Smriti Mandhana: ದಿ ಹಂಡ್ರೆಡ್​ನಲ್ಲಿ ಈ ದಾಖಲೆ ಬರೆದ ಮೊದಲ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ..!

Updated on: Aug 05, 2023 | 8:09 AM

Smriti Mandhana:

1 / 9
ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್‌ ಮಹಿಳಾ ಕ್ರಿಕೆಟ್​ ಲೀಗ್​​ನಲ್ಲಿ ಟೀಂ ಇಂಡಿಯಾದ ಸ್ಟಾರ್ ಓಪನರ್ ಮತ್ತು ವೈಟ್-ಬಾಲ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಶುಕ್ರವಾರ ನಡೆದ ವೆಲ್ಸ್ ಫೈರ್ ವಿರುದ್ಧದ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.

ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್‌ ಮಹಿಳಾ ಕ್ರಿಕೆಟ್​ ಲೀಗ್​​ನಲ್ಲಿ ಟೀಂ ಇಂಡಿಯಾದ ಸ್ಟಾರ್ ಓಪನರ್ ಮತ್ತು ವೈಟ್-ಬಾಲ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಶುಕ್ರವಾರ ನಡೆದ ವೆಲ್ಸ್ ಫೈರ್ ವಿರುದ್ಧದ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.

2 / 9

100 ಎಸೆತಗಳಲ್ಲಿ ಈ ಪಂದ್ಯಾವಳಿಯಲ್ಲಿ ಸದರ್ನ್ ಬ್ರೇವ್‌ ಪರ ಆಡುವ 27 ವರ್ಷದ ಎಡಗೈ ಬ್ಯಾಟರ್ ಸ್ಮೃತಿ, ಈ ಮಹಿಳಾ ಪಂದ್ಯಾವಳಿಯಲ್ಲಿ 500 ರನ್ ಕಲೆಹಾಕಿದ ಮೊದಲ ಆಟಗಾರ್ತಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

3 / 9

ಸತತ ಮೂರನೇ ಆವೃತ್ತಿಯಲ್ಲಿ ಬ್ರೇವ್ ತಂಡವನ್ನು ಪ್ರತಿನಿಧಿಸುತ್ತಿರುವ ಮಂಧಾನ, ಇದುವರೆಗೆ ಆಡಿರುವ 17 ಪಂದ್ಯಗಳಲ್ಲಿ ಒಟ್ಟು 503 ರನ್ ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2023 ರ ಆವೃತ್ತಿಯಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳೊಂದಿಗೆ ಸ್ಮೃತಿ 78 ಎಸೆತಗಳಲ್ಲಿ 125 ರನ್ ಸಿಡಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

4 / 9

ಇನ್ನು 2022 ರ ಆವೃತ್ತಿಯಲ್ಲಿ ಎಂಟು ಪಂದ್ಯಗಳನ್ನಾಡಿದ್ದ ಸ್ಮೃತಿ 139 ಎಸೆತಗಳನ್ನು ಎದುರಿಸಿ ಒಟ್ಟು 211 ರನ್ ಕಲೆಹಾಕಿದ್ದರು.

5 / 9

ಹಾಗೆಯೇ 2021 ರ ಆವೃತ್ತಿಯಲ್ಲೂ 125 ಎಸೆತಗಳಲ್ಲಿ ಒಟ್ಟು 167 ರನ್ ಸಿಡಿಸಿದ್ದರು. ಸ್ಮೃತಿ ಹೊರತಾಗಿ ಮಹಿಳಾ ದಿ ಹಂಡ್ರೆಂಡ್​ ಲೀಗ್​ನಲ್ಲಿ ಮತ್ತ್ಯಾವ ಆಟಗಾರ್ತಿಯೂ 500 ರನ್​ಗಳ ದಾಖಲೆ ಬರೆದಿಲ್ಲ ಎಂಬುದು ವಿಶೇಷ.

6 / 9

ದಿ ಹಂಡ್ರೆಡ್‌ನಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆಯ ಜೊತೆಗೆ, ಮಂಧಾನ ಸ್ಪರ್ಧೆಯ ಇತಿಹಾಸದಲ್ಲಿ ಐದು ಅರ್ಧ ಶತಕಗಳನ್ನು ಸಿಡಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

7 / 9

ಇನ್ನು ವೆಲ್ಸ್ ಫೈರ್ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ ಸ್ಮೃತಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರ್ತಿಯರ ಪೈಕಿ 4 ಅರ್ಧಶತಕ ಸಿಡಿಸಿದ್ದ ಭಾರತ ತಂಡದ ಸಹ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅವರ ದಾಖಲೆಯನ್ನು ಮುರಿದರು.

8 / 9

ಇನ್ನು ಸದರ್ನ್ ಬ್ರೇವ್‌ ಮತ್ತು ವೆಲ್ಸ್ ಫೈರ್ ತಂಡಗಳ ನಡುವಣ ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಲ್ಸ್ ಫೈರ್ ತಂಡ 100 ಎಸೆತಗಳಲ್ಲಿ 165 ರನ್ ಕಲೆಹಾಕಿತು. ತಂಡದ ಪರ ಹೇಲಿ ಮ್ಯಾಥ್ಯೂಸ್ 38 ಎಸೆತಗಳಲ್ಲಿ 65 ರನ್ ಬಾರಿಸಿದರು.

9 / 9

ಇನ್ನು 166 ರನ್​ಗಳ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್‌ ತಂಡ ಸ್ಮೃತಿ ಅವರ ಅಜೇಯ 70 ರನ್ ಹಾಗೂ ಡ್ಯಾನಿ ವ್ಯಾಟ್ ಅವರ 67 ರನ್​ಗಳ ಇನ್ನಿಂಗ್ಸ್​ನ ಹೊರತಾಗಿಯೂ ಅಂತಿಮವಾಗಿ 161 ರನ್ ಕಲೆಹಾಕಿ 5 ರನ್​ಗಳಿಂದ ಸೋಲೊಪ್ಪೊಕೊಂಡಿತು.

Loading...
Unable to load recommendations.
Follow Us