IND vs PAK: ಟೀಮ್ ಇಂಡಿಯಾ ಆಟಗಾರರ ಅಭ್ಯಾಸ ನೋಡಲೆಂದೇ ಮೆಲ್ಬೋರ್ನ್​ನಲ್ಲಿ ಮುಗಿಬಿದ್ದ ಅಭಿಮಾನಿಗಳು: ಫೋಟೋ

Edited By:

Updated on: Oct 23, 2022 | 10:01 AM

India vs Pakistan, T20 World Cup 2022: ಭಾರತ- ಪಾಕಿಸ್ತಾನ ಪಂದ್ಯ ಆರಂಭಕ್ಕೆ ಕೆಲ ಗಂಟೆಗಳಿರುವಾಗ ಟೀಮ್ ಇಂಡಿಯಾ ಪ್ಲೇಯರ್ಸ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಭಾರತೀಯ ಆಟಗಾರರ ಅಭ್ಯಾಸ ನೋಡಲೆಂದೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಹೊರಗಡೆ ನಿತ್ತಿರುವುದು ಕಂಡುಬಂತು.

1 / 9
ಐಸಿಸಿ ಟಿ20 ವಿಶ್ವಕಪ್​ನ (T20 World Cup) ಸೂಪರ್ 12 ಹಂತದ ಪಂದ್ಯಗಳು ಶುರುವಾಗಿದ್ದು ಇಂದು ಕ್ರಿಕೆಟ್ ಲೋಕದ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗಲಿದೆ. ಮೆಲ್ಬೋರ್ನ್​ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಐಸಿಸಿ ಟಿ20 ವಿಶ್ವಕಪ್​ನ (T20 World Cup) ಸೂಪರ್ 12 ಹಂತದ ಪಂದ್ಯಗಳು ಶುರುವಾಗಿದ್ದು ಇಂದು ಕ್ರಿಕೆಟ್ ಲೋಕದ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗಲಿದೆ. ಮೆಲ್ಬೋರ್ನ್​ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

2 / 9

ಪಂದ್ಯ ಆರಂಭಕ್ಕೆ ಕೆಲ ಗಂಟೆಗಳಿರುವಾಗ ಟೀಮ್ ಇಂಡಿಯಾ ಪ್ಲೇಯರ್ಸ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಭಾರತೀಯ ಆಟಗಾರರ ಅಭ್ಯಾಸ ನೋಡಲೆಂದೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಹೊರಗಡೆ ನಿತ್ತಿರುವುದು ಕಂಡುಬಂತು.

3 / 9

ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದುಕೂಡ ಹೇಳಬಹುದು. ಯಾಕೆಂದರೆ ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ 2021ರ ಪಂದ್ಯದಲ್ಲ ಪಾಕಿಸ್ತಾನ ವಿರುದ್ಧ ಭಾರತ ಸೋತಿತ್ತು.

4 / 9

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸುವ ಯೋಜನೆ ಮಾಡಿರುವ ಕೋಚ್ ಹಾಗೂ ನಾಯಕ ಹಿರಿಯ, ಕಿರಿಯ ಎಂದು ನೋಡದೆ ಫಾರ್ಮ್​ನಲ್ಲಿರುವ ಪ್ಲೇಯರ್ಸ್​ಗೆ ಮಣೆ ಹಾಕಲು ಮುಂದಾಗಿದ್ದಾರೆ.

5 / 9

ಭಾರತದ ಟಾಪ್ 4 ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ.

6 / 9

ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಅಥವಾ ರಿಷಭ್ ಪಂತ್​ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಮೂಲಗಳ ಪ್ರಕಾರ ಪಂತ್ ಅವರನ್ನು ಹೊರಗಿಡುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ ಎನ್ನಲಾಗಿದೆ. ಫಾರ್ಮ್​ನಲ್ಲಿ ಇಲ್ಲದ ಪಂತ್ ಬದಲು ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಂತೆ.

7 / 9

ಆಲ್ರೌಂಡರ್ ಜವಾಬ್ದಾರಿ ಹಾರ್ದಿಕ್ ಜೊತೆಗೆ ಅಕ್ಷರ್ ಪಟೇಲ್ ವಹಿಸಲಿದ್ದಾರೆ. ಮತ್ತೊಬ್ಬ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಥವಾ ಯುಜ್ವೇಂದ್ರ ಚಹಲ್ ಇರಲಿದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಪ್ರಮುಖ ವೇಗಿಗಳಾದರೆ ಮತ್ತೊಬ್ಬ ವೇಗಿಯಾಗಿ ಹರ್ಷಲ್ ಪಟೇಲ್ ಅಥವಾ ಅರ್ಶ್​​​ದೀಪ್ ಸಿಂಗ್ ಆಯ್ಕೆಯಾಗಲಿದ್ದಾರೆ.

8 / 9

ಇನ್ನು ಮೆಲ್ಬೋರ್ನ್​ನಲ್ಲಿ (Melbourne) ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕಡಿಮೆ ಆಗಿದ್ದು, ಪಂದ್ಯ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

9 / 9

ಭಾನುವಾರ ಆಸ್ಟ್ರೇಲಿಯಾ ಕಾಲಮಾನ ಮಧ್ಯಾಹ್ನದ ಹೊತ್ತಿಗೆ ಮೆಲ್ಬೋರ್ನ್​ನಲ್ಲಿ ಮಳೆಯ ಸೂಚನೆಯಿಲ್ಲ. ಸಂಜೆ ವೇಳೆಗೆ ಕೊಂಚ ಮಳೆ ಆಗಬಹುದು ಎಂದು ಹೇಳಲಾಗಿದೆ. ಈಗೀನ ಸ್ಥಿತಿ ನೋಡಿದರೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗುವುದು ಖಚಿತವಾಗಿದೆ.

Published On - 10:01 am, Sun, 23 October 22

Loading...
Unable to load recommendations.
Follow Us