WTC Final 2023, IND vs AUS: ಲಂಡನ್ನ ಓವಲ್ ಮೈದಾನಕ್ಕೆ ಬಂದ ಟೀಮ್ ಇಂಡಿಯಾ ಆಟಗಾರರು: ಮಿಸ್ಟ್ರಿ ಪಿಚ್ ಕಂಡು ಶಾಕ್?
IND vs AUS Test: ಮಿಸ್ಟ್ರಿ ಪಿಚ್ ಎಂದೇ ಹೇಳಲಾಗುವ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತೀಯರು ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಮುಖ್ಯವಾಗಿ ಬೌಲರ್ಗಳು ಉತ್ತಮವಾಗಿ ಅಭ್ಯಾಸ ನಡೆಸುತ್ತಿದ್ದಾರೆ.
1 / 8
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 7 ರಿಂದ 11 ರ ವರೆಗೆ ಈ ಮಹತ್ವದ ಪಂದ್ಯ ನಡೆಯಲಿದ್ದು, ಇನ್ನು ಕೇವಲ ಎರಡು ದಿನವಷ್ಟೇ ಬಾಕಿಯಿದೆ.
2 / 8
ಲಂಡನ್ನ ಪ್ರತಿಷ್ಠಿತ ಕೆನ್ನಿಂಗ್ಟನ್ ಓವಲ್ ಮೈದಾನ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಟೀಮ್ ಇಂಡಿಯಾದ ಎಲ್ಲ ಆಟಗಾರರು ಇದೀಗ ಲಂಡನ್ನ ಓವಲ್ ಕ್ರೀಡಾಂಗಣಕ್ಕೆ ಕಾಲಿಟ್ಟಿದ್ದಾರೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
3 / 8
143 ವರ್ಷಗಳ ಇತಿಹಾಸ ಹೊಂದಿರುವ ಓವಲ್ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಡೆಯುತ್ತಿದೆ. ಅಲ್ಲದೆ ಈ ಅಂಗಳದಲ್ಲಿ ಬೌಲರ್‌ಗಳಿಗೆ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ.
4 / 8
ಮಿಸ್ಟ್ರಿ ಪಿಚ್ ಎಂದೇ ಹೇಳಲಾಗುವ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತೀಯರು ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಮುಖ್ಯವಾಗಿ ಬೌಲರ್ಗಳು ಉತ್ತಮವಾಗಿ ಅಭ್ಯಾಸ ನಡೆಸುತ್ತಿದ್ದಾರೆ.
5 / 8
ವಿಶ್ವದ ಎರಡನೇ ಅತ್ಯಂತ ಹಳೆಯ ಕ್ರೀಡಾಂಗಣವಾದ ಓವಲ್ ಈ ಹಿಂದೆ ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಕಳೆದ ಆರು ಪಂದ್ಯಗಳು ಇದಕ್ಕೆ ವಿರುದ್ಧವಾಗಿ ಕಂಡವು. 2016 ರಿಂದ ಓವಲ್‌ನಲ್ಲಿ ನಡೆದ ಕೊನೆಯ 6 ಟೆಸ್ಟ್‌ಗಳು ದಿನಗಳು ಕಳೆದಂತೆ ಪಿಚ್ ಕ್ರಮೇಣ ಉತ್ತಮಗೊಳ್ಳುತ್ತವೆ ಎಂದು ತೋರಿಸಿದೆ.
6 / 8
ಇಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 269 ಆಗಿದೆ, ಎರಡನೇ ಇನ್ನಿಂಗ್ಸ್‌ನಲ್ಲಿ 280 ಕ್ಕೆ ಹೆಚ್ಚಾಗುತ್ತದೆ ಮತ್ತು ಮೂರನೇ ಇನ್ನಿಂಗ್ಸ್‌ನಲ್ಲಿ 326 ರ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಹೀಗಾಗಿ ಓವಲ್‌ನಲ್ಲಿ ಆಟವು ಸಾಗುತ್ತಿದ್ದಂತೆ ಬ್ಯಾಟಿಂಗ್ಗೆ ಸುಲಭವಾಗುತ್ತದೆ ಎಂದು ಸೂಚಿಸುತ್ತದೆ.
7 / 8
ಟೀಮ್ ಇಂಡಿಯಾ ನಾನಾ ವಿಧದಲ್ಲಿ ಅಭ್ಯಾಸ ನಡೆಸುತ್ತಿದೆ. ಆಟಗಾರರು ಕ್ಯಾಚ್ ಅಭ್ಯಾಸಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತದ ಎಲ್ಲ ಪ್ಲೇಯರ್ಸ್ ಬೇರೆಬೇರೆ ಬಣ್ಣಗಳ ಚೆಂಡುಗಳಲ್ಲಿ ಕ್ಯಾಚಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂದಿದೆ. ಐಪಿಎಲ್ನಲ್ಲಿ ಬಿಳಿ ಬಣ್ಣದ ಚೆಂಡನ್ನು ಉಪಯೋಗಿಸಿರುವುದರಿಂದ ಕೆಂಪು ಚೆಂಡಿನ ಬಳಕೆಗೆ ಒಗ್ಗಿಸುವ ಹಾದಿಯಲ್ಲಿ ಇದೊಂದು ತಂತ್ರವಾಗಿದೆ.
8 / 8
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾದರೆ ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಮಾಡಲಾಗದ ಅಪರೂಪದ ದಾಖಲೆಯೊಂದನ್ನು ಬರೆಯಲಿದೆ. ಆಸೀಸ್ ವಿರುದ್ಧ ಭಾರತ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದರೆ, ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಮಾದರಿಗಳಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.