RCB ಫ್ಯಾನ್ಸ್ ಬಳಗ ಸೇರಿದ ಸ್ಟಾರ್ ಅಥ್ಲೀಟ್; ಯಾರಿದು ಹೊಸ ಅಭಿಮಾನಿ?

Updated on: Apr 17, 2026 | 1:22 PM

ವಿಶ್ವದ ಅತಿ ವೇಗದ ಅಥ್ಲೀಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಬಳಗಕ್ಕೆ ಸೇರಿದ್ದಾರೆ. RCB ಜೆರ್ಸಿ ಧರಿಸಿ ಫೋಟೋ ಪೋಸ್ಟ್ ಮಾಡಿ, ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ವಿಶ್ವಾದ್ಯಂತ ಇರುವ RCB ಫ್ಯಾನ್ಸ್ ಸಂತಸಗೊಂಡಿದ್ದು, ಫ್ರಾಂಚೈಸಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಿದೆ. ಕೇವಲ ಭಾರತವಲ್ಲದೆ, ಅನೇಕ ದೇಶಗಳಲ್ಲಿ RCBಗೆ ಅಪಾರ ಅಭಿಮಾನಿಗಳಿದ್ದಾರೆ.

1 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್​​​ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಜನಪ್ರಿಯತೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶದ ಜನರು ಆಸ್​​​ರಿಬಿ ಜೆರ್ಸಿ ಹಾಕಿ ಪೋಸ್ ಕೊಟ್ಟ ಉದಾಹರಣೆ ಇದೆ.

2 / 5

ಆರ್​​ಸಿಬಿ ಅಭಿಮಾನಿ ಬಳಗಕ್ಕೆ ಹೊಸ ಸೇರ್ಪಡೆ ಆಗಿದೆ. ಅದುವೇ ಅಥ್ಲೀಟ್ ಉಸೈನ್ ಬೋಲ್ಟ್. 100 ಮೀಟರ್ ರನ್ನಿಂಗ್​​ನಲ್ಲಿ ದಾಖಲೆ ಬರೆದ ಇವರು ಆರ್​​ಸಿಬಿ ಅಭಿಮಾನಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ.

3 / 5

ಉಸೈನ್ ಬೋಲ್ಟ್ ಅವರು ಜಮೈಕಾದವರು. ಅವರು 2012ರ ಲಂಡನ್ ಒಲಂಪಿಕ್ಸ್ ನ 100 ಮೀಟರ್ ಓಟವನ್ನು ಕೇವಲ 9.62 ಸೆಕೆಂಡ್​​ಗಳಲ್ಲಿ ಪೂರ್ಣಗೊಳಿಸಿದ್ದರು. ಈಗ ಅವರು ಆರ್​ಸಿಬಿ ಅಭಿಮಾನಿಯಾಗಿದ್ದಾರೆ.

4 / 5

ನಮಸ್ಕಾರ, ಎಂದು ಪೋಸ್ಟ್ ಆರಂಭಿಸಿದ್ದಾರೆ ಉಸೈನ್ ಬೋಲ್ಟ್. ಈ ಸೀಸನ್​​ಗೆ ಗುಡ್​ ಲಕ್ ಎಂದು ಕೋರಿದ್ದಾರೆ. #RCBEverywhere ಎಂದು ಅವರು ಪೋಸ್ಟ್ ಮಾಡಿದ್ದಾರೆ.

5 / 5

ಉಸೈನ್ ಬೋಲ್ಡ್ ಬೆಂಬಲ ಸಿಕ್ಕಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಎಲ್ಲರೂ ಸಂತೋಷದಿಂದ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ‘ನಮ್ಮ ರೇಂಜ್ ಇದು’ ಎಂದು ಕಮೆಂಟ್ ಹಾಕುವ ಕೆಲಸವನ್ನು ಮಾಡುತ್ತಾ ಇದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us