
2026 ರ ಮಹಿಳಾ ಟಿ20 ವಿಶ್ವಕಪ್‌ನ 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 136 ರನ್ ಕಲೆಹಾಕಿತು. ಇತ್ತ ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ರಾಧಾ ಯಾದವ್ 3 ವಿಕೆಟ್‌ಗಳನ್ನು ಪಡೆದರೆ, ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ ಶ್ರೀ ಚರಣಿ ಈ ಪಂದ್ಯದಲ್ಲೂ 2 ವಿಕೆಟ್‌ಗಳನ್ನು ಪಡೆದರು (PC- BCCI Women X).

ಬಾಂಗ್ಲಾದೇಶ ಇನ್ನಿಂಗ್ಸ್ನ 20 ನೇ ಓವರ್ನಲ್ಲಿ ಶ್ರೀ ಚರಣಿಗೆ ಎರಡು ವಿಕೆಟ್ಗಳು ಸಿಕ್ಕವು. ಆದಾಗ್ಯೂ ಮೊದಲನೇ ಓವರ್ನಲ್ಲೇ ಚರಣಿಗೆ ವಿಕೆಟ್ ಸಿಗಬೇಕಿತ್ತು. ಆದರೆ ತಂಡದ ಕಳಪೆ ಫಿಲ್ಡಿಂಗ್ನಿಂದ ಆ ಅವಕಾಶ ಕೈತಪ್ಪಿತು. ಆದಾಗ್ಯೂ ಈ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ಮಹಿಳಾ ಟಿ20 ವಿಶ್ವಕಪ್‌ನ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡರು (PC- BCCI Women X).

2020 ರ ಟಿ20 ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅವರ ದಾಖಲೆಯನ್ನು ಶ್ರೀ ಚರಣಿ ಮುರಿದರು. ಕುತೂಹಲಕಾರಿಯಾಗಿ, ಈ ಪಂದ್ಯಾವಳಿಯಲ್ಲಿ ಶ್ರೀ ಚರಣಿ ಅವರ ಬೌಲಿಂಗ್‌ನಲ್ಲಿ ನಾಲ್ಕು ಕ್ಯಾಚ್‌ಗಳು ಕೈಬಿಡಲ್ಪಟ್ಟವು. ಒಂದು ವೇಳೆ ಈ ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದರೆ, ಅವರು ವಿಶ್ವ ದಾಖಲೆಯನ್ನು ಮುರಿಯುತ್ತಿದ್ದರು (PC- BCCI Women X).

ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಒಂದೇ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅವರು ಒಂದು ಆವೃತ್ತಿಯಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರು. ಶ್ರೀ ಚರಣಿ ಪ್ರಸ್ತುತ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಡ್ರಾಪ್ ಮಾಡದಿದ್ದರೆ, ಶ್ರೀ ಚರಣಿ ಅವರ ವಿಕೆಟ್ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದವು (PC- BCCI Women X).

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 136 ರನ್ ಕಲೆಹಾಕಿತು. ಭಾರತದ ಪರ ರಾಧಾ ಯಾದವ್ ಮೂರು ವಿಕೆಟ್ ಪಡೆದರು. ಶ್ರೀ ಚರಣಿ ಎರಡು ವಿಕೆಟ್ ಪಡೆದರು. ನಂದಿನಿ ಶರ್ಮಾ ಮತ್ತು ರೇಣುಕಾ ಸಿಂಗ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು (PC- BCCI Women X).