2 ಐಸಿಸಿ ಫೈನಲ್‌ಗಳಲ್ಲಿ ಭಾರತವನ್ನು ಮಣಿಸಿದ್ದ ಪಾಕ್ ಮಾಜಿ ನಾಯಕ ಕ್ರಿಕೆಟ್​ಗೆ ವಿದಾಯ

Updated on: Mar 15, 2026 | 7:04 PM

Sarfaraz Ahmed Retires from International Cricket: ಪಾಕಿಸ್ತಾನದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪಾಕ್‌ಗೆ ಪ್ರಮುಖ ಪಾತ್ರ ವಹಿಸಿದ್ದ ಸರ್ಫರಾಜ್, 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಇತ್ತೀಚೆಗೆ ಅಂಡರ್-19 ತಂಡಕ್ಕೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದ ಸರ್ಫರಾಜ್, ತಮ್ಮ ಸುದೀರ್ಘ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

1 / 5
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 100 ಕ್ಕೂ ಹೆಚ್ಚು ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದ ಸರ್ಫರಾಜ್, ತಂಡವನ್ನು ಒಮ್ಮೆ ಐಸಿಸಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದರು. ಕೆಲವೇ ದಿನಗಳ ಹಿಂದೆ ಪಾಕಿಸ್ತಾನ ಅಂಡರ್ 19 ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಸರ್ಫರಾಜ್ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

2 / 5
ವಾಸ್ತವವಾಗಿ ಪಾಕಿಸ್ತಾನ ತಂಡ ಬಹಳ ಸಮಯದಿಂದ ಐಸಿಸಿ ಪ್ರಶಸ್ತಿಗಾಗಿ ಕಾಯುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಪಾಕಿಸ್ತಾನ ತಂಡವು ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಪಾಕ್ ತಂಡ ಕೊನೆಯ ಬಾರಿಗೆ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಅಂದಿನಿಂದ ಪಾಕಿಸ್ತಾನ ತಂಡಕ್ಕೆ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಪಾಕ್ ತಂಡಕ್ಕೆ ಆ ಟ್ರೋಫಿ ಗೆದ್ದುಕೊಟ್ಟಿದ್ದು, ಇದೇ ಸರ್ಫರಾಜ್ ಅಹ್ಮದ್.

3 / 5
38 ವರ್ಷದ ಸರ್ಫರಾಜ್ ಮಾರ್ಚ್ 15 ರ ಭಾನುವಾರದಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಪಾಕಿಸ್ತಾನ ಪರ ಡಿಸೆಂಬರ್ 2023 ರಲ್ಲಿ ಕೊನೆಯ ಪಂದ್ಯವನ್ನಾಡಿದ್ದ ಸರ್ಫರಾಜ್, ಅಂದಿನಿಂದ ಪಾಕಿಸ್ತಾನ ತಂಡದಿಂದ ಹೊರಗುಳಿದಿದ್ದರು. ಆದಾಗ್ಯೂ, ಕಳೆದ ಕೆಲವು ತಿಂಗಳುಗಳಿಂದ ಅವರು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮಾರ್ಗದರ್ಶಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

4 / 5
ಕೆಲವೇ ತಿಂಗಳುಗಳ ಹಿಂದೆ, ಅವರು ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌ನಲ್ಲಿ ಪಾಕಿಸ್ತಾನ ಶಾಹೀನ್ ತಂಡದಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ, ಅವರು ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು.

5 / 5
ಸರ್ಫ್ರಾಜ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ 2017 ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೊಫಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದಿತು. ಆದರೆ ಚಾಂಪಿಯನ್ಸ್ ಟ್ರೋಫಿ ಮಾತ್ರವಲ್ಲ, ಅವರು ಪಾಕಿಸ್ತಾನವನ್ನು ಅಂಡರ್ -19 ವಿಶ್ವಕಪ್‌ನಲ್ಲಿಯೂ ಗೆಲುವಿನತ್ತ ಮುನ್ನಡೆಸಿದರು. 2006 ರಲ್ಲಿ ಅವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಅಂಡರ್ -19 ವಿಶ್ವಕಪ್‌ ಗೆದ್ದಿತ್ತು. ಅಂದಿನಿಂದ ಪಾಕಿಸ್ತಾನ ಅಂಡರ್ -19 ವಿಶ್ವಕಪ್ ಗೆದ್ದಿಲ್ಲ.

Follow Us