Smriti Mandhana Boy Friend: ತನ್ನ ಬಾಯ್ಫ್ರೆಂಡ್ಗಿಂತಲೂ ಶ್ರೀಮಂತೆ ಸ್ಮೃತಿ ಮಂಧಾನ: ವರ್ಷಕ್ಕೆ ಕೋಟಿ ಕೋಟಿ ಹಣ
Smriti Mandhana Net Worth: ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ನಂತರ, ಸ್ಮೃತಿ ಮಂಧಾನ ತನ್ನ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರ ಫೋಟೋ ವೈರಲ್ ಆಗುತ್ತಿದೆ. ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಇಬ್ಬರು ಕೂಡ ದೊಡ್ಡ ಸೆಲೆಬ್ರಿಟಿ. ಇವರಿಗೆ ತಮ್ಮದೆ ಆದ ಫ್ಯಾನ್ಸ್ ಬಳಗವಿದ್ದು, ಕೋಟಿ ಕೋಟಿ ಹಣ ಕೂಡ ಸಂಪಾದಿಸುತ್ತಾರೆ.
1 / 6
ಸ್ಮೃತಿ ಮಂಧಾನ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ 2024 ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್ಗಳ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.
2 / 6
ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ನಂತರ, ಸ್ಮೃತಿ ಮಂಧಾನ ತನ್ನ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರ ಫೋಟೋ ವೈರಲ್ ಆಗುತ್ತಿದೆ. ಡಬ್ಲ್ಯುಪಿಎಲ್ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡು ಸ್ಮೃತಿ ಮಂಧಾನ ಅವರು ತನ್ನ ಬಾಯ್ ಫ್ರೆಂಡ್ ಪಲಾಶ್ ಮುಚ್ಚಲ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.
3 / 6
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಇಬ್ಬರು ಕೂಡ ದೊಡ್ಡ ಸೆಲೆಬ್ರಿಟಿ. ಇವರಿಗೆ ತಮ್ಮದೆ ಆದ ಫ್ಯಾನ್ಸ್ ಬಳಗವಿದ್ದು, ಕೋಟಿ ಕೋಟಿ ಹಣ ಕೂಡ ಸಂಪಾದಿಸುತ್ತಾರೆ. ವಿಶೇಷ ಎಂದರೆ, ಬಾಯ್ ಫ್ರೆಂಡ್ ಪಲಾಶ್ ಮುಚ್ಚಲ್‌ಗೆ ಹೋಲಿಸಿದರೆ ಸ್ಮೃತಿ ಮಂಧಾನ ಅವರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಪಲಾಶ್ ಮುಚ್ಚಲ್ಗಿಂತ ಸ್ಮೃತಿ ಹೆಚ್ಚು ಶ್ರೀಮಂತೆ.
4 / 6
ವರದಿಯೊಂದರ ಪ್ರಕಾರ, ಡಬ್ಲ್ಯುಪಿಎಲ್‌ನ ಅತ್ಯಂತ ದುಬಾರಿ ಆಟಗಾರ್ತಿ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಸ್ಮೃತಿ ಮಂಧಾನ ಅವರ ಒಟ್ಟು ನಿವ್ವಳ ಮೌಲ್ಯ ಬರೋಬ್ಬರಿ 33.29 ಕೋಟಿ ರೂ. ಆಗಿದೆ. ಮಂಧಾನ ಬಾಯ್ ಫ್ರೆಂಡ್, ಗಾಯಕ-ನಿರ್ದೇಶಕ ಪಲಾಶ್ ಮುಚ್ಚಲ್ ಅವರ ನಿವ್ವಳ ಮೌಲ್ಯವು 20 ರಿಂದ 30 ಕೋಟಿ ರೂ. ಎಂದು ಹೇಳಲಾಗಿದೆ.
5 / 6
ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವ ಜೊತೆಗೆ ದೊಟ್ಟ ಮಟ್ಟದ ಬಹುಮಾನವೂ ಸಿಕ್ಕಿತು. ಡಬ್ಲ್ಯುಪಿಎಲ್ ಗೆದ್ದಿದ್ದಕ್ಕಾಗಿ ಆರ್‌ಸಿಬಿ 6 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ. ಅಂತೆಯೆ ಸತತ ಎರಡನೇ ಋತುವಿನಲ್ಲಿ ಪ್ರಶಸ್ತಿ ವಂಚಿತ ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಟ್ರೋಫಿಯನ್ನೂ ಪಡೆದುಕೊಂಡಿದ್ದು, ಈ ತಂಡ 3 ಕೋಟಿ ರೂಪಾಯಿ ಬಹುಮಾನವನ್ನೂ ಪಡೆದುಕೊಂಡಿದೆ.
6 / 6
ಪಂದ್ಯ ಮುಗಿದ ನಂತರ, ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರಿಗೆ ವಿಶೇಷ ವಿಡಿಯೋ ಕರೆ ಮಾಡಿದ್ದಾರೆ. ಈ ಸಂದರ್ಭ ಬೃಹತ್ ಗೆಲುವು ಮತ್ತು ಕಪ್ ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.