ಮಳೆ ನಿಂತ ತಕ್ಷಣ ಅಭ್ಯಾಸಕ್ಕಿಳಿದ ಟೀಮ್ ಇಂಡಿಯಾ: ಕೊಲಂಬೊ ಹವಾಮಾನ ಈಗ ಹೇಗಿದೆ?

|

Updated on: Sep 09, 2023 | 7:47 AM

India vs Pakistan, Colombo Weather: ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡೋ-ಪಾಕ್ ಕದನಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಎರಡು ದಿನಗಳ ಹಿಂದೆಯೇ ಕೊಲಂಬೊಕ್ಕೆ ತಲುಪಿದ್ದರು. ಆದರೆ, ಮೈದಾನದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಎಡೆಬಿಡದೆ ಸುರಿದ ಮಳೆಯಿಂದಾಗಿ ಆಟಗಾರರು ಹೊರಾಂಗಣದಲ್ಲಿ ಪ್ರ್ಯಾಕ್ಟೀಸ್ ನಡೆಸಲಿಲ್ಲ.

1 / 6
ಎರಡು ದಿನಗಳ ವಿರಾಮದ ನಂತರ ಏಷ್ಯಾಕಪ್​ನಲ್ಲಿ ಮತ್ತೆ ಪಂದ್ಯಗಳು ಶುರುವಾಗುತ್ತಿವೆ. ಇಂದು ಸೂಪರ್ 4 ಹಂತದ ದ್ವಿತೀಯ ಪಂದ್ಯದಲ್ಲಿ ಶ್ರೀಲಂಕಾ-ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಸೆಪ್ಟೆಂಬರ್ 10 ರಂದು ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

2 / 6
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡೋ-ಪಾಕ್ ಕದನಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಎರಡು ದಿನಗಳ ಹಿಂದೆಯೇ ಕೊಲಂಬೊಕ್ಕೆ ತಲುಪಿದ್ದರು. ಆದರೆ, ಮೈದಾನದಲ್ಲಿ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಎಡೆಬಿಡದೆ ಸುರಿದ ಮಳೆಯಿಂದಾಗಿ ಆಟಗಾರರು ಹೊರಾಂಗಣದಲ್ಲಿ ಪ್ರ್ಯಾಕ್ಟೀಸ್ ನಡೆಸಲಿಲ್ಲ.

3 / 6
ಇದೀಗ ಆಟಗಾರರಿಗೆ ಶುಭಸುದ್ದಿ ಸಿಕ್ಕಿದ್ದು ಕೊಲಂಬೊದಲ್ಲಿ ಮಳೆ ನಿಂತಿದೆ. ಮಳೆ ನಿಂತ ತಕ್ಷಣ ರೋಹಿತ್ ಶರ್ಮಾ ಪಡೆ ಮೈದಾನಕ್ಕೆ ಇಳಿದು ಭರ್ಜರಿ ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಕೊಹ್ಲಿ, ರೋಹಿತ್, ಗಿಲ್, ಕೆಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಶಮಿ, ಜಡೇಜಾ, ಜಸ್​ಪ್ರಿತ್ ಬುಮ್ರಾ ಬೌಲಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು.

4 / 6
ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಸೆ.10 ರಂದು ನಡೆಯಲಿರುವ ಭಾರತ-ಪಾಕ್ ಕದನಕ್ಕೆ ಕೆಎಲ್ ರಾಹುಲ್‌ ಅವರನ್ನು ಶ್ರೇಯಸ್ ಅಯ್ಯರ್ ಜಾಗದಲ್ಲಿ ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಶಾನ್ ಕಿಶನ್ ಪಾಕಿಸ್ತಾನ ವಿರುದ್ಧ 5ನೇ ಸ್ಥಾನದಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದರು. ಹೀಗಾಗಿ ಮ್ಯಾನೇಜ್‌ಮೆಂಟ್ ಇವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎನ್ನಲಾಗಿದೆ.

5 / 6
ಇನ್ನು ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ನಡುವೆ ಯಾರಿಗೆ ಅವಕಾಶ ನೀಡಬೇಕು ಎಂಬುದು ತಲೆನೋವಾಗಿದೆ. ಏಷ್ಯಾಕಪ್ 2023 ರ ಸೂಪರ್ 4 ಪಂದ್ಯಕ್ಕೆ ಜಸ್​ಪ್ರಿತ್ ಬುಮ್ರಾ ಲಭ್ಯರಿರುವ ಕಾರಣ, ಶಮಿ ಅಥವಾ ಶಾರ್ದೂಲ್ ಒಬ್ಬರಿ ಹೊರಗುಳಿಯಬೇಕಾಗುತ್ತದೆ.

6 / 6
ಇಂಡೋ-ಪಾಕ್ ಪಂದ್ಯಕ್ಕೆ ಮಳೆಯ ಕಾಟ ಇರಲಿದೆ ಎಂದು ಹೇಳಲಾಗಿದೆ. ಹಾಗಾಗಿ ಮಳೆಯಿಂದ ಎಲ್ಲಾದರು ಪಂದ್ಯ ನಡೆಯದೆ ಇದ್ದರೆ, ಮೀಸಲು ದಿನವನ್ನು ಇರಿಸುವ ತೀರ್ಮಾನಕ್ಕೆ ಬರಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 10 ರಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮರುದಿನ ಅಂದರೆ ಸೆಪ್ಟೆಂಬರ್ 11 ರಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.