T20 World Cup 2024: ಭಾರತ- ಪಾಕ್ ಪಂದ್ಯ ನಡೆದ ನ್ಯೂಯಾರ್ಕ್ ಕ್ರೀಡಾಂಗಣ ನೆಲಸಮ! ಕಾರಣವೇನು ಗೊತ್ತಾ?
T20 World Cup 2024: ಬರೋಬ್ಬರಿ 30 ಮಿಲಿಯನ್ ಡಾಲರ್ ಅಂದರೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾಡ್ಯುಲರ್ ಕ್ರೀಡಾಂಗಣವನ್ನು ಕೇವಲ 106 ದಿನಗಳಲ್ಲಿ ಕಟ್ಟಲಾಗಿತ್ತು. ಆದರೆ, ಕೇವಲ 8 ಟಿ20 ವಿಶ್ವಕಪ್ ಪಂದ್ಯಗಳಿಗೆ ಬಳಕೆಯಾಗಿದ್ದ ಈ ಮೈದಾನವನ್ನು ಇದೀಗ ಕೆಡವಲಾಗುತ್ತಿದೆ.
1 / 10
9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಕ್ರಿಕೆಟ್ಗೆ ಹೆಚ್ಚು ಆಸಕ್ತಿ ತೋರದ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಈ ಕಾರಣದಿಂದಾಗಿ ನ್ಯೂಯಾರ್ಕ್ನಲ್ಲಿ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಮಾಡ್ಯುಲರ್ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲಾಗಿತ್ತು.
2 / 10
ಬರೋಬ್ಬರಿ 30 ಮಿಲಿಯನ್ ಡಾಲರ್ ಅಂದರೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾಡ್ಯುಲರ್ ಕ್ರೀಡಾಂಗಣವನ್ನು ಕೇವಲ 106 ದಿನಗಳಲ್ಲಿ ಕಟ್ಟಲಾಗಿತ್ತು. ಆದರೆ, ಕೇವಲ 8 ಟಿ20 ವಿಶ್ವಕಪ್ ಪಂದ್ಯಗಳಿಗೆ ಬಳಕೆಯಾಗಿದ್ದ ಈ ಮೈದಾನವನ್ನು ಇದೀಗ ಕೆಡವಲಾಗುತ್ತಿದೆ.
3 / 10
ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಇರಾದೆಯಲ್ಲಿದ್ದ ಐಸಿಸಿ, ಈ ವರ್ಷದ ಜನವರಿಯಲ್ಲಿ ನ್ಯೂಯಾರ್ಕ್ನಲ್ಲಿ 34,000 ಆಸನಗಳ ಮಾಡ್ಯುಲರ್ ಸ್ಟೇಡಿಯಂ ನಿರ್ಮಾಣವನ್ನು ಕೈಗೆತ್ತಿಕೊಂಡಿತ್ತು. ಅದರಂತೆ ಕೇವಲ 106 ದಿನಗಳಲ್ಲಿ ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಸ್ಟೇಡಿಯಂ ಹೆಸರಿನಲ್ಲಿ ನೂತನ ತಂತ್ರಜ್ಞಾನದ ಸುಸಜ್ಜೀತ ಕ್ರೀಡಾಂಗಣವನ್ನು ನಿರ್ಮಿಸಿಲಾಗಿತ್ತು.
4 / 10
ಈ ಮಾಡ್ಯುಲರ್ ಸ್ಟೇಡಿಯಂನ ವಿಶೇಷತೆಯೆಂದರೆ ಈ ಮೈದಾನ ಅದರ ಪಿಚ್, ಸ್ಟ್ಯಾಂಡ್ ಇತ್ಯಾದಿಗಳನ್ನು ಈ ಪಂದ್ಯಾವಳಿಗಾಗಿಯೇ ನಿರ್ಮಿಸಲಾಗಿತ್ತು. ಹಾಗಾಗಿ ಈ ಮಾಡ್ಯುಲರ್ ಕ್ರೀಡಾಂಗಣದ ನಿರ್ಮಾಣದಲ್ಲಿ ಅಲ್ಯೂಮಿನಿಯಂ ಮತ್ತು ಉಕ್ಕನ್ನು ಬಳಕೆ ಮಾಡಲಾಗಿತ್ತು.
5 / 10
ಸಮಯದ ಕೊರತೆ ಮತ್ತು ಪರಿಸರ ಸುಸ್ಥಿರತೆ ಎರಡು ಪ್ರಮುಖ ಕಾರಣಗಳಿಂದ ಈ ಮಾಡ್ಯುಲರ್ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿತ್ತು. ಏಕೆಂದರೆ ಟಿ20 ವಿಶ್ವಕಪ್ ಹೊರತುಪಡಿಸಿ ಅಮೆರಿಕದಲ್ಲಿ ಉಳಿದಂತೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವುದು ತೀರ ಕಡಿಮೆ. ಆದ್ದರಿಂದ ಟಿ20 ವಿಶ್ವಕಪ್ ಪಂದ್ಯಗಳು ಮುಗಿದ ನಂತರ ಈ ಕ್ರೀಡಾಂಗಣವನ್ನು ಕೆಡುವಬೇಕಾಗಿತ್ತು.
6 / 10
ಹೀಗಾಗಿ ಮಾಡ್ಯುಲರ್ ಕ್ರೀಡಾಂಗಣವನ್ನು ನಿರ್ಮಿಸಲು ಐಸಿಸಿ ಮುಂದಾಗಿತ್ತು. ಇದೀಗ ಈ ಕ್ರೀಡಾಂಗಣದಲ್ಲಿ ವೇಳಾಪಟ್ಟಿಯಂತೆ 8 ಪಂದ್ಯಗಳನ್ನು ಆಡಿ ಮುಗಿಸಲಾಗಿದ್ದು, ಈ ಕ್ರೀಡಾಂಗಣ ನಿರ್ಮಾಣದ ಹಿಂದಿದ್ದ ಉದ್ದೇಶದಂತೆ ಇದೀಗ ಈ ಕ್ರೀಡಾಂಗಣವನ್ನು ನೆಲಸಮಗೊಳಿಸಿ, ಮತ್ತೆ ಈ ಜಾಗವನ್ನು ತನ್ನ ಹಳೆಯ ಸ್ವರೂಪಕ್ಕೆ ತರಲಾಗುತ್ತಿದೆ.
7 / 10
106 ದಿನಗಳಲ್ಲಿ ನಿರ್ಮಾಣಗೊಂಡಿದ್ದ ಈ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದೀಗ 6 ವಾರಗಳಲ್ಲಿ ನೆಲಸಮಗೊಳ್ಳಲಿದೆ. Cricbuzz ವರದಿ ಪ್ರಕಾರ, ಭಾರತ ಮತ್ತು ಅಮೆರಿಕ ನಡುವಿನ ಪಂದ್ಯದ ನಂತರ ಈ ಕ್ರೀಡಾಂಗಣವನ್ನು ಕೆಡವುವ ಕೆಲಸ ಪ್ರಾರಂಭವಾಗಿದೆ.
8 / 10
ಈ ಕ್ರೀಡಾಂಗಣದ ಪಿಚ್ಗಳಿಗೆ ಸಂಬಂಧಿಸಿದಂತೆ, ನಸ್ಸೌ ಕೌಂಟಿ ಅಧಿಕಾರಿಗಳು ಅವುಗಳನ್ನು ಇರಿಸಿಕೊಳ್ಳಲು ಬಯಸಿದರೆ, ಅವರು ಈ ಪಿಚ್ಗಳನ್ನು ಅಲ್ಲೆ ಉಳಿಸಿಕೊಳ್ಳಬಹುದು ಎಂದು ಐಸಿಸಿ ಅಧಿಕಾರಿಗಳು ಹೇಳಿದ್ದಾರೆ. ಒಂದು ವೇಳೆ ಈ ಪಿಚ್ಗಳು ಅವರಿಗೆ ಬೇಡವೆಂದರೆ ನಾವು ಈ ಪಿಚ್ಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ ಎಂದಿದ್ದಾರೆ.
9 / 10
ಈ ಕ್ರೀಡಾಂಗಣದಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಪಂದ್ಯಗಳನ್ನು ಆಡಲು ಮೊದಲು ಯೋಜಿಸಲಾಗಿತ್ತು. ಆದರೆ ಎಂಎಲ್ಸಿ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಉತ್ಸುಕರಾಗಿಲ್ಲ ಎಂದು ಹೇಳಲಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ MLC ಬೇಸ್ ನ್ಯೂಯಾರ್ಕ್ನಲ್ಲಿದೆ. ಈಗ ಭವಿಷ್ಯದಲ್ಲಿ ಅಂಬಾನಿ ಹೊಸ ಕ್ರೀಡಾಂಗಣವನ್ನು ನಿರ್ಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
10 / 10
ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಕ್ರೀಡಾಂಗಣ ಎಷ್ಟು ಚರ್ಚೆಯಲ್ಲಿತ್ತೋ, ವಿಶ್ವಕಪ್ ಆರಂಭವಾದ ನಂತರವೂ ಈ ಕ್ರೀಡಾಂಗಣದ ಪಿಚ್ಗಳು ಅಷ್ಟೇ ಚರ್ಚೆಯಲ್ಲಿದ್ದವು. ಈ ಪಿಚ್ನಲ್ಲಿ ರನ್ ಗಳಿಸಲು ಬ್ಯಾಟ್ಸ್ಮನ್ಗಳು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. ಈ ಮೈದಾನದಲ್ಲಿ ಮೊದಲ ಇನಿಂಗ್ಸ್ನ ಸರಾಸರಿ ಸ್ಕೋರ್ ಕೇವಲ 108 ರನ್ ಆಗಿತ್ತು. ಅಲ್ಲದೆ ನಿನ್ನೆ ಅಮೆರಿಕ ನೀಡಿದ 111 ರನ್ಗಳ ಗುರಿ ಬೆನ್ನಟ್ಟಲು ಟೀಂ ಇಂಡಿಯಾ ಕೂಡ ಬೆವರು ಹರಿಸಬೇಕಾಯಿತು.