T20 World Cup 2024: ಈ ಆರು ಭಾರತೀಯರಿಗೆ ಇದು ಚೊಚ್ಚಲ ಟಿ20 ವಿಶ್ವಕಪ್..!
T20 World Cup 2024: ಒಟ್ಟು 19 ಆಟಗಾರರು ಈ ಮಿನಿ ವಿಶ್ವಕಪ್ಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದರಲ್ಲಿ 15ಸದಸ್ಯರು ಮುಖ್ಯ ತಂಡದಲ್ಲಿದ್ದರೆ, ಉಳಿದ ನಾಲ್ವರು ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಪ್ರಕಟವಾಗಿರುವ ಭಾರತ ತಂಡದಲ್ಲಿ ಈ ಆರು ಆಟಗಾರರಿಗೆ ಇದು ಚೊಚ್ಚಲ ವಿಶ್ವಕಪ್ ಆಗಿದೆ.
1 / 7
ಮುಂಬರುವ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾವನ್ನು ಪ್ರಕಟಿಸಿಲಾಗಿದೆ. ಅದರಂತೆ ಒಟ್ಟು 19 ಆಟಗಾರರು ಈ ಮಿನಿ ವಿಶ್ವಕಪ್ಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದರಲ್ಲಿ 15ಸದಸ್ಯರು ಮುಖ್ಯ ತಂಡದಲ್ಲಿದ್ದರೆ, ಉಳಿದ ನಾಲ್ವರು ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಪ್ರಕಟವಾಗಿರುವ ಭಾರತ ತಂಡದಲ್ಲಿ ಈ ಆರು ಆಟಗಾರರಿಗೆ ಇದು ಚೊಚ್ಚಲ ವಿಶ್ವಕಪ್ ಆಗಿದೆ.
2 / 7
ಯಶಸ್ವಿ ಜೈಸ್ವಾಲ್: ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ. 22ರ ಹರೆಯದ ಯಶಸ್ವಿ ಕಳೆದ ವರ್ಷ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಭಾರತದ ಪರ 17 ಟಿ20 ಪಂದ್ಯಗಳನ್ನು ಆಡಿರುವ ಜೈಸ್ವಾಲ್, 161.93 ಸ್ಟ್ರೈಕ್ ರೇಟ್‌ನಲ್ಲಿ 502 ರನ್ ಗಳಿಸಿದ್ದಾರೆ.
3 / 7
ಸಂಜು ಸ್ಯಾಮ್ಸನ್: ಎರಡನೇ ವಿಕೆಟ್ ಕೀಪರ್ ಆಗಿ ಸ್ಯಾಮ್ಸನ್ ಹೆಸರು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಸ್ಯಾಮ್ಸನ್ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲಿದ್ದಾರೆ. ಅವರು ಇಲ್ಲಿಯವರೆಗೆ 25 ಟಿ20 ಪಂದ್ಯಗಳನ್ನು ಆಡಿದ್ದು, 133.09 ಸ್ಟ್ರೈಕ್ ರೇಟ್‌ನಲ್ಲಿ 374 ರನ್ ಗಳಿಸಿದ್ದಾರೆ.
4 / 7
ಶಿವಂ ದುಬೆ: ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಶಿವಂ ದುಬೆ ಕೊನೆಗೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಂ ಭಾರತ ಪರ 21 ಟಿ20 ಪಂದ್ಯಗಳನ್ನಾಡಿದ್ದು 276 ರನ್ ಗಳಿಸಿದ್ದಾರೆ.
5 / 7
ಕುಲ್ದೀಪ್ ಯಾದವ್: ಮಣಿಕಟ್ಟಿನ ಸ್ಪಿನ್ನರ್ ಕುಲ್ದೀಪ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಈ ಮೊದಲು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿಲ್ಲವಾದರೂ, ಅವರು ಭಾರತದ ಪರ ಈ ಸ್ವರೂಪದಲ್ಲಿ 35 ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ 59 ವಿಕೆಟ್‌ಗಳಿವೆ.
6 / 7
ಯುಜುವೇಂದ್ರ ಚಾಹಲ್: ಟಿ20 ಮಾದರಿಯಲ್ಲಿ ಭಾರತದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾಗಿರುವ ಚಹಾಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಹಾಲ್ ಭಾರತದ ಪರ ಇದುವರೆಗೆ 80 ಪಂದ್ಯಗಳನ್ನು ಆಡಿದ್ದು, ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ.
7 / 7
ಮೊಹಮ್ಮದ್ ಸಿರಾಜ್: ಭಾರತ ಪರ ಟಿ20 ಮಾದರಿಯಲ್ಲಿ ಆಡಿದ ಅನುಭವ ಸಿರಾಜ್‌ಗೆ ಇಲ್ಲ. ಇದುವರೆಗೆ ಕೇವಲ 10 ಪಂದ್ಯಗಳನ್ನು ಆಡಿರುವ ವೇಗದ ಬೌಲರ್ ಸಿರಾಜ್ ಕೂಡ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ.