
ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ, ಕೆಲವು ಯುವ ಆಟಗಾರರು ತಮ್ಮ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಅದರಂತೆ ಶ್ರೀಲಂಕಾ ತಂಡದ ಪರ ಸ್ಥಿರ ಪ್ರದರ್ಶನ ನೀಡಿರುವ ಏಕೈಕ ಆಟಗಾರನೆಂದರೆ ಅದು 25 ವರ್ಷದ ಬ್ಯಾಟ್ಸ್‌ಮನ್ ಸೋನಲ್ ದಿನುಷಾ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ದಿನುಷಾ ತಮ್ಮ ಅತ್ಯುತ್ತಮ ತಂತ್ರ ಮತ್ತು ತಾಳ್ಮೆಯ ಬ್ಯಾಟಿಂಗ್ ಮೂಲಕ ಪರಿಣಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ(PC-PTI).
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ್ದ ಸೋನಲ್ ದಿನುಷಾ ಸ್ಮರಣೀಯ ಶತಕ ಬಾರಿಸಿದ್ದರು. ಆ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ 84 ರನ್ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಪ್ರದರ್ಶನದ ಹೊರತಾಗಿಯೂ ದಿನುಷಾಗೆ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿರಲಿಲ್ಲ(PC-PTI).
ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಿನುಷಾ ಮತ್ತೊಂದು ಅದ್ಭುತ ಶತಕ ಬಾರಿಸಿ 103 ರನ್ಗಳ ಇನ್ನಿಂಗ್ಸ್ ಆಡಿದರು. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ, ನಾಲ್ಕನೇ ದಿನದಾಟದಂತ್ಯಕ್ಕೆ 37 ಎಸೆತಗಳಲ್ಲಿ 7 ರನ್ ಗಳಿಸಿ ಅಜೇಯರಾಗಿ ಉಳಿದಿರುವ ದಿನುಷಾ 5ನೇ ದಿನದಂದು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ(PC-PTI).
ಪ್ರಸ್ತುತ ಸರಣಿಯಲ್ಲಿ ದಿನುಷಾ ಮೊದಲ ಮೂರು ಟೆಸ್ಟ್ ಇನ್ನಿಂಗ್ಸ್ಗಲ್ಲಿ 100, 84 ಮತ್ತು 103 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಈ ಮೂರು ಇನ್ನಿಂಗ್ಸ್‌ಗಳಲ್ಲಿ 80 ಕ್ಕೂ ಹೆಚ್ಚು ರನ್ ಬಾರಿಸುವ ಮೂಲಕ, ದಿನುಷಾ ಭಾರತದ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ(PC-PTI).
ಇದಕ್ಕೂ ಮೊದಲು, ಪಾಕಿಸ್ತಾನದ ಜಹೀರ್ ಅಬ್ಬಾಸ್ ಮತ್ತು ಇಂಗ್ಲೆಂಡ್‌ನ ಎವರ್ಟನ್ ವೀಕ್ಸ್ ಈ ಸಾಧನೆ ಮಾಡಿದರು. ಅಬ್ಬಾಸ್ 176, 96 ಮತ್ತು 235* ರನ್ ಬಾರಿಸಿದ್ದರೆ, ವೀಕ್ಸ್ 128, 194 ಮತ್ತು 162 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ದಿನುಷಾ ಈ ಸಾಧನೆ ಮಾಡುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ(PC-PTI).