ಸೋತು ಸೋತು ಸುಣ್ಣವಾಗಿ ಹೀನಾಯ ದಾಖಲೆ ಬರೆದ ವೆಸ್ಟ್ ಇಂಡೀಸ್

Updated on: Jul 29, 2025 | 2:30 PM

West Indies: ವೆಸ್ಟ್ ಇಂಡೀಸ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ 18 ಟಿ20 ಪಂದ್ಯಗಳಲ್ಲಿ ವಿಂಡೀಸ್ ಪಡೆ ಗೆದ್ದಿರುವುದು ಕೇವಲ 2 ಮ್ಯಾಚ್​ಗಳನ್ನು ಮಾತ್ರ ಎಂದರೆ ನಂಬಲೇಬೇಕು. ಹೀಗೆ ಗೆದ್ದಿರುವುದು ಶ್ರೀಲಂಕಾ ಮತ್ತು ಐರ್ಲೆಂಡ್ ವಿರುದ್ಧ ಮಾತ್ರ. ಇದರ ನಡುವೆ ಬಾಂಗ್ಲಾದೇಶ್, ಶ್ರೀಲಂಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗಳನ್ನು ಸೋತಿದೆ. 

1 / 5
ವೆಸ್ಟ್ ಇಂಡೀಸ್ ತಂಡವು 2005 ರಿಂದ ಟಿ20 ಸರಣಿ ಆಡುತ್ತಿದೆ. ಕಳೆದ 20 ವರ್ಷಗಳಲ್ಲಿ ವಿಂಡೀಸ್ ಪಡೆ ಹಲವು ಏರಿಳಿತ ಕಂಡಿದೆ. ಇದರ ನಡುವೆ 2012 ರಲ್ಲಿ ಹಾಗೂ 2014 ರಲ್ಲಿ ಟಿ20 ವಿಶ್ವಕಪ್ ಅನ್ನು ಸಹ ಗೆದ್ದುಕೊಂಡಿದೆ. ಹೀಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ಕೆರಿಬಿಯನ್ ಪಡೆ ಈ ಬಾರಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಕಾಡೆ ಮಲಗಿ ಭಾರೀ ಮುಖಭಂಗ ಅನುಭವಿಸಿದ್ದಾರೆ.

2 / 5
ಹೌದು, ಟಿ20 ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವು 5-0 ಅಂತರದಿಂದ ಸರಣಿ ಸೋತಿದೆ. ಟಿ20 ಕ್ರಿಕೆಟ್​ನ ಬಲಿಷ್ಠ ಪಡೆ ಎಂದೇ ಗುರುತಿಸಿಕೊಂಡಿದ್ದ ವೆಸ್ಟ್ ಇಂಡೀಸ್ ತಂಡವನ್ನು ಅವರ ತವರಿನಲ್ಲೇ ಸತತ 5 ಮ್ಯಾಚ್​ಗಳಲ್ಲಿ ಸೋಲಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ. ಈ ಮೂಲಕ ಆಸೀಸ್ ಪಡೆ ಇದೇ ಮೊದಲ ಬಾರಿಗೆ 5-0 ಅಂತರದಿಂದ ಟಿ20 ಸರಣಿ ಗೆದ್ದ ದಾಖಲೆ ಬರೆದಿದೆ.

3 / 5
ಅತ್ತ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವು 5-0 ಅಂತರದಿಂದ ಟಿ20 ಸರಣಿ ಸೋತಿದೆ. ಕಳೆದ 20 ವರ್ಷಗಳಲ್ಲಿ 7 ಬಾರಿ ವೆಸ್ಟ್ ಇಂಡೀಸ್ 5 ಪಂದ್ಯಗಳ ಟಿ20 ಸರಣಿ ಆಡಿದೆ. ಈ ವೇಳೆ ಒಮ್ಮೆಯೂ ಐದು ಮ್ಯಾಚ್​ಗಳಲ್ಲೂ ಪರಾಜಯಗೊಂಡಿರಲಿಲ್ಲ. ಆದರೆ ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಪಂದ್ಯ ಗೆಲ್ಲಲು ಆತಿಥೇಯರಿಗೆ ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

4 / 5
ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ 3 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು 2ನೇ ಮತ್ತು 3ನೇ ಟಿ20 ಪಂದ್ಯಗಳಲ್ಲಿ ಕ್ರಮವಾಗಿ 8 ಮತ್ತು 6 ವಿಕೆಟ್​ಗಳಿಂದ ವೆಸ್ಟ್ ಇಂಡೀಸ್ ಸೋಲೊಪ್ಪಿಕೊಂಡಿತ್ತು. ಹಾಗೆಯೇ 4ನೇ ಟಿ20 ಪಂದ್ಯದಲ್ಲಿ 3 ವಿಕೆಟ್​ಗಳ ಜಯ ಸಾಧಿಸಿದ್ದ ಆಸ್ಟ್ರೇಲಿಯಾ, 5ನೇ ಟಿ20 ಪಂದ್ಯವನ್ನೂ 3 ವಿಕೆಟ್​ಗಳಿಂದ ಗೆದ್ದುಕೊಂಡಿದೆ.

5 / 5
ಈ ಮೂಲಕ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 5-0 ಅಂತರದಿಂದ ಬಗ್ಗು ಬಡಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಇತ್ತ ಕಳೆದ 20 ವರ್ಷಗಳಿಂದ ಒಂದೇ ಸರಣಿಯಲ್ಲಿ 5 ಪಂದ್ಯಗಳನ್ನು ಸೋಲದ ವೆಸ್ಟ್ ಇಂಡೀಸ್ ಕೊನೆಗೂ ಕಾಂಗರೂ ಪಡೆ ಮುಂದೆ ಮಂಡಿಯೂರಿ ಭಾರೀ ಮುಖಭಂಗ ಅನುಭವಿಸಿದೆ.