ಮೊಟ್ಟ ಮೊದಲ ವಿದೇಶಿ ಲೀಗ್ನ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಫೇಲ್
Shikhar Dhawan: ಡಿಸೆಂಬರ್ 2 ರಂದು ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಶಿಖರ್ ಧವನ್, ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಕರ್ನಾಲಿ ಯಾಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 14 ಎಸೆತಗಳನ್ನು ಎದುರಿಸಿದ್ದ ಶಿಖರ್ ಧವನ್ 14 ರನ್ ಗಳಿಸಿ ಔಟಾದರು. ಅಂದರೆ ತಮ್ಮ ಇನ್ನಿಂಗ್ಸ್‌ನಲ್ಲಿ ಧವನ್ 100ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು.
1 / 6
ಕೆಲವೇ ದಿನಗಳ ಹಿಂದೆ ಭಾರತ ಕ್ರಿಕೆಟ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್, ಇದೀಗ ವಿದೇಶಿ ಲೀಗ್ಗಳಲ್ಲಿ ಬ್ಯಾಟ್ ಬೀಸಲು ಮುಂದಾಗಿದ್ದಾರೆ. ಆ ಪ್ರಕಾರ ನವೆಂಬರ್ 30 ರಿಂದ ಆರಂಭವಾಗಿರುವ ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಶಿಖರ್ ಧವನ್ ಕಣಕ್ಕಿಲಿಯುತ್ತಿದ್ದಾರೆ.
2 / 6
ಡಿಸೆಂಬರ್ 2 ರಂದು ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಶಿಖರ್ ಧವನ್, ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಕರ್ನಾಲಿ ಯಾಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಕರ್ನಾಲಿ ಯಾಕ್ಸ್ ತಂಡ ಜನಕ್ಪುರ್ ಬೋಲ್ಟ್ಸ್ ತಂಡವನ್ನು ಎದುರಿಸಿತ್ತು.
3 / 6
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಲಿ ಯಾಕ್ಸ್ ತಂಡದ ಪರ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದಾಗ್ಯೂ, ನೇಪಾಳದ ಬ್ಯಾಟ್ಸ್‌ಮನ್ ದೇವ್ ಖಾನಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಧವನ್ಗೆ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
4 / 6
ಮೊದಲು ಬ್ಯಾಟ್ ಮಾಡಿದ ಕರ್ನಾಲ್ ಯಾಕ್ಸ್ ತಂಡ ಕೇವಲ 8 ರನ್ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದೇವ್ 1 ರನ್ ಗಳಿಸಿ ಔಟಾದರು. ಆ ನಂತರ ಬಂದ ಚಾಡ್ವಿಕ್ ವಾಲ್ಟನ್, ಧವನ್ ಜೊತೆಗೂಡಿ ಎರಡನೇ ವಿಕೆಟ್‌ಗೆ ಕೇವಲ 13 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಶಿಖರ್ ಧವನ್ ಎರಡನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು.
5 / 6
ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 14 ಎಸೆತಗಳನ್ನು ಎದುರಿಸಿದ್ದ ಶಿಖರ್ ಧವನ್ 14 ರನ್ ಗಳಿಸಿದರು. ಅಂದರೆ ತಮ್ಮ ಇನ್ನಿಂಗ್ಸ್‌ನಲ್ಲಿ ಧವನ್ 100 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು. ಈ ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಸ್ಟಾರ್ ಕ್ರಿಕೆಟಿಗರ ಪೈಕಿ ಶಿಖರ್ ಧವನ್ ಮೊದಲಿಗರಾಗಿದ್ದು, ಅವರ ಆಟದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಮೊದಲ ಪಂದ್ಯದಲ್ಲಿ ಧವನ್ಗೆ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ.
6 / 6
ಉಳಿದಂತೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಲ್ ಯಾಕ್ಸ್ ತಂಡ 20 ಓವರ್‌ಗಳಲ್ಲಿ 141 ರನ್ ಕಲೆಹಾಕಿತು. ತಂಡದ ಪರ ಗುಲ್ಶನ್ ಝಾ 27 ಎಸೆತಗಳಲ್ಲಿ 36 ರನ್ ಮತ್ತು ನಾಯಕ ಸೋಂಪಾಲ್ ಕಾಮಿ 13 ಎಸೆತಗಳಲ್ಲಿ 29 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಜನಕ್‌ಪುರ ಬೋಲ್ಟ್ಸ್ ತಂಡ ಕೇವಲ 15.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು.