳೊಡ್ಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಸ್ಯಾಮ್ಸನ್ ಬಾಂಗ್ಲಾದೇಶ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 111 ರನ್ ಬಾರಿಸಿ ಅಬ್ಬರಿಸಿದ್ದರು.
2 / 5
ಇನ್ನು ಕಳೆದ ಶುಕ್ರವಾರ ನಡೆದ ಸೌತ್ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 107 ರನ್ ಬಾರಿಸಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ ಏಷ್ಯಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಆದರೆ ಈ ದಾಖಲೆಯ ಬಳಿಕ ಸಂಜು ಬ್ಯಾಟ್ನಿಂದ ಒಂದೇ ಒಂದು ರನ್ ಮೂಡಿ ಬಂದಿಲ್ಲ.
3 / 5
ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 3 ಎಸೆತಗಳನ್ನು ಎದುರಿಸಿದ್ದ ಸ್ಯಾಮ್ಸನ್, ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಇದೀಗ ಮೂರನೇ ಟಿ20 ಪಂದ್ಯದಲ್ಲೂ ಸ್ಯಾಮ್ಸನ್ (0) ವಿಕೆಟ್ ಎಗರಿಸುವಲ್ಲಿ ಯಾನ್ಸೆನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ ಸಂಜುವನ್ನು ಮಾರ್ಕೊ ಯಾನ್ಸೆನ್ ಸತತವಾಗಿ ಸೊನ್ನೆ ಸುತ್ತಿಸಿದ್ದಾರೆ.
4 / 5
ಇದರೊಂದಿಗೆ ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಬಾರಿ ಸೊನ್ನೆಗೆ ಔಟಾದ ಭಾರತೀಯ ಬ್ಯಾಟರ್ ಎಂಬ ಕಳಪೆ ದಾಖಲೆಯೊಂದು ಸಂಜು ಸ್ಯಾಮ್ಸನ್ ಪಾಲಾಗಿದೆ. ಈ ವರ್ಷ ಸ್ಯಾಮ್ಸನ್ 5 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಪರ ಟಿ20 ಯಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ವಿಕೆಟ್ ಕೀಪರ್ ಎಂಬ ಅನಗತ್ಯ ದಾಖಲೆ ಕೂಡ ಸ್ಯಾಮ್ಸನ್ (5 ಬಾರಿ) ಹೆಸರಿಗೆ ಸೇರ್ಪಡೆಯಾಗಿದೆ.
5 / 5
ಇನ್ನು ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷ ಎರಡು ಬಾರಿ ಬ್ಯಾಕ್ ಟು ಬ್ಯಾಕ್ ಝೀರೋಗೆ ಔಟಾದ ಮೊದಲ ಭಾರತೀಯನೆಂಬ ಕಳಪೆ ದಾಖಲೆಯೊಂದು ಸಂಜು ಸ್ಯಾಮ್ಸನ್ ಪಾಲಾಗಿದೆ. ಅಂದರೆ ಟನ್, ಟನ್ (ಶತಕ) ಮೂಲಕ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ ಇದೀಗ ಟೊನ್, ಟೊನ್ ಮೂಲಕ ಅನಗತ್ಯ ದಾಖಲೆಗಳನ್ನು ಮೈ ಮೇಲೆ ಎಳೆದುಕೊಂಡಿರುವುದು ವಿಪರ್ಯಾಸವೇ ಸರಿ.