IND vs SA: ನಾಯಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ವೈಭವ್ ಸೂರ್ಯವಂಶಿ

Updated on: Jan 03, 2026 | 3:45 PM

Vaibhav Suryavanshi: ಭಾರತದ ಉದಯೋನ್ಮುಖ ಕ್ರಿಕೆಟಿಗ ವೈಭವ್ ಸೂರ್ಯವಂಶಿ 14ನೇ ವಯಸ್ಸಿಗೆ ಅಂಡರ್-19 ತಂಡದ ನಾಯಕತ್ವ ವಹಿಸಿ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅವರು ಭಾರತವನ್ನು ಮುನ್ನಡೆಸಿದರು. ನಾಯಕನಾಗಿ ಚೊಚ್ಚಲ ಪಂದ್ಯದಲ್ಲೇ ಬ್ಯಾಟಿಂಗ್ ವೈಫಲ್ಯ ಕಂಡ ವೈಭವ್ ಕೇವಲ 11 ರನ್ ಗಳಿಸಿ ಔಟಾದರು. ಅವರೊಂದಿಗೆ ಟೀಂ ಇಂಡಿಯಾದ ಅಗ್ರ ಕ್ರಮಾಂಕವೂ ನಿರಾಸೆ ಮೂಡಿಸಿತು.

1 / 5
ಭಾರತದ ಉದಯೋನ್ಮುಖ ಕ್ರಿಕೆಟ್ ಸ್ಟಾರ್ ವೈಭವ್ ಸೂರ್ಯವಂಶಿ ಕೇವಲ 14ನೇ ವಯಸ್ಸಿಗೆ ಟೀಂ ಇಂಡಿಯಾದ ನಾಯಕತ್ವ ಹೊತ್ತು ದಾಖಲೆ ಬರೆದಿದ್ದಾರೆ. ಇಂದಿನಿಂದ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ವಿರುದ್ಧ ಭಾರತ ಅಂಡರ್ 19 ತಂಡ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಯನ್ನು ಆಡುತ್ತಿದೆ. ಆದರೆ ಸರಣಿಯ ಮೊದಲ ಪಂದ್ಯದಲ್ಲೇ ನಾಯಕ ವೈಭವ್ ರನ್ ಗಳಿಸುವಲ್ಲಿ ಎಡವಿದ್ದಾರೆ.

2 / 5
ದಕ್ಷಿಣ ಆಫ್ರಿಕಾ ನೆಲದಲ್ಲಿ ನಾಯಕನಾಗಿ ಚೊಚ್ಚಲ ಪಂದ್ಯವನ್ನಾಡಿದ ವೈಭವ್ ಉತ್ತಮ ಆರಂಭ ಪಡೆಯಲಿಲ್ಲ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಟಾಸ್ ಸೋತ ಟೀಂ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಆರನ್ ಜಾರ್ಜ್ ಆರಂಭಿಕರಾಗಿ ಕಣಕ್ಕಿಳಿದರು.

3 / 5
ಇವರಿಬ್ಬರು ಈ ಹಿಂದೆ ನಡೆದಿದ್ದ ಅಂಡರ್ 19 ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣದಿಂದಾಗಿ ಇವರಿಬ್ಬರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಇವರಿಬ್ಬರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ. ಆರನ್ ಜಾರ್ಜ್ ಇನ್ನಿಂಗ್ಸ್​ನ ಎರಡನೇ ಓವರ್​ನ ಮೊದಲ ಎಸೆತದಲ್ಲೇ ಔಟಾದರೆ, ವೈಭವ್ ಸೂರ್ಯವಂಶಿ ಕೂಡ ಪವರ್‌ಪ್ಲೇನಲ್ಲೇ ವಿಕೆಟ್ ಒಪ್ಪಿಸಿದರು.

4 / 5
 ನಾಯಕನಾಗಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವಲ್ಲಿ ವಿಫಲರಾದ ವೈಭವ್ ಸೂರ್ಯವಂಶಿ 12 ಎಸೆತಗಳಲ್ಲಿ ಎರಡು ಬೌಂಡರಿಗಳು ಸೇರಿದಂತೆ ಕೇವಲ 11 ರನ್ ಗಳಿಸಿ ಔಟಾದರು. ಇನ್ನಿಂಗ್ಸ್‌ನ ಏಳನೇ ಓವರ್‌ನ ಮೊದಲ ಎಸೆತದಲ್ಲಿ ವೈಭವ್ ವಿಕೆಟ್ ಪತನವಾಯಿತು. ಹೀಗಾಗಿ ಭಾರತ ತಂಡ ಆರಂಭದಲ್ಲೇ ಒತ್ತಡಕ್ಕೆ ಒಳಗಾಯಿತು.

5 / 5
ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಮಾತ್ರವಲ್ಲದೆ, ಟೀಂ ಇಂಡಿಯಾದ ಅಗ್ರ ಕ್ರಮಾಂಕವೂ ಸಂಪೂರ್ಣವಾಗಿ ವಿಫಲವಾಯಿತು. ಜಾರ್ಜ್ ಮತ್ತು ವೈಭವ್ ನಂತರ, ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು ಮತ್ತು ವೇದಾಂತ್ ತ್ರಿವೇದಿ ಕೂಡ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ ಪೆವಿಲಿಯನ್‌ ಸೇರಿಕೊಂಡರು.