4 ಪಂದ್ಯ ಬಾಕಿ: ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೇರಲು ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
How India can seal a spot in the semi-finals, ICC World Cup 2023: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಾಯಿಂಟ್ ಟೇಬಲ್ನಲ್ಲಿ 10 ಅಂಕಗಳನ್ನು ಹೊಂದಿರುವ ಹಾಗೂ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ಏಕೈಕ ತಂಡ ಟೀಮ್ ಇಂಡಿಯಾವಾಗಿದೆ. ನ್ಯೂಝಿಲೆಂಡ್ ಎಂಟು ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಆದರೆ, ಭಾರತ ಇನ್ನೂ ಸೆಮಿ ಫೈನಲ್ಗೆ ತಲುಪಿಲ್ಲ.
1 / 7
ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ನ್ಯೂಝಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ತಮ್ಮ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿದೆ. ಭಾರತ ಈಗ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2 / 7
ಪಾಯಿಂಟ್ ಟೇಬಲ್ನಲ್ಲಿ ನ್ಯೂಝಿಲೆಂಡ್ ಎಂಟು ಅಂಕದೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. 10 ಅಂಕಗಳನ್ನು ಹೊಂದಿರುವ ಹಾಗೂ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದ ಏಕೈಕ ತಂಡ ಟೀಮ್ ಇಂಡಿಯಾವಾಗಿದೆ. ದಕ್ಷಿಣ ಆಫ್ರಿಕಾ ತಂಡ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
3 / 7
ಭಾರತ ತಂಡ 10 ಅಂಕ ಸಂಪಾದಿಸಿದ್ದರೂ ಸೆಮಿ ಫೈನಲ್ಗೆ ಪ್ರವೇಶ ಪಡೆದಿಲ್ಲ. ಇದೇ ಸ್ವರೂಪದಲ್ಲಿ ನಡೆದ 2019 ರ ವಿಶ್ವಕಪ್ ಆವೃತ್ತಿಯಲ್ಲಿ, ನ್ಯೂಝಿಲೆಂಡ್ ನಾಲ್ಕನೇ ಸ್ಥಾನದಲ್ಲಿ ಐದು ಗೆಲುವುಗಳೊಂದಿಗೆ ಸೆಮೀಸ್ಗೆ ಅರ್ಹತೆ ಗಳಿಸಿತು. ಆದರೆ, ಒಂದು ಗೇಮ್ ವಾಶ್ ಔಟ್ ಆದ ಕಾರಣ 11 ಅಂಕ ಗಳಿಸಿತ್ತು. ಅಲ್ಲದೆ, ನಿವ್ವಳ ರನ್ ರೇಟ್ (NRR) ಕಾರಣದಿಂದಾಗಿ ಪಾಕಿಸ್ತಾನವು 11 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.
4 / 7
2019 ರ ಆವೃತ್ತಿಯು ಒಟ್ಟು ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಈ ರೀತಿ ಈ ಬಾರಿ ಸಂಭವಿಸುವ ಸಾಧ್ಯತೆಯಿಲ್ಲ. ಹೀಗಾಗಿ ಭಾರತ 10 ಅಂಕ ಪಡೆದುಕೊಂಡರೂ ಸೆಮಿ ಫೈನಲ್ಗೆ ಪ್ರವೇಶಿಸಿಲ್ಲ. ಆದ್ದರಿಂದ, ಒಂದು ತಂಡವು ಸೆಮಿ ಫೈನಲ್ಗೆ ಅರ್ಹತೆ ಪಡೆಯಲು ಒಟ್ಟು ಆರು ಗೆಲುವುಗಳ ಅಗತ್ಯವಿದೆ.
5 / 7
ರೋಹಿತ್ ಶರ್ಮಾ ಪಡೆ ಸದ್ಯ ಆಡಿರುವ ಐದು ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿದೆ. ಇನ್ನೊಂದು ಪಂದ್ಯ ಗೆದ್ದರೆ ಸೆಮಿ ಫೈನಲ್ಗೇರಲಿದೆ. ಈ ಮೂಲಕ ನಾಕೌಟ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕು. ಹಾಗಾದರೆ ಭಾರತಕ್ಕೆ ಇನ್ನು ಎಷ್ಟು ಪಂದ್ಯವಿದೆ?.
6 / 7
ಟೀಮ್ ಇಂಡಿಯಾಕ್ಕಿನ್ನು ನಾಲ್ಕು ಪಂದ್ಯಗಳು ಬಾಕಿಯಿದೆ. ಇದರಲ್ಲಿ ಒಂದು ಗೆದ್ದರೆ ಸೆಮಿ ಫೈನಲ್ಗೆ ಏರಬಹುದು. ಅಕ್ಟೋಬರ್ 29 ರಂದು ಇಂಗ್ಲೆಂಡ್ ವಿರುದ್ಧ, ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ, ನ. 5ಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಕೊನೆಯದಾಗಿ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ.
7 / 7
ನಾಲ್ಕು ಪಂದ್ಯಗಳ ಪೈಕಿ ಒಂದು ಗೆಲುವು ಭಾರತಕ್ಕೆ ಕಷ್ಟವಲ್ಲ. ಹೀಗಾಗಿ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿ ಫೈನಲ್ನಲ್ಲಿ ತನ್ನ ಜಾಗವನ್ನು ಭದ್ರಪಡಿಸಿಕೊಂಡಿದೆ. ಅತ್ತ ನ್ಯೂಝಿಲೆಂಡ್ ಕೂಡ ಸೆಮಿ ಫೈನಲ್ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.