Team India: ಇಷ್ಟರಲ್ಲೇ ತಂಡ ಸೇರಲಿದ್ದಾರೆ ಶ್ರೇಯಸ್, ಬುಮ್ರಾ; ಏಷ್ಯಾಕಪ್​ಗೂ ರಾಹುಲ್ ಅನುಮಾನ..!

|

Updated on: Jul 17, 2023 | 1:11 PM

Team India: ಸದ್ಯಕ್ಕೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದರೆ, ಕೆಎಲ್ ರಾಹುಲ್ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.

1 / 5
ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇನ್ನೇನೂ ಕೆಲವೇ ತಿಂಗಳಲ್ಲಿ ಎರಡು ಪ್ರಮುಖ ಪಂದ್ಯಾವಳಿಗಳನ್ನು ಆಡಬೇಕಿದೆ. ಹೀಗಾಗಿ ಬಲಿಷ್ಠ ತಂಡ ಕಟ್ಟುವುದು ಆಯ್ಕೆ ಮಂಡಳಿ ಮೇಲಿರುವ ಪ್ರಮುಖ ಜವಬ್ದಾರಿಯಾಗಿದೆ. ಈಗಾಗಲೇ ಇಂಜುರಿಯಿಂದಾಗಿ ಪ್ರಮುಖ ಟೂರ್ನಿಗಳಿಗೆ ಗೈರಾಗಿದ್ದ ಆಟಗಾರರು ಚೇತರಿಸಿಕೊಂಡು ಟೀಂ ಇಂಡಿಯಾಕ್ಕೆ ಮರಳುವ ತಯಾರಿಯಲ್ಲಿದ್ದಾರೆ.

2 / 5
ಸದ್ಯಕ್ಕೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದರೆ, ಕೆಎಲ್ ರಾಹುಲ್ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ. ಮಾಹಿತಿ ಪ್ರಕಾರ, ಶ್ರೇಯಸ್ ಏಷ್ಯಾಕಪ್ ಆಡುವ ಸಾಧ್ಯತೆಗಳಿವೆ. ಆದರೆ ಕೆಎಲ್ ರಾಹುಲ್ ಏಷ್ಯಾಕಪ್‌ಗೆ ಫಿಟ್ ಆಗುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.

3 / 5
ಪ್ರಸ್ತುತ ಎನ್​ಸಿಎನಲ್ಲಿರುವ ಅಯ್ಯರ್ ಬ್ಯಾಟಿಂಗ್ ಆರಂಭಿಸಿದ್ದರೂ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವುದು ಕಷ್ಟಕರವಾಗಿದೆ. ಆದರೆ ಆಗಸ್ಟ್ 31 ರಂದು ಪ್ರಾರಂಭವಾಗುವ ಏಷ್ಯಾ ಕಪ್‌ಗೆ ಮರಳುವ ಸಾಧ್ಯತೆಗಳಿವೆ. ಟೂರ್ನಿ ಆರಂಭಕ್ಕೆ ಇನ್ನು 45 ದಿನಗಳಿರುವುದರಿಂದ ಅಷ್ಟರಲ್ಲಿ ಅಯ್ಯರ್ ಪೂರ್ಣ ಫಿಟ್ ಆಗಲಿದ್ದಾರೆ ಎಂದು ವರದಿಯಾಗಿದೆ.

4 / 5
ಈ ಮೊದಲೇ ವರದಿ ಮಾಡಿದಂತೆ, ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಗೆ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಎನ್‌ಸಿಎಯಲ್ಲಿರುವ ಬುಮ್ರಾ ದಿನವೊಂದರಲ್ಲಿ 8 ರಿಂದ 10 ಓವರ್ ಬೌಲ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರು ಐರ್ಲೆಂಡ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

5 / 5
ಇನ್ನು ಕೆಎಲ್ ರಾಹುಲ್ ಬಗ್ಗೆ ಹೇಳಬೇಕೆಂದರೆ, ಈ ವಿಕೆಟ್ ಕೀಪರ್ ಬ್ಯಾಟರ್, ಇನ್ನೂ ಬ್ಯಾಟಿಂಗ್ ಅಭ್ಯಾಸವನ್ನು ಪ್ರಾರಂಭಿಸಿಲ್ಲ. ಹೀಗಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ರಾಹುಲ್ ಗೈರಾಗುವುದು ಖಚಿತ. ಆದರೆ ಏಷ್ಯಾಕಪ್ ವೇಳೆಗೆ ಅವರು ಚೇತರಿಸಿಕೊಳ್ಳಬಹುದೇ ಎಂಬುದು ಈಗ ಪ್ರಶ್ನೆಯಾಗಿದೆ.