ಟೀಮ್ ಇಂಡಿಯಾ ಸೇರಲು ರಾಹುಲ್-ಅಯ್ಯರ್ ಹರಸಾಹಸ: ಇಂದು ನಿರ್ಧಾರವಾಗುತ್ತಾ ಇವರ ಭವಿಷ್ಯ?
KL Rahul and Shreyas Iyer: ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಸೋಮವಾರ NCA ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ಇಬರಿಬ್ಬರ ಫಿಟ್ನೆಸ್ ಟೆಸ್ಟ್ ನಡೆಯಲಿದ್ದು, ಇದರಲ್ಲಿ ಪಾಸ್ ಆದರೆ ಏಷ್ಯಾಕಪ್ಗೆ ಆಯ್ಕೆ ಆಗಲಿದ್ದಾರೆ.
1 / 8
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ20 ಸರಣಿ ಸೋಲಿನ ಆಘಾತದಲ್ಲಿರುವ ಭಾರತ ಕ್ರಿಕೆಟ್ ತಂಡ ತವರಿಗೆ ಮರಳುತ್ತಿದೆ. ಇದರ ನಡುವೆ ಇಂದು ಏಷ್ಯಾಕಪ್ 2023 ಕ್ಕೆ ಭಾರತ ತಂಡ ಪ್ರಕಟವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ತಂಡಕ್ಕೆ ಮರಳಲು ಹರಸಾಹಸ ಪಡುತ್ತಿರುವ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಭವಿಷ್ಯ ಕೂಡ ಇಂದು ನಿರ್ಧಾರವಾಗಲಿದೆ.
2 / 8
ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಸೋಮವಾರ NCA ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ಇಬರಿಬ್ಬರ ಫಿಟ್ನೆಸ್ ಟೆಸ್ಟ್ ನಡೆಯಲಿದ್ದು, ಇದರಲ್ಲಿ ಪಾಸ್ ಆದರೆ ಏಷ್ಯಾಕಪ್ಗೆ ಆಯ್ಕೆ ಆಗಲಿದ್ದಾರೆ.
3 / 8
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಇಂದು ಅಥವಾ ಈ ವಾರ ಏಷ್ಯಾಕಪ್ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆಗಸ್ಟ್ ಅಂತ್ಯದಲ್ಲಿ ಶ್ರೀಲಂಕಾಕ್ಕೆ ತೆರಳುವ ಮೊದಲು ಆಟಗಾರರು ಶಿಬಿರಕ್ಕಾಗಿ ಆಗಸ್ಟ್ 23 ರಂದು NCA ಯಲ್ಲಿ ಎಲ್ಲ ಆಟಗಾರರು ಒಟ್ಟಾಗಲಿದ್ದಾರೆ. ಹೀಗಾಗಿ ಇಂದು ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ನಡೆಸುವ ಸಾಧ್ಯತೆ ಇದೆ.
4 / 8
ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಜೊತೆಯಾಗಿ ಬ್ಯಾಟಿಂಗ್ ಅಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ, ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಂಪೂರ್ಣ ಫಿಟ್ ಆಗಬೇಕಾದರೆ ಈ ಫಿಟ್ನೆಸ್ ಟೆಸ್ಟ್ನಲ್ಲಿ ಪಾಸ್ ಆಗಬೇಕು.
5 / 8
ರಾಹುಲ್ ಅವರು ಏಕದಿನದಲ್ಲಿ ಭಾರತದ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದಾರೆ. ಅಯ್ಯರ್ ಏಷ್ಯಾಕಪ್‌ನಲ್ಲಿ ಆಡಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದೆ. ಈ ಮೂಲಕ ಇವರಿಬ್ಬರು ವಿಶ್ವಕಪ್‌ಗೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಕಾಯುತ್ತಿದ್ದಾರೆ.
6 / 8
ಕೆಎಲ್ ರಾಹುಲ್ ಐಪಿಎಲ್ 2023 ರ ಸಂದರ್ಭದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು, ಹೀಗಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಮತ್ತೊಂದೆಡೆ, ಅಯ್ಯರ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು. ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದು ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಆಗಿದ್ದಾರೆ.
7 / 8
ಬಹುನಿರೀಕ್ಷಿತ ಏಷ್ಯಾಕಪ್ 2023 ಟೂರ್ನಿ ಆಗಸ್ಟ್ 30 ರಿಂದ ಶುರುವಾಗಲಿದೆ. ಈ ಬಾರಿಯ ಏಷ್ಯಾಕಪ್ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ.
8 / 8
ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ವಿಶೇಷ ಎಂದರೆ, ಭಾರತದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದ್ದು, ಈ ಪಂದ್ಯಗಳಿಗಾಗಿ ಉಳಿದ ತಂಡಗಳು ಲಂಕಾಗೆ ಆಗಮಿಸಲಿದೆ.