Virat Kohli Captain: ಆರ್ಸಿಬಿಗೆ ವಿರಾಟ್ ಕೊಹ್ಲಿಯೇ ನಾಯಕ: ಬೆಂಗಳೂರು ತಂಡದಲ್ಲಿ ಆಗುತ್ತಾ ದೊಡ್ಡ ಬದಲಾವಣೆ?
RCB vs RR, IPL 2023: ಆರ್ಸಿಬಿ ತಂಡದ ಖಾಯಂ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ವಿರಾಟ್ ಕೊಹ್ಲಿ ಕ್ಯಾಪ್ಟನ್ ಸ್ಥಾನ ಅಲಂಕರಿಸಿದ್ದರು.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತ್ಯಜಿಸಿ ವರ್ಷಗಳು ಕಳೆದಿವೆ. ಆದರೆ, ಐಪಿಎಲ್ 2023ರಲ್ಲಿ ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 464 ದಿನಗಳ ಬಳಿಕ ನಾಯಕನ ಕ್ಯಾಪ್ ತೊಟ್ಟರು.
2 / 7
ಆರ್ಸಿಬಿ ತಂಡದ ಖಾಯಂ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದರು. ಕೊಹ್ಲಿ ಕ್ಯಾಪ್ಟನ್ ಸ್ಥಾನ ಅಲಂಕರಿಸಿದ್ದರು.
3 / 7
ಇದೀಗ ವಿರಾಟ್ ಕೊಹ್ಲಿ ಮುಂಬವರುವ ಎರಡು ಪಂದ್ಯಗಳಲ್ಲೂ ನಾಯಕನಾಗಿ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ. ಇಂಜುರಿಯಿಂದ ಸಂಪೂರ್ಣ ಗುಣಮಖರಾಗದ ಡುಪ್ಲೆಸಿಸ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಗುಳಿಯಬಹುದು ಅಥವಾ ಪುನಃ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಳ್ಳಬಹುದು.
4 / 7
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿ 24 ರನ್ಗಳ ಜಯ ಸಾಧಿಸಿತ್ತು. ಕೊಹ್ಲಿ 59 ಹಾಗೂ ಡುಪ್ಲೆಸಿಸ್ 84 ರನ್ ಗಳಿಸಿದ್ದರು. ಮೊಹಮ್ಮದ್ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದ್ದರು.
5 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿದೆ. ಇದಾದ ಬಳಿಕ ಏಪ್ರಿಲ್ 26ಕ್ಕೆ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ.
6 / 7
ಆರ್ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಗೇಮ್ ಅಭಿಯಾನದೊಂದಿಗೆ ಕಣಕ್ಕಿಳಿಯಲಿದೆ. ಹಸಿರು ಜೆರ್ಸಿ ತೊಟ್ಟು ಆಡುವ ಮೂಲಕ ಮರವನ್ನು ಉಳಿಸಿ-ಬೆಳೆಸುವ ಬಗ್ಗೆ ಸಂದೇಶ ಸಾರಲಿದೆ. ಆರ್ಸಿಬಿ 2011 ರಿಂದ ಈ ಅಭಿಯಾನ ನಡೆಸುತ್ತಿದ್ದು, ಈ ಮೂಲಕ ಪರಿಸರ ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸುತ್ತಿದೆ.
7 / 7
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2023 ಪಾಯಿಂಟ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿದೆ. ಆಡಿದ ಆರು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಮೂರರಲ್ಲಿ ಸೋಲು ಕಂಡು 6 ಅಂಕ ಸಂಪಾದಿಸಿ -0.068 ರನ್ರೇಟ್ ಹೊಂದಿದೆ.
Published On - 11:25 am, Sat, 22 April 23