Virat Kohli: ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ ಪುಡಿ ಮಾಡಲಿರುವ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ

|

Updated on: Mar 30, 2023 | 10:09 AM

IPL 2023, RCB: ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಐಪಿಎಲ್​ನಲ್ಲಿ ಈಗಾಗಲೇ ಅನೇಕ ದಾಖಲೆ ಮಾಡಿರುವ ಕಿಂಗ್ ಕೊಹ್ಲಿ ಐಪಿಎಲ್ 2023 ರಲ್ಲೂ ನೂತನ ರೆಕಾರ್ಡ್ ಸೃಷ್ಟಿಸಲಿದ್ದಾರೆ.

1 / 7
ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯಕ್ಕೆ ಸಜ್ಜಾಗಿ ನಿಂತಿದೆ. ಮಾರ್ಚ್ 31 ರಂದು ಐಪಿಎಲ್ 2023 ಕ್ಕೆ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗುತ್ತಿದೆ.

2 / 7
ಈ ಬಾರಿ ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಇದಕ್ಕಾಗಿ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಪ್ಲೇಯರ್ಸ್ ಭರ್ಜರಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ.

3 / 7
ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಐಪಿಎಲ್​ನಲ್ಲಿ ಈಗಾಗಲೇ ಅನೇಕ ದಾಖಲೆ ಮಾಡಿರುವ ಕಿಂಗ್ ಕೊಹ್ಲಿ ಐಪಿಎಲ್ 2023 ರಲ್ಲೂ ನೂತನ ರೆಕಾರ್ಡ್ ಸೃಷ್ಟಿಸಲಿದ್ದಾರೆ.

4 / 7
ಐಪಿಎಲ್​ನಲ್ಲಿ 100 ಕ್ಯಾಚ್: ಕೊಹ್ಲಿ ಅದ್ಭುತ ಫೀಲ್ಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಈವರೆಗೆ ಐಪಿಎಲ್​ನಲ್ಲಿ 93 ಕ್ಯಾಚ್​ಗಳನ್ನು ಪಡೆದು ಅತಿ ಹೆಚ್ಚು ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸುರೇಶ್ ರೈನಾ (109 ಕ್ಯಾಚ್) ಇದ್ದಾರೆ. ಕೊಹ್ಲಿ ಇನ್ನು ಏಳು ಕ್ಯಾಚ್ ಹಿಡಿದರೆ 100 ಕ್ಯಾಚ್ ಪಡೆದ ಸಾಧನೆ ಮಾಡಲಿದ್ದಾರೆ.

5 / 7
ಅತಿ ಹೆಚ್ಚು ಐಪಿಎಲ್ ಶತಕ: ಕೊಹ್ಲಿ ಬ್ಯಾಟ್​ನಿಂದ ಐಪಿಎಲ್​ನಲ್ಲಿ ಶತಕ ಬರದೆ ವರ್ಷಗಳೇ ಕಳೆದಿವೆ. ಇದುವರೆಗೆ 5 ಶತಕವನ್ನು ಸಿಡಿಸಿರುವ ಕೊಹ್ಲಿ ಇನ್ನೊಂದು ಸೆಂಚುರಿ ಬಾರಿಸಿದರೆ ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಕ್ರಿಸ್ ಗೇಲ್ (6 ಶತಕ) ಜೊತೆ ಜಂಟಿ ಸ್ಥಾನ ಹಂಚಿಕೊಳ್ಳಲಿದ್ದಾರೆ.

6 / 7
7,000 ಐಪಿಎಲ್ ರನ್: ಐಪಿಎಲ್ ಇತಿಹಾಸದಲ್ಲಿ ಈವರೆಗೆ ಗರಿಷ್ಠ ರನ್ ಕಲೆಹಾಕಿದವರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. 223 ಪಂದ್ಯಗಳಿಂದ 6,624 ರನ್ ಗಳಿಸಿದ್ದಾರೆ. ಕೊಹ್ಲಿ ಐಪಿಎಲ್ 2023 ರಲ್ಲಿ 376 ರನ್ ಗಳಿಸಿದರೆ ಐಪಿಎಲ್​ನಲ್ಲಿ 7,000 ಕಲೆಹಾಕಿದ ಮೊಟ್ಟ ಮೊದಲ ಪ್ಲೇಯರ್ ಆಗಲಿದ್ದಾರೆ.

7 / 7
ಏಪ್ರಿಲ್ 2 ರಂದು ಮುಂಬೈ ವಿರುದ್ಧ ಆಡಲಿರುವ ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡದ ಮೂವರು ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ. ರಜತ್ ಪಾಟಿದಾರ್ ಪಾದದ ನೋವಿನಿಂದ ಬಳಲುತ್ತಿದ್ದಾರೆ. ವನಿಂದು ಹಸರಂಗ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಬೇಕಿದೆ. ಜೋಶ್ ಹ್ಯಾಝಲ್​ವುಡ್ ಕಾಲಿನ ಗಾಯದಿಂದಾಗಿ ಇನ್ನೂ ಕೂಡ ತಂಡವನ್ನು ಸೇರಿಕೊಂಡಿಲ್ಲ.

Published On - 10:09 am, Thu, 30 March 23