
ವಿಶ್ವ ಕ್ರಿಕೆಟ್‌ನ ಯಾವುದೇ ಯುವ ಬ್ಯಾಟರ್‌ಗೆ ಟೀಮ್ ಇಂಡಿಯಾದ ಬಲಿಷ್ಠ ಬೌಲಿಂಗ್ ಪಡೆಯನ್ನು ಎದುರಿಸುವುದೆಂದರೆ ಅದೊಂದು ಅಗ್ನಿಪರೀಕ್ಷೆ. ಆದರೆ, ಶ್ರೀಲಂಕಾದ 25 ವರ್ಷದ ಯುವ ಆಲ್-ರೌಂಡರ್ ಸೋನಲ್ ದಿನುಷಾ ಪಾಲಿಗೆ ಭಾರತದ ಬೌಲಿಂಗ್ ತೀರಾ ಸುಲಭವಾದಂತೆ ಕಾಣುತ್ತಿದೆ! ಇದಕ್ಕೆ ಸಾಕ್ಷಿ ಕಳೆದ 4 ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿದ ರನ್ ರಾಶಿ. (PC: Getty Images)
ಭಾರತದ ವಿರುದ್ಧ ಆಡಿದ ತನ್ನ ಮೊದಲ ನಾಲ್ಕೂ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಸತತವಾಗಿ 50ಕ್ಕೂ ಹೆಚ್ಚು ರನ್ ಗಳಿಸಿರುವ ಸೋನಲ್ ದಿನುಷಾ, ಟೆಸ್ಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ವಿರುದ್ಧ ಈ ಅಪರೂಪದ ಸಾಧನೆ ಮಾಡಿದ 'ಏಷ್ಯಾದ ಮೊದಲ' ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. (PC: Getty Images)
ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 100 ಹಾಗೂ 84 ರನ್ ಬಾರಿಸಿದ್ದ ದಿನುಷಾ, ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 103 ರನ್ಗಳ ಶತಕ ಸಿಡಿಸಿದ್ದರು. ಇದೀಗ ದ್ವಿತೀಯ ಇನಿಂಗ್ಸ್ನಲ್ಲೂ 50+ ಸ್ಕೋರ್ಗಳಿಸುವ ಮೂಲಕ ಬ್ಯಾಕ್ ಟು ಬ್ಯಾಕ್ 4 ಇನಿಂಗ್ಸ್ಗಳಲ್ಲಿ 50 ಕ್ಕಿಂತ ಹೆಚ್ಚು ರನ್ ಬಾರಿಸಿದ ವಿಶೇಷ ದಾಖಲೆ ನಿರ್ಮಿಸಿದ್ದಾರೆ. (PC: Getty Images)
ಈ ದಾಖಲೆಯೊಂದಿಗೆ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಇತಿಹಾಸದಲ್ಲೇ ಸತತ 4 ಇನ್ನಿಂಗ್ಸ್‌ಗಳಲ್ಲಿ 50+ ಸ್ಕೋರ್ ಗಳಿಸಿದ ಏಷ್ಯಾದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಪಾಕಿಸ್ತಾನದ ಝಹೀರ್ ಅಬ್ಬಾಸ್ ಅವರ ಹೆಸರಿನಲ್ಲಿತ್ತು. 1978ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸತತ 3 ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್ ಗಳಿಸಿ ಈ ದಾಖಲೆ ನಿರ್ಮಿಸಿದ್ದರು. (PC: Getty Images)
ಇದೀಗ ಸೋನಲ್ ದಿನುಷಾ ಟೀಮ್ ಇಂಡಿಯಾ ವಿರುದ್ಧ ಸತತ 4 ಇನಿಂಗ್ಸ್ಗಳಲ್ಲೂ 50+ ಸ್ಕೋರ್ ಗಳಿಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಬ್ಯಾಟರ್ ಹಾಗೂ ಶ್ರೀಲಂಕಾದ ಏಕೈಕ ದಾಂಡಿಗ ಎನಿಸಿಕೊಂಡಿದ್ದಾರೆ. (PC: Getty Images)