
ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಯುವ ಬ್ಯಾಟ್ಸ್‌ಮನ್ ಸೋನಲ್ ದಿನುಷಾ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಫಾಲೋ-ಆನ್‌ನ ಒತ್ತಡದ ನಡುವೆಯೂ ಅಚಲ ಆತ್ಮವಿಶ್ವಾಸದಿಂದ ಆಡಿದ ದಿನುಷಾ, ಒಂದೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸಿದರು. ಈ ಐತಿಹಾಸಿಕ ಶತಕಗಳೊಂದಿಗೆ ದಾಖಲೆಗಳನ್ನು ಸೃಷ್ಟಿಸಿದರು(PC-PTI).
ಭಾರತ ವಿರುದ್ಧದ ಒಂದೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಮೂರನೇ ಶ್ರೀಲಂಕಾದ ಬ್ಯಾಟ್ಸ್‌ಮನ್ ಸೋನಲ್ ದಿನುಷ್. ಇದಕ್ಕೂ ಮೊದಲು, ದಲೀಪ್ ಮೆಂಡಿಸ್ (105, 105) 1982 ರ ಚೆನ್ನೈ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು. ನಂತರ 1997 ರಲ್ಲಿ, ಅರವಿಂದ ಡಿ ಸಿಲ್ವಾ (146, 120) ಕೊಲಂಬೊದ ಇದೇ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು(PC-PTI).
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಪರ ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ 8ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೋನಾಲ್ ಪಾತ್ರರಾಗಿದ್ದಾರೆ. ಈ ಹಿಂದೆ ಅರವಿಂದ ಡಿ ಸಿಲ್ವಾ (ಎರಡು ಬಾರಿ), ಕುಮಾರ್ ಸಂಗಕ್ಕಾರ (ಎರಡು ಬಾರಿ), ದಲಿಪ್ ಮೆಂಡಿಸ್, ಅಸೆಂಕಾ ಗುರುಸಿಂಹ, ತಿಲಕರತ್ನೆ ದಿಲ್ಶಾನ್, ಧನಂಜಯ ಡಿ ಸಿಲ್ವಾ ಮತ್ತು ಕಮಿಂದು ಮೆಂಡಿಸ್ ಮಾತ್ರ ಈ ಅಪರೂಪದ ಸಾಧನೆ ಮಾಡಿದ್ದರು(PC-PTI).
ಇದರ ಜೊತೆಗೆ ದಿನುಷಾ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3 ಶತಕಗಳನ್ನು ಸಿಡಿಸಿದ 8 ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಅರವಿಂದ ಡಿ ಸಿಲ್ವಾ ಈ ಹಿಂದೆ 1997 ರಲ್ಲಿ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಎರಡು ಬಾರಿ ಈ ಸಾಧನೆ ಮಾಡಿದ್ದರು. ಅದಾದ ನಂತರ, ಜಾಕ್ವೆಸ್ ಕಾಲಿಸ್ (2007), ಹಾಶಿಮ್ ಆಮ್ಲಾ (2010), ಕುಮಾರ್ ಸಂಗಕ್ಕಾರ (2013), ಯೂನಿಸ್ ಖಾನ್ (2014), ಮಾರ್ನಸ್ ಲ್ಯಾಬುಸ್ಚಾಗ್ನೆ (2022), ಕೇನ್ ವಿಲಿಯಮ್ಸನ್ (2024) ಈ ದಾಖಲೆ ನಿರ್ಮಿಸಿದ್ದರು(PC-PTI).
ಫಾಲೋ ಆನ್ ಹೇರಿದಾಗ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮೂರನೇ ಆಟಗಾರ ದಿನುಷಾ. ಹಾಗೆಯೇ ಟೆಸ್ಟ್ ಇತಿಹಾಸದಲ್ಲಿ ಭಾರತದ ವಿರುದ್ಧ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಕೂಡ ದಿನುಷಾ. ಅವರಿಗಿಂತ ಮೊದಲು, ವಿಜಯ್ ಹಜಾರೆ ಮತ್ತು ಆಂಡಿ ಫ್ಲವರ್ ಮಾತ್ರ ಈ ಸಾಧನೆ ಮಾಡಿದ್ದರು. ವಿಜಯ್ ಹಜಾರೆ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರೆ, ಆಂಡಿ ಫ್ಲವರ್ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು(PC-PTI).