IND vs NZ: ವಿಶೇಷ ಶತಕ ಪೂರೈಸಿ ಬಾಬರ್ ದಾಖಲೆ ಮುರಿದ ಸೂರ್ಯಕುಮಾರ್

Updated on: Jan 21, 2026 | 9:22 PM

Suryakumar Yadav's Historic 100th T20I: ಭಾರತ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಒಂದು ವರ್ಷದಿಂದ ಫಾರ್ಮ್ ಕೊರತೆ ಎದುರಿಸುತ್ತಿದ್ದರೂ, 100ನೇ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಅವರು ಕೇವಲ 1174 ದಿನಗಳಲ್ಲಿ ಈ ಸಾಧನೆ ಮಾಡಿ, ಬಾಬರ್ ಅಜಮ್ ಅವರ ವೇಗದ 100 ಟಿ20 ಪಂದ್ಯಗಳ ದಾಖಲೆ ಮುರಿದಿದ್ದಾರೆ. ಈ ಮೂಲಕ ರೋಹಿತ್, ಕೊಹ್ಲಿ ನಂತರ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಎನಿಸಿದ್ದಾರೆ.

1 / 5
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳೆದೊಂದು ವರ್ಷದಿಂದ ಉತ್ತಮ ಫಾರ್ಮ್​ನಲಿಲ್ಲ. ಅವರ ಬ್ಯಾಟ್​ನಿಂದ ಕಳೆದೊಂದು ವರ್ಷದಲ್ಲಿ ಒಂದೇ ಒಂದು ಅರ್ಧಶತಕ ಸಿಡಿದಿಲ್ಲ. ಆಗಿದ್ದರೂ ಅವರಿಗೆ ತಂಡದಲ್ಲಿ ಸತತ ಅವಕಾಶಗಳು ಸಿಗುತ್ತಿವೆ. ಅದಕ್ಕೆ ಕಾರಣ ಅವರಿಗೆ ತಂಡದ ನಾಯಕತ್ವವಹಿಸಿರುವುದು. ಈ ಮಾತನ್ನು ಹಲವಾರು ಪಂಡಿತರು ಹಲವು ಬಾರಿ ಹೇಳಿದ್ದಾರೆ.

2 / 5
ಇದೀಗ 2026 ರ ವರ್ಷವನ್ನಾದರೂ ಸೂರ್ಯಕುಮಾರ್ ಯಾದವ್ ಉತ್ತಮವಾಗಿ ಆರಂಭಿಸುತ್ತಾರೆ ಎಂದು ಎಲ್ಲರೂ ಆಶಿಸಿದ್ದರು. ಅದರಂತೆ ಈ ಪಂದ್ಯದಲ್ಲಿ ಸೂರ್ಯ ಉತ್ತಮ ಆರಂಭ ಪಡೆದುಕೊಂಡರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಸೂರ್ಯ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್ ಬಾರಿಸಿದರು.

3 / 5
ಬ್ಯಾಟ್ಸ್‌ಮನ್ ಆಗಿ ಸೂರ್ಯನಿಗೆ ಈ ಪಂದ್ಯದಲ್ಲಿ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಆಟಗಾರನಾಗಿ ಸೂರ್ಯ ಈ ಪಂದ್ಯದಲ್ಲಿ ಮೈಲಿಗಲ್ಲು ದಾಟಿದರು. ವಾಸ್ತವವಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಇದು ಸೂರ್ಯಕುಮಾರ್​ಗೆ 100 ನೇ ಪಂದ್ಯವಾಗಿತ್ತು. ಈ ಮೂಲಕ ಸೂರ್ಯ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಂತರ 100 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

4 / 5
ಈ ಮೂಲಕ ಸೂರ್ಯಕುಮಾರ್ ಯಾದವ್,  ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ದಾಖಲೆಯನ್ನು ಮುರಿದರು. ಈ ಹಿಂದೆ ಪೂರ್ಣ ಸದಸ್ಯ ರಾಷ್ಟ್ರದ ಪರ ವೇಗವಾಗಿ 100 ಅಂತರರಾಷ್ಟ್ರೀಯ ಟಿ20  ಪಂದ್ಯಗಳನ್ನು ಆಡಿದ ದಾಖಲೆಯನ್ನು ಬಾಬರ್ ಆಝಂ ನಿರ್ಮಿಸಿದ್ದರು. ಈಗ ಈ ದಾಖಲೆ ಸೂರ್ಯಕುಮಾರ್ ಪಾಲಾಗಿದೆ.

5 / 5
ಬಾಬರ್ ಆಝಂ 100 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು 2410 ದಿನಗಳನ್ನು ತೆಗೆದುಕೊಂಡಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಕೇವಲ 1174 ದಿನಗಳಲ್ಲಿ ಈ ಮೈಲಿಗಲ್ಲು ಪೂರ್ಣಗೊಳಿಸಿದ್ದಾರೆ. ಅಂದರೆ, ಬಾಬರ್​ಗಿಂತ 636 ಕಡಿಮೆ ದಿನಗಳನ್ನು ಸೂರ್ಯ ತೆಗೆದುಕೊಂಡಿದ್ದಾರೆ.