Virat Kohli: ಏಕದಿನ ಕ್ರಿಕೆಟ್ಗೆ ಕೊಹ್ಲಿ-ರೋಹಿತ್ ವಿದಾಯ?: ಕೇಳಿಬರುತ್ತಿವೆ ಹೀಗೊಂದು ಮಾತು
Rohit Sharma: ಭಾರತ ಕ್ರಿಕೆಟ್ ತಂಡ 2024 ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸಲಿದೆ. ಈ ಬಾರಿ ಟೀಮ್ ಇಂಡಿಯಾ ಅತಿ ಹೆಚ್ಚು ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನು ಆಡಲಿದ್ದು, ಏಕದಿನ ಪಂದ್ಯ ಇರುವುದು ಕೇವಲ ಮೂರು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಸ್ವರೂಪದಲ್ಲಿ ಮತ್ತೆ ಕಾಣಿಸುವುದು ಅನುಮಾನ ಎನ್ನಲಾಗಿದೆ.
1 / 6
ನವೆಂಬರ್ 19 ರ ದಿನಾಂಕವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ಭಗ್ನಗೊಂಡಿತು. ಆದರೆ ಈಗ 2024 ರ ಸರದಿ. ಹೊಸ ಅಧ್ಯಾಯದೊಂದಿಗೆ ಭಾರತ 50 ಓವರ್ಗಳ ಫಾರ್ಮೆಟ್ ಅನ್ನು ಮುಂದುವರೆಸಬೇಕಿದೆ. ಆದರೆ, ಇದಕ್ಕೂ ಮುನ್ನ ಶಾಕಿಂಗ್ ವಿಚಾರವೊಂದು ಹರಿದಾಡುತ್ತಿದೆ.
2 / 6
2024ರಲ್ಲಿ ಟೀಮ್ ಇಂಡಿಯಾ ಕೇವಲ ಮೂರು ಏಕದಿನ ಪಂದ್ಯಗಳನ್ನಷ್ಟೇ ಆಡಲಿದೆ. ಅಂದರೆ ಕಳೆದ ವರ್ಷ ಅತಿ ಹೆಚ್ಚು ಓಡಿಐ ಪಂದ್ಯಗಳನ್ನು ಆಡಿದ ಭಾರತ ಈ ವರ್ಷ ಆಡುವುದು ಕೇವಲ ಮೂರು ಪಂದ್ಯ. ಟೀಮ್ ಇಂಡಿಯಾ 2024ರ ವರ್ಷವನ್ನು ಟೆಸ್ಟ್ ಪಂದ್ಯದೊಂದಿಗೆ ಆರಂಭಿಸುತ್ತಿದೆ. ಜೊತೆಗೆ ವರ್ಷವಿಡೀ ಸುಮಾರು 15 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
3 / 6
ಭಾರತಕ್ಕೆ ಏಕದಿನ ಪಂದ್ಯಗಳಿರುವುದು ಕೇವಲ 3 ಮಾತ್ರ. ಹೀಗಿರುವಾಗ ಟೀಮ್ ಇಂಡಿಯಾದ ಹಿರಿಯ ಆಟಗಾರರು ಈ ಪಂದ್ಯಗಳಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. 2024ರಲ್ಲಿ ನಡೆಯಲಿರುವ ಭಾರತ ತಂಡದ ಮೂರು ODI ಪಂದ್ಯಗಳು ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಅವರ ನೆಲದಲ್ಲಿ ನಡೆಯಲಿದೆ.
4 / 6
ಮೂರು ಏಕದಿನ ಹೊರತುಪಡಿಸಿ ಭಾರತ ತಂಡ ವರ್ಷವಿಡೀ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಷ್ಟೇ ಆಡಲಿದೆ. ಈ ವರ್ಷ ಐಸಿಸಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಭಾರತ ತಂಡವು ಈ ಸ್ವರೂಪದ ಮೇಲೆ ಕೇಂದ್ರೀಕರಿಸುತ್ತದೆ. ಹೀಗಿರುವಾಗ ಕಳೆದ ಒಂದೂವರೆ ದಶಕದಿಂದ ಏಕದಿನ ಕ್ರಿಕೆಟ್ ಅನ್ನು ಆಳಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ನಿವೃತ್ತಿಯ ಮಾತು ಕೇಳಿಬರುತ್ತಿದೆ.
5 / 6
ಕೊಹ್ಲಿ-ರೋಹಿತ್ ಈ ಹಿಂದೆಯೂ ಕಡಿಮೆ ಏಕದಿನ ಸರಣಿಗಳನ್ನು ಆಡುತ್ತಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್ ಇದ್ದ ಕಾರಣ ಇವರು ಈ ಮಾದರಿಯಲ್ಲಿ ಆಡಿದ್ದರು. ಆದರೆ ಈ ವರ್ಷ, ಕೇವಲ ಮೂರು ಏಕದಿನ ಪಂದ್ಯಗಳು ಇರುವುದರಿಂದ, ಇಬ್ಬರೂ ಆಟಗಾರರು ಈ ವರ್ಷ ಕೊನೆಯ ಬಾರಿಗೆ ಏಕದಿನ ಮಾದರಿಯಲ್ಲಿ ಆಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
6 / 6
ರೋಹಿತ್ ಶರ್ಮಾಗೆ ಈಗ 36 ವರ್ಷ ಮತ್ತು ವಿರಾಟ್ ಕೊಹ್ಲಿಗೆ 35 ವರ್ಷ, ಇಬ್ಬರ ಗಮನವು ಈ ವರ್ಷದ ಟಿ20 ವಿಶ್ವಕಪ್ ಮತ್ತು ಉಳಿದ 15 ಟೆಸ್ಟ್ ಪಂದ್ಯಗಳ ಮೇಲೆ ಕೇಂದ್ರೀಕೃತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ 3-ಪಂದ್ಯಗಳ ODI ಸ್ವರೂಪದ ಮೇಲೆ ಕೇಂದ್ರೀಕರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಏಕದಿನ ವಿಶ್ವಕಪ್ ಫೈನಲ್ ಆಡಿರುವುದೇ ಇವರ ಕೊನೆಯ ಪಂದ್ಯ ಆಗಲಿದೆ ಎಂದು ಹೇಳಲಾಗುತ್ತಿದೆ.