T20 World Cup 2024: ಯುವರಾಜ್​ ಸಿಂಗ್​ಗೆ ಮಹತ್ವದ ಜವಾಬ್ದಾರಿ ವಹಿಸಿದ ಐಸಿಸಿ..!

Updated on: Apr 26, 2024 | 5:12 PM

T20 World Cup 2024: 2024 ರ ಟಿ20 ವಿಶ್ವಕಪ್​ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಐಸಿಸಿ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಎರಡು ವಿಶ್ವಕಪ್‌ಗಳ ಹೀರೋ ಯುವರಾಜ್​ ಸಿಂಗ್​ ಅವರನ್ನು ಈ ಚುಟುಕು ವಿಶ್ವಸಮರದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.

1 / 6
ಇದೇ ಜೂನ್ 6 ರಿಂದ 2024 ರ ಟಿ20 ವಿಶ್ವಕಪ್ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಈ ಚುಟುಕು ಸಮರಕ್ಕೆ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಟೂರ್ನಿಗೆ ಎಲ್ಲಾ ತಂಡಗಳನ್ನು ಪ್ರಕಟಿಸಲಾಗುತ್ತದೆ. ಟೀಂ ಇಂಡಿಯಾ ಕೂಡ ಇನ್ನಷ್ಟೇ ಪ್ರಕಟವಾಗಬೇಕಿದೆ.

ಇದೇ ಜೂನ್ 6 ರಿಂದ 2024 ರ ಟಿ20 ವಿಶ್ವಕಪ್ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಈ ಚುಟುಕು ಸಮರಕ್ಕೆ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಟೂರ್ನಿಗೆ ಎಲ್ಲಾ ತಂಡಗಳನ್ನು ಪ್ರಕಟಿಸಲಾಗುತ್ತದೆ. ಟೀಂ ಇಂಡಿಯಾ ಕೂಡ ಇನ್ನಷ್ಟೇ ಪ್ರಕಟವಾಗಬೇಕಿದೆ.

2 / 6

ಈ ನಡುವೆ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಎರಡು ವಿಶ್ವಕಪ್‌ಗಳ ಹೀರೋ ಯುವರಾಜ್​ ಸಿಂಗ್​ ಅವರನ್ನು ಈ ಚುಟುಕು ವಿಶ್ವಸಮರದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.

3 / 6

ಯುವರಾಜ್ ಸಿಂಗ್ ಹೊರತಾಗಿ, ಪ್ರಸ್ತುತ ಕ್ರಿಸ್ ಗೇಲ್ ಮತ್ತು ಉಸೇನ್ ಬೋಲ್ಟ್ ಕೂಡ ಈ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್‌ಗಳಾಗಿದ್ದಾರೆ.

4 / 6

ಯುವರಾಜ್ ಸಿಂಗ್ ಎಂದರೆ ಎಲ್ಲರಿಗೂ ಮೊದಲು ನೆನಪಿಗೆ ಬರುವುದು 2007ರ ಟಿ20 ವಿಶ್ವಕಪ್‌ನಲ್ಲಿ ಅವರು ಬಾರಿಸಿದ ಆರು ಸಿಕ್ಸರ್‌ಗಳು. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ದಾಖಲೆಯೂ ಯುವರಾಜ್ ಹೆಸರಿನಲ್ಲಿದೆ.

5 / 6

ಇದರೊಂದಿಗೆ 2007ರ ಟಿ20 ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪಾತ್ರವೂ ಆಗಾದವಾಗಿತ್ತು. ಇದಲ್ಲದೆ ಭಾರತ 2011ರ ಏಕದಿನ ವಿಶ್ವಕಪ್ ಗೆಲುವಲ್ಲಿಯೂ ಯುವರಾಜ್ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯೂ ಯುವರಾಜ್ ಪಾಲಾಗಿತ್ತು.​

6 / 6

ಇನ್ನು ಈ ಬಾರಿಯ ಟಿ20 ವಿಶ್ವಕಪ್ ಬಗ್ಗೆ ಹೇಳುವುದಾದರೆ.. ಜೂನ್ 01 ರಿಂದ ಆರಂಭವಾಗುವ ಮಿನಿ ಸಮರ ಜೂನ್ 29 ರಂದು ಅಂತ್ಯಗೊಳ್ಳಲಿದೆ. ಒಟ್ಟು 20 ತಂಡಗಳು ಈ ಲೀಗ್​ನಲ್ಲಿ ಭಾಗವಹಿಸುತ್ತಿವೆ. ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ, ಅಮೆರಿಕ ಮತ್ತು ಕೆನಡಾ ತಂಡಗಳನ್ನು ಎದುರಿಸಲಿದೆ.

Loading...
Unable to load recommendations.
Follow Us