IND vs AFG: ಗಂಭೀರ್ ದಾಖಲೆ ಸರಿಗಟ್ಟಿ, ಧೋನಿ, ಗಂಗೂಲಿ ದಾಖಲೆ ಮುರಿದ ಗಿಲ್

Updated on: Jun 06, 2026 | 8:31 PM

Shubman Gill's Historic Test Century: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್​ಮನ್ ಗಿಲ್ ಅಮೋಘ 11ನೇ ಶತಕ ಸಿಡಿಸಿದ್ದಾರೆ. ಮೊದಲ ದಿನದಾಟದಲ್ಲೇ ಬಾರಿಸಿದ 103 ರನ್​ಗಳ ಈ ಶತಕ, ಗಿಲ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್​ನ 20ನೇ ಶತಕವಾಗಿದೆ. ಈ ಮೂಲಕ ಗೌತಮ್ ಗಂಭೀರ್ ದಾಖಲೆ ಸರಿಗಟ್ಟಿದ್ದಾರೆ. ಅಲ್ಲದೆ, ನಾಯಕನಾಗಿ 6 ಶತಕ ಪೂರೈಸಿದ ಗಿಲ್, ಧೋನಿ ಮತ್ತು ಸೌರವ್ ಗಂಗೂಲಿ ಅವರ ಟೆಸ್ಟ್ ನಾಯಕತ್ವದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

1 / 5
ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮೊದಲ ದಿನದಾಟದಲ್ಲೇ ಅಮೋಘ ಶತಕ ಬಾರಿಸಿದರು. ಗಿಲ್ ಕೇವಲ 138 ಎಸೆತಗಳಲ್ಲಿ ತಮ್ಮ 11ನೇ ಟೆಸ್ಟ್ ಶತಕವನ್ನು ಪೂರೈಸಿದರು. ನಾಯಕನಾಗಿ ಈ ಶತಕದ ಇನ್ನಿಂಗ್ಸ್‌ ಮೂಲಕ ತಂಡವನ್ನು ಬಲವಾದ ಸ್ಥಾನದಲ್ಲಿ ಇರಿಸಿದ್ದಲ್ಲದೆ, ಹಲವು ದಾಖಲೆಗಳನ್ನು ಮುರಿದರು (PC- PTI).

2 / 5
ಮೊದಲ ದಿನದಾಟದ ಅಂತ್ಯಕ್ಕೆ ಶುಭಮನ್ ಗಿಲ್ 143 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು 11 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಈ ಶತಕದೊಂದಿಗೆ, ಶುಭಮನ್ ಗಿಲ್ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಶತಕಗಳನ್ನು ಪೂರೈಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ (PC- PTI).

3 / 5
ಗೌತಮ್ ಗಂಭೀರ್ ಕೂಡ ತಮ್ಮ ವೃತ್ತಿಜೀವನದಲ್ಲಿ 20 ಶತಕಗಳನ್ನು ಬಾರಿಸಿದ್ದರು. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಬಾರಿಸಿದ್ದರೆ, ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 82 ಶತಕಗಳನ್ನು ಸಿಡಿಸಿದ್ದಾರೆ. ಪ್ರಸ್ತುತ ಈ ಪಟ್ಟಿಯಲ್ಲಿ ಗಿಲ್ 12ನೇ ಸ್ಥಾನದಲ್ಲಿದ್ದಾರೆ (PC- PTI).

4 / 5
ಇದರ ಜೊತೆಗೆ ಗಿಲ್​ಗೆ ನಾಯಕನಾಗಿ ಇದು ಆರನೇ ಶತಕವಾಗಿದೆ. ಈ ಮೈಲಿಗಲ್ಲು ತಲುಪುವ ಮೂಲಕ, ಅವರು ಭಾರತದ ಇಬ್ಬರು ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿದ್ದಾರೆ (PC- PTI).

5 / 5
ಧೋನಿ ಮತ್ತು ಗಂಗೂಲಿ ಇಬ್ಬರೂ ಟೆಸ್ಟ್ ನಾಯಕರಾಗಿ ತಲಾ ಐದು ಶತಕಗಳನ್ನು ಬಾರಿಸಿದ್ದಾರೆ. ಗಿಲ್ ಈಗ ಈ ಪಟ್ಟಿಯಲ್ಲಿ ಈ ಇಬ್ಬರು ಲೆಜೆಂಡರಿ ನಾಯಕರನ್ನು ಹಿಂದಿಕ್ಕಿದ್ದಾರೆ. ಏತನ್ಮಧ್ಯೆ, ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದು, ಅವರ ಹೆಸರಿನಲ್ಲಿ 20 ಟೆಸ್ಟ್ ಶತಕಗಳಿವೆ (PC- BCCI).

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us