ಪ್ರೆಸಿಡೆನ್ಸಿ ಕಾಲೇಜಿನಲ್ಲಿ ದಿ ವಿನ್ನರ್ಸ್ ಮೈಂಡ್ ಸೆಟ್ ಪುಸ್ತಕ ಬಿಡುಗಡೆ ಮಾಡಿದ ಶೇನ್ ವಾಟ್ಸನ್
ಪ್ರೆಸಿಡೆನ್ಸಿ ಕಾಲೇಜಿನ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬಂದಿದ್ದ ವ್ಯಾಟ್ಸನ್ ದಿ ವಿನ್ನರ್ಸ್ ಮೈಂಡ್ ಸೆಟ್ ಬುಕ್ಕನ್ನು ರಿಲೀಸ್ ಮಾಡಿದ್ದಾರೆ. ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿರುವುದು ನಿಜಕ್ಕೂ ಅದ್ಬುತ ಎಂದು ಆರ್ ಸಿಬಿ ತಂಡ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ತಿಳಿಸಿದ್ದಾರೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವ ಕಾರಣ ಕೆಲ ವಿದೇಶಿ ಆಟಗಾರರು ಭಾರತದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಬ್ಯಾಟರ್ ಶೇನ್ ವಾಟ್ಸರ್ ಕೂಡ ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿ ಸೇವೆಸಲ್ಲಿಸುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಾರೆ.
2 / 7
ಪ್ರೆಸಿಡೆನ್ಸಿ ಕಾಲೇಜಿನ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬಂದಿದ್ದ ವ್ಯಾಟ್ಸನ್ ದಿ ವಿನ್ನರ್ಸ್ ಮೈಂಡ್ ಸೆಟ್ ಬುಕ್ಕನ್ನು ರಿಲೀಸ್ ಮಾಡಿದ್ದಾರೆ. ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿರುವುದು ನಿಜಕ್ಕೂ ಅದ್ಬುತ ಎಂದು ಆರ್ ಸಿಬಿ ತಂಡ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ತಿಳಿಸಿದ್ದಾರೆ.
3 / 7
ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಹೇಳಿದ ಶೇನ್ ತಮ್ಮ ಕಾಲೇಜಿನ ದಿನಗಳನ್ನ ಮೆಲಕು ಹಾಕಿದರು. ಆರ್ಸಿಬಿ ತಂಡಕ್ಕೆ ಸಿಕ್ಕಪಟ್ಟ ಕ್ರೇಜಿ ಫ್ಯಾನ್ಸ್ ಇದ್ದಾರೆ. ನಿಜಕ್ಕೂ ಅದು ಅದ್ಭುತ 2016 ರಲ್ಲಿ ಆರ್ ಸಿಬಿ ಪರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಕ್ಷಣಗಳು ಅವಿಸ್ಮರಣೀಯ ಎಂದು ಹೇಳಿದರು.
4 / 7
ಈ ಬಾರಿ ಆರ್ಸಿಬಿ ತಂಡ ಕೆಳಕ್ರಮಾಂದಿಂದ ಫ್ಲೇ ಆಫ್ ಹಂತಕ್ಕೆ ಬಂದಿರುವುದ್ನು ನಂಬಲು ಅಸಾಧ್ಯವಾದುದ್ದು. ಕಳೆದ 7 ಪಂದ್ಯಗಳಲ್ಲಿ ಆರ್ಸಿಬಿ ಅತ್ಯದ್ಬುತವಾಗಿ ಪ್ರದರ್ಶಿಸಿದೆ. ಆರ್ಸಿಬಿ ಗೆ ಫೈನಲ್ ತಲುಪಲು ದೊಡ್ಡ ಅವಕಾಶ ಇದೆ. ಕೆಕೆಆರ್ ಕೂಡ ಫೈನಲ್ ತಲುಪುವ ನೆಚ್ಚಿನ ತಂಡವಾಗಿದೆ ಎಂದು ವಾಟ್ಸನ್ ಹೇಳಿದರು.
5 / 7
ಇದೇವೇಳೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಶ್ರೇಷ್ಠ ಬ್ಯಾಟರ್ ಯಾರು ಎಂದು ಪ್ರಶ್ನಿಸಿದಾಗ, ವಿರಾಟ್ ಕೊಹ್ಲಿ ಎಂದು ತಕ್ಷಣ ಹೇಳಿದರು. ಅಷ್ಟೇ ಅಲ್ಲ, ಮಹೇಂದ್ರ ಸಿಂಗ್ ಧೋನಿಯನ್ನು ಕೂಡ ಹೊಗಳಿದರು.
6 / 7
ಪ್ರೆಸಿಡೆನ್ಸಿ ಕಾಲೇಜಿನ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬಂದಿದ್ದ ವ್ಯಾಟ್ಸನ್ ಈವೇಳೆ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕುಲಪತಿ ಡಾ. ನಿಸ್ಸಾರ್ ಅಹಮದ್ ಜೊತೆ ಕ್ರಿಕೆಟ್ ಆಡಿ ಕೂಡ ಸಂಭ್ರಮಿಸಿದರು.
7 / 7
ಶೇನ್ ವ್ಯಾಟ್ಸನ್ ಅವರನ್ನು ಪ್ರೆಸಿಡೆನ್ಸಿ ಯೂನಿವರ್ಸಿಟಿ ಮ್ಯಾನೇಜ್‌ಮೆಂಟ್ ಹೃತ್ಪೂರ್ವಕವಾಗಿ ಅಭಿನಂದಿಸಿದರು. ವಿದ್ಯಾರ್ಥಿಗಳು ವಾಟ್ಸನ್ ಅವರ ಆಟೋಗ್ರಾಫ್ ತೆಗೆದುಕೊಳ್ಳುವ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟರು.