IND Playing XI vs WI 3rd ODI: ನಿರ್ಣಾಯಕ ಕದನದಲ್ಲಿ ಕೊಹ್ಲಿ ಆಡ್ತಾರಾ?: ಇಲ್ಲಿದೆ ನೋಡಿ ಭಾರತದ ಸಂಭಾವ್ಯ ಪ್ಲೇಯಿಂಗ್ XI

|

Updated on: Aug 01, 2023 | 12:00 PM

India vs West Indies: ಹಿಂದಿನ ಎರಡೂ ಏಕದಿನದಲ್ಲಿ ಕಣಕ್ಕಿಳಿಯದ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಆಡುತ್ತಾರ ಎಂಬುದು ನೋಡಬೇಕಿದೆ. ಇಲ್ಲಿದೆ ನೋಡಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI.

1 / 9
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಇಂದು ಟ್ರಿನಿಡಾಡ್​ನ ಬ್ರಿಯನ್ ಲಾರಾ ಸ್ಟೇಡಿಯಂ ಮೂರನೇ ಏಕದಿನ ಪಂದ್ಯ ನಡೆಲಿದೆ. ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

2 / 9
ಕಳೆದ ಎರಡೂ ಏಕದಿನ ಪಂದ್ಯದಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲೂ ಮಾಡುತ್ತಾ ಎಂಬುದು ನೋಡಬೇಕಿದೆ. ಯಾಕೆಂದರೆ ಸರಣಿ ಗೆಲುವು ಭಾರತಕ್ಕೆ ಮುಖ್ಯವಾಗಿದೆ.

3 / 9
2006 ರಿಂದ ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಸೋತ ದಾಖಲೆ ಇಲ್ಲ. ಹೀಗಾಗಿ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

4 / 9
ಮುಖ್ಯವಾಗಿ ಹಿಂದಿನ ಎರಡೂ ಏಕದಿನದಲ್ಲಿ ಕಣಕ್ಕಿಳಿಯದ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಆಡುತ್ತಾರ ಎಂಬುದು ನೋಡಬೇಕಿದೆ. ಕೊಹ್ಲಿ ಲಭ್ಯತೆ ಬಗ್ಗೆ ನಾನಾ ಸುದ್ದಿ ಹರಿದಾಡುತ್ತಿದೆ. ಕೆಲ ವರದಿಗಳ ಪ್ರಕಾರ ಕೊಹ್ಲಿ ತವರಿಗೆ ಮರಳಿದ್ದಾರೆ ಎಂದರೆ, ಇನ್ನೂ ಕೆಲ ವರದಿ ವಿರಾಟ್ ತೃತೀಯ ಏಕದಿನದಲ್ಲಿ ಆಡುತ್ತಾರೆ ಎಂದು ಹೇಳಿದೆ.

5 / 9
ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳುವುದು ಮುಖ್ಯವಾಗಿದೆ. ಸಂಜು ಸ್ಯಾಮ್ಸನ್​ಗೆ ಕೊನೆಯ ಅವಕಾಶ ಸಿಗುತ್ತಾ ನೋಡಬೇಕು. ಇಶಾನ್ ಕಿಶನ್​ಗೆ ವಿಶ್ರಾಂತಿ ನೀಡಿದರೆ ಸಂಜು ಆಡಬಹುದು. ಆದರೆ, ಈ ಪ್ರಯೋಗ ನಡೆಸುತ್ತಾ ಎಂಬುದೆ ಕುತೂಹಲ.

6 / 9
ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವುದರಿಂದ ರೋಹಿತ್-ಗಿಲ್ ಓಪನರ್ ಆಗಿ ಆಡಬಹುದು. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಕಣಕ್ಕಿಳಿದರೆ ನಂತರದಲ್ಲಿ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕಣಕ್ಕಿಳಿಯಬಹುದು.

7 / 9
ಭಾರತದ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ಕಳೆದ ಎರಡು ಪಂದ್ಯಗಳಿಂದ ಬೆಂಚ್ ಕಾದಿರುವ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಇಂದು ಆಡುವ ಸಾಧ್ಯತೆ ಇದೆ. ಕುಲ್ದೀಪ್ ಯಾದವ್​ಗೆ ವಿಶ್ರಾಂತಿ ನೀಡಬಹುದು.

8 / 9
ವೇಗಿಗಳಾಗಿ ಶಾರ್ದೂಲ್ ಥಾಕೂರ್, ಮುಖೇಶ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಕಾಣಿಸಿಕೊಳ್ಳಲಿದ್ದಾರೆ. ಜಯದೇವ್ ಉನಾದ್ಕಟ್ ಕೂಡ ಆಯ್ಕೆಯಲ್ಲಿದ್ದಾರೆ.

9 / 9
ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಯುಜ್ವೇಂದ್ರ ಚಹಲ್, ಮುಖೇಶ್ ಕುಮಾರ್, ಉಮ್ರಾನ್ ಮಲಿಕ್.