T20 World Cup 2024: ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಓಪನರ್? ರೋಹಿತ್ ಶರ್ಮಾ ಹೇಳಿದ್ದಿದು

|

Updated on: Apr 18, 2024 | 5:54 PM

T20 World Cup 2024: ಈ ಮೊದಲು ಭಾರತ ಟಿ20 ವಿಶ್ವಕಪ್ ತಂಡದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ ಐಪಿಎಲ್‌ನಲ್ಲಿ ಕೊಹ್ಲಿ ಆಟವನ್ನು ನೋಡಿದರೆ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ.

1 / 7
ಪ್ರಸ್ತುತ ಭಾರತದಲ್ಲಿ ಐಪಿಎಲ್ ನಡೆಯುತ್ತಿದೆ. ಹೀಗಾಗಿ ಟೀಂ ಇಂಡಿಯಾ ಸೇರಿದಂತೆ ಹಲವು ದೇಶಗಳ ಆಟಗಾರರು ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನಿರತರಾಗಿದ್ದಾರೆ. ಐಪಿಎಲ್ ಮುಗಿದ ಕೂಡಲೇ ಟಿ20 ವಿಶ್ವಕಪ್ ಆರಂಭವಾಗುವುದರಿಂದ ಈ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುವುದು ಪ್ರತಿಯೊಬ್ಬ ಆಟಗಾರನಿಗೆ ಅನಿವಾರ್ಯವಾಗಿದೆ.

2 / 7
ಏಕೆಂದರೆ ಈ ಲೀಗ್​ನಲ್ಲಿ ಮಿಂಚುವ ಆಟಗಾರನಿಗೆ ಆತನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವುದು ಖಚಿತವಾದಂತೆ. ಇದು ಭಾರತದ ಆಟಗಾರರಿಗೂ ಅನ್ವಯಿಸುವ ಕಾರಣದಿಂದಾಗಿ ಯುವ ದೇಶಿ ಕ್ರಿಕೆಟಿಗರು ಈ ಟಿ20 ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದ ಆಯ್ಕೆ ಮಂಡಳಿಯ ಗಮನ ಸೆಳೆಯುತ್ತಿದ್ದಾರೆ.

3 / 7
ಪ್ರಸ್ತುತ ನಡೆಯುತ್ತಿರುವ ಲೀಗ್​ನಲ್ಲಿ ಹಲವು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಇರಾದೆಯಲ್ಲಿದ್ದಾರೆ. ಆದರೆ ಆಯ್ಕೆ ಮಂಡಳಿ ಮಾತ್ರ ಬೇರೆಯದ್ದೆ ಚಿಂತನೆಯಲ್ಲಿದ್ದು, ಯುವ ಆಟಗಾರರೊಂದಿಗೆ ಅನುಭವಿಗಳ ಕಡೆಯೂ ಚಿತ್ತ ಹರಿಸುತ್ತಿದೆ.

4 / 7
ಹೀಗಾಗಿ ಈ ಮೊದಲು ಭಾರತ ಟಿ20 ವಿಶ್ವಕಪ್ ತಂಡದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ ಐಪಿಎಲ್‌ನಲ್ಲಿ ಕೊಹ್ಲಿ ಆಟವನ್ನು ನೋಡಿದರೆ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ.

5 / 7
ಆದರೆ ಕೊಹ್ಲಿಯನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದು ಆಯ್ಕೆ ಮಂಡಳಿಗೆ ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ಟೀಂ ಇಂಡಿಯಾದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಕೊಹ್ಲಿ ಐಪಿಎಲ್‌ನಲ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಕೊಹ್ಲಿ ಆರಂಭಿಕರಾಗುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

6 / 7
ಆದರೆ ಈ ಬಗ್ಗೆ ಮೌನ ಮುರಿದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನಾವು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

7 / 7
ಈ ಬಗ್ಗೆ ರಾಹುಲ್ ಭಾಯ್ (ರಾಹುಲ್ ದ್ರಾವಿಡ್ ಮುಖ್ಯ ಕೋಚ್) ಅಥವಾ ಅಜಿತ್ ಭಾಯ್ (ಮುಖ್ಯ ಆಯ್ಕೆದಾರ) ಅವರಿಂದ ಅಧಿಕೃತ ಹೇಳಿಕೆ ಬರದ ಹೊರತು ಏನ್ನನ್ನು ಹೇಳಲು ಸಾಧ್ಯವಿಲ್ಲ. ಅಲ್ಲದೆ ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯೂ ಸತ್ಯಕ್ಕೆ ದೂರ ಎಂದಿದ್ದಾರೆ.