ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಹೇಗಿದೆ?: ಇಲ್ಲಿದೆ ಸಂಪೂರ್ಣ ವಿವರ
Virat Kohli record in Asia Cup: ಏಷ್ಯಾಕಪ್ ಮುಗಿದ ಬೆನ್ನಲ್ಲೇ ಐಸಿಸಿ ಏಕದಿನ ವಿಶ್ವಕಪ್ ಕೂಡ ಆರಂಭವಾಗುವ ಹಿನ್ನಲೆಯಲ್ಲಿ ಕೊಹ್ಲಿಗೆ ಈ ಟೂರ್ನಿ ಪ್ರಮುಖವಾಗಿದೆ. ಫಾರ್ಮ್ ಕಂಡುಕೊಂಡು ಅದೇ ಲಯದಲ್ಲಿ ವಿಶ್ವಕಪ್ನಲ್ಲೂ ಬ್ಯಾಟ್ ಬೀಸ ಬೇಕಿದೆ. ಈವರೆಗೆ 275 ODI ಪಂದ್ಯಗಲ್ಲಿ ಕೊಹ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ.
1 / 8
ಬಹುನಿರೀಕ್ಷಿತ ಏಷ್ಯಾಕಪ್ 2023 ಟೂರ್ನಿಗೆ ದಿನಗಣನೆ ಶುರುವಾಗಿದೆ. ಈ ಬಾರಿ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಗಸ್ಟ್ 30 ರಿಂದ ಈ ಮಹತ್ವದ ಟೂರ್ನಿ ಆರಂಭವಾಗಲಿದೆ. ಸೆಪ್ಟೆಂಬರ್ 17 ರವರೆಗೆ ಇದು ನಡೆಯಲಿದೆ. ಏಷ್ಯಾಕಪ್ 2023 ರಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ.
2 / 8
ಏಷ್ಯಾಕಪ್ ಮುಗಿದ ಬೆನ್ನಲ್ಲೇ ಐಸಿಸಿ ಏಕದಿನ ವಿಶ್ವಕಪ್ ಕೂಡ ಆರಂಭವಾಗುವ ಹಿನ್ನಲೆಯಲ್ಲಿ ಕೊಹ್ಲಿಗೆ ಈ ಟೂರ್ನಿ ಪ್ರಮುಖವಾಗಿದೆ. ಫಾರ್ಮ್ ಕಂಡುಕೊಂಡು ಅದೇ ಲಯದಲ್ಲಿ ವಿಶ್ವಕಪ್ನಲ್ಲೂ ಬ್ಯಾಟ್ ಬೀಸ ಬೇಕಿದೆ. ಈವರೆಗೆ 275 ODI ಪಂದ್ಯಗಲ್ಲಿ ಕೊಹ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ.
3 / 8
ಏಷ್ಯಾಕಪ್‌ನಲ್ಲಿ ಕೊಹ್ಲಿಯ ದಾಖಲೆಯನ್ನು ನೋಡುವುದಾದರೆ, ಇವರಿಗೆ 2022 ಟೂರ್ನಿ ಅದ್ಭುತವಾಗಿತ್ತು. ಯುಎಇಯಲ್ಲಿ ಟಿ 20 ಸ್ವರೂಪದಲ್ಲಿ ನಡೆದ ಈ ಟೂರ್ನಿಯಲ್ಲಿ ಕೊಹ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 92 ಸರಾಸರಿಯಲ್ಲಿ ಮತ್ತು 147.59 ಸ್ಟ್ರೈಕ್ ರೇಟ್‌ನಲ್ಲಿ 276 ರನ್ ಗಳಿಸಿದರು. ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಕೊಹ್ಲಿ ಇಲ್ಲಿ ದೊಡ್ಡ ಸ್ಕೋರ್ ಕಲೆಹಾಕಿ ಫಾರ್ಮ್‌ಗೆ ಮರಳಿದರು.
4 / 8
2022 ರ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ 1000 ದಿನಗಳ ಕಾಲ ನಡೆದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಶತಕದ ಬರವನ್ನು ನೀಗಿಸಿದರು. ಒಟ್ಟು ಆರು ಪಂದ್ಯಗಳಲ್ಲಿ 296 ರನ್ ಕಲೆಹಾಕಿದರು. ಏಷ್ಯಾಕಪ್‌ನಲ್ಲಿ ಏಕದಿನ ಮಾದರಿಯಲ್ಲಿ ಭಾರತ ಪರ ಕೊಹ್ಲಿ 11 ಪಂದ್ಯಗಳನ್ನು ಆಡಿದ್ದಾರೆ. ಅವರು ಮೂರು ಶತಕಗಳೊಂದಿಗೆ 61.30 ರ ಸರಾಸರಿಯಲ್ಲಿ 613 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
5 / 8
ಕೊಹ್ಲಿ 2012 ರಲ್ಲಿ ಮಿರ್ಪುರದಲ್ಲಿ ಶ್ರೀಲಂಕಾ ವಿರುದ್ಧ 108, ಮಿರ್ಪುರದಲ್ಲಿ ಪಾಕಿಸ್ತಾನದ ವಿರುದ್ಧ 183, ಮತ್ತು 2014 ರಲ್ಲಿ ಬಾಂಗ್ಲಾದೇಶದ ವಿರುದ್ಧ ಫತುಲ್ಲಾದಲ್ಲಿ 136 ರನ್ ಗಳಿಸಿದರು. 2010 ರಲ್ಲಿ ಶ್ರೀಲಂಕಾದಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಕೊಹ್ಲಿ 11, 18, 10, ಮತ್ತು 28 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಿರಲಿಲ್ಲ.
6 / 8
ಏಷ್ಯಾಕಪ್ ಟಿ20 ಮಾದರಿಯಲ್ಲಿ ಭಾರತದ ಬ್ಯಾಟರ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 10 ಪಂದ್ಯಗಳಲ್ಲಿ 85.80 ಸರಾಸರಿಯಲ್ಲಿ 429 ರನ್‌ಗಳನ್ನು ಸಿಡಿಸಿದ್ದಾರೆ. ಯುಎಇಯಲ್ಲಿ 2022 ರ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ 61 ಎಸೆತಗಳಲ್ಲಿ 122* ರನ್ ಗಳಿಸಿರುವುದು ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೆ, 2016 ರ ಆವೃತ್ತಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ಅವರು 139 ರನ್ ಚೇಸ್ ಮಾಡವಾಗ 47 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಬಾಚಿಕೊಂಡಿದ್ದರು.
7 / 8
ಸದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ಬೀಡುಬಿಟ್ಟಿರುವ ಭಾರತ ತಂಡದ ಆಟಗಾರರು ಏಷ್ಯಾಕಪ್ 2023ಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಒಟ್ಟು 6-ದಿನಗಳ ಕಾಲ ಟೀಮ್ ಇಂಡಿಯಾಕ್ಕೆ ಏಷ್ಯಾಕಪ್ ಶಿಬಿರ ಏರ್ಪಡಿಸಲಾಗಿದ್ದು, 3ನೇ ದಿನದಂದು ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಬ್ಯಾಟಿಂಗ್ ಪ್ರಯೋಗವನ್ನು ನಡೆಸಲಾಯಿತು.
8 / 8
ವಿರಾಟ್ ಕೊಹ್ಲಿ ಸ್ಪಿನ್ನರ್ಗಳ ವಿರುದ್ಧ ಹೆಚ್ಚು ಅಭ್ಯಾಸ ನಡೆಸಿದರು. ನೆಟ್ಸ್‌ನಲ್ಲಿ ಸ್ಪಿನ್ ಬೌಲರ್‌ಗಳನ್ನು ಎದುರಿಸಿ ಕೆಲವು ಸ್ವೀಪ್ ಶಾಟ್‌ಗಳನ್ನು ಆಡಿದರು. 34 ವರ್ಷದ ವರುಣ್ ಚಕ್ರವರ್ತಿ, ಹೃತಿಕ್ ಶೋಕೀನ್ ಮತ್ತು ರಾಹುಲ್ ಚಹಾರ್ ವಿರುದ್ಧ ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟ್ ಮಾಡುತ್ತಿರುವುದು ಕಂಡುಬಂತು.