ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನ; ಬೆಲೆ ಎಷ್ಟು ಲಕ್ಷ ಗೊತ್ತಾ?

|

Updated on: Feb 11, 2024 | 3:14 PM

Sourav Ganguly: ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳ್ಳತನವಾಗಿದೆ. ಹೀಗಾಗಿ ಕಳುವಾಗಿರುವ ಮೊಬೈಲ್ ಅನ್ನು ಪತ್ತೆ ಮಾಡುವಂತೆ ಗಂಗೂಲಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

1 / 7
ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ದುಬಾರಿ ಬೆಲೆಯ ಮೊಬೈಲ್ ಫೋನ್ ಕಳ್ಳತನವಾಗಿದೆ. ಹೀಗಾಗಿ ಕಳುವಾಗಿರುವ ಮೊಬೈಲ್ ಅನ್ನು ಪತ್ತೆ ಮಾಡುವಂತೆ ಗಂಗೂಲಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

2 / 7
ಕಳುವಾಗಿರುವ ಮೊಬೈಲ್​ನಲ್ಲಿ ಬಹುಮುಖ್ಯವಾದ ವೈಯಕ್ತಿಕ ಡೇಟಾಗಳಿದ್ದು, ಅವುಗಳನ್ನು ರಕ್ಷಿತವಾಗಿರಿಸಲು ಗಂಗೂಲಿ ಠಾಕುರ್ಪುಕೂರ್ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಶನಿವಾರ ಬೆಳಿಗ್ಗೆ 11.30 ರ ಸುಮಾರಿಗೆ ಗಂಗೂಲಿ ತಮ್ಮ ಫೋನ್ ಅನ್ನು ಕೊನೆಯದಾಗಿ ನೋಡಿದ್ದರು.

3 / 7
ಆ ನಂತರ ಮೊಬೈಲ್ ಕಳ್ಳತನವಾಗಿದೆ. ಪ್ರಸ್ತುತ ಗಂಗೂಲಿ ಅವರ ಬೆಹಲಾ ಚೌರಸ್ತಾದಲ್ಲಿರುವ ಮನೆಗೆ ಬಣ್ಣ ಬಳಿಯಲಾಗುತ್ತಿದೆ. ಹೀಗಾಗಿ ಪೊಲೀಸರು ಬಣ್ಣ ಬಳಿಯುವ ಕೆಲಸಕ್ಕೆ ಬಂದಿದ್ದ ಕೆಲವು ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

4 / 7
ಪ್ರಸ್ತುತ ಗಂಗೂಲಿ ಕಳೆದುಕೊಂಡಿರುವ ಮೊಬೈಲ್ 1.6 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಎಂದು ವರದಿಯಾಗಿದೆ. ಆದರೆ ಗಂಗೂಲಿಗೆ ಮೊಬೈಲ್ ಕಳುವಾಗಿರುವುದಕ್ಕಿಂತ ಅದರಲ್ಲಿರುವ ವೈಯಕ್ತಿಕ ಡೇಟಾ ಸೋರಿಕೆಯಾಗಬಹುದೆಂಬ ಚಿಂತೆ ಕಾಡಲಾರಂಭಿಸಿದೆ.

5 / 7
ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಗಂಗೂಲಿ, ನನ್ನ ಫೋನ್ ಮನೆಯಿಂದ ಕಳ್ಳತನವಾಗಿದೆ. ನಾನು ಜನವರಿ 19 ರಂದು ಬೆಳಿಗ್ಗೆ 11:30 ರ ಸುಮಾರಿಗೆ ಫೋನ್ ಅನ್ನು ಕೊನೆಯದಾಗಿ ನೋಡಿದೆ. ಆ ನಂತರ ಫೋನ್ ಮಿಸ್ ಆಗಿದೆ. ಹೀಗಾಗಿ ನಾನು ಹಲವು ಕಡೆ ಫೋನ್ ಹುಡುಕಿದೆ ಆದರೆ ಅದು ಸಿಗಲಿಲ್ಲ.

6 / 7
ನನ್ನ ಫೋನ್ ಕಳೆದುಹೋಗಿರುವುದು ನನ್ನನ್ನು ಚಿಂತೆಗೀಡುಮಾಡಿದೆ. ಏಕೆಂದರೆ ಆ ಫೋನ್​ನಲ್ಲಿ ಹಲವರ ನಂಬರ್​ಗಳಿವೆ. ಹಾಗೆಯೇ ವೈಯಕ್ತಿಕ ಮಾಹಿತಿಯೊಂದಿಗೆ ಬ್ಯಾಂಕ್ ಅಕೌಂಟ್​ ಮಾಹಿತಿಯೂ ಅದರಲ್ಲಿದೆ. ಹೀಗಾಗಿ ನನ್ನ ಫೋನ್ ಅನ್ನು ಬೇಗ ಪತ್ತೆಹಚ್ಚಬೇಕೆಂದು ಗಂಗೂಲಿ, ಪೊಲೀಸರ ಬಳಿ ವಿನಂತಿಸಿದ್ದಾರೆ.

7 / 7
ತನ್ನ ಫೋನ್‌ನಲ್ಲಿ ಹಲವು ವೈಯಕ್ತಿಕ ಡೇಟಾ ಇದ್ದು, ಅದು ಸೋರಿಕೆಯಾದಲ್ಲಿ ನನಗೆ ಸಮಸ್ಯೆಗಲಿದೆ ಹೀಗಾಗಿ ಮೊಬೈಲ್ ಅನ್ನು ಬೇಗನೇ ಪತ್ತೆ ಹಚ್ಚಿ ಎಂದು ಪೊಲೀಸ್​ ಠಾಣೆಯಲ್ಲಿ ಗಂಗೂಲಿ ದೂರು ನೀಡಿದ್ದಾರೆ. ದೂರಿನನ್ವಯ ಕೋಲ್ಕತ್ತಾ ಪೊಲೀಸರು ಫೋನ್ ಪತ್ತೆ ಹಚ್ಚವು ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಇದುವರೆಗೆ ಕಳ್ಳ ಪತ್ತೆಯಾಗಿಲ್ಲ.

Published On - 3:12 pm, Sun, 11 February 24