ಧವನ್- ಆಯೇಷಾ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ? ಆಯೇಷಾರ ಹಿನ್ನೆಲೆ ಏನು?
Shikhar Dhawan And Ayesha Mukherjee's Love Story: ಪ್ರಸ್ತುತ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಈ ಇಬ್ಬರ ಪ್ರೇಮ್ ಕಹಾನಿ ಮಾತ್ರ ತುಂಬಾ ಕುತೂಹಲಕಾರಿಯಾಗಿದೆ. ವಾಸ್ತವವಾಗಿ ಈ ಇಬ್ಬರ ನಡುವೆ ಪ್ರೀತಿ ಮೂಡಲು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಶಿಖರ್ ಧವನ್ ಸಹ ಆಟಗಾರ ಹರ್ಭಜನ್ ಸಿಂಗ್ ಕಾರಣ.
1 / 9
ಕೌಟುಂಬಿಕ ಕಲಹದಿಂದಾಗಿ ವರ್ಷಗಳಿಂದ ದೂರ ದೂರ ಇದ್ದ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಮತ್ತು ಪತ್ನಿ ಆಯೇಷಾ ಮುಖರ್ಜಿ ಇಂದು ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ.
2 / 9
ವರ್ಷಗಟ್ಟಲೆ ತಂದೆ ಮತ್ತು ಮಗನನ್ನು ದೂರವಿರಿಸಿ ಕ್ರಿಕೆಟಿಗ ಶಿಖರ್ ಧವನ್ ಮಾನಸಿಕ ಯಾತನೆ ಅನುಭವಿಸುವಂತೆ ಪತ್ನಿ ಆಯೇಷಾ ಮುಖರ್ಜಿ ಮಾಡಿದ್ದಾರೆ ಎಂದು ನ್ಯಾಯಾಧೀಶ ಹರೀಶ್ ಕುಮಾರ್ ಅವರು ಪರಿಗಣಿಸಿ ವಿಚ್ಛೇದನಕ್ಕೆ ಅನುಮೋದನೆ ನೀಡಿದ್ದಾರೆ.
3 / 9
2012 ರಲ್ಲಿ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆಯೇಷಾ ಅವರಿಗೆ ಇದು ಎರಡನೇ ಮದುವೆ ಆಗಿತ್ತು. ಈ ಇಬ್ಬರು ದಂಪತಿಗಳಿಗೆ ಓರ್ವ ಮಗನಿದ್ದು, ಮಗನ ಖಾಯಂ ಕಸ್ಟಡಿಯ ಕುರಿತು ಯಾವುದೇ ಆದೇಶವನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ.
4 / 9
ಪ್ರಸ್ತುತ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಈ ಇಬ್ಬರ ಪ್ರೇಮ್ ಕಹಾನಿ ಮಾತ್ರ ತುಂಬಾ ಕುತೂಹಲಕಾರಿಯಾಗಿದೆ. ವಾಸ್ತವವಾಗಿ ಈ ಇಬ್ಬರ ನಡುವೆ ಪ್ರೀತಿ ಮೂಡಲು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಶಿಖರ್ ಧವನ್ ಸಹ ಆಟಗಾರ ಹರ್ಭಜನ್ ಸಿಂಗ್ ಕಾರಣ.
5 / 9
ಹರ್ಭಜನ್ ಸಿಂಗ್ ಅವರ ಫೇಸ್‌ಬುಕ್ ಫ್ರೆಂಡ್ ಲಿಸ್ಟ್‌ನಲ್ಲಿ ಆಯೇಷಾರನ್ನು ನೋಡಿದ ಶಿಖರ್ ಧವನ್, ಫೋಟೋವನ್ನು ನೋಡಿದ ತಕ್ಷಣ ಆಯೇಷಾರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದಾದ ನಂತರ ಶಿಖರ್ ಆಯೇಷಾಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು.
6 / 9
ಬಳಿಕ ಇಬ್ಬರಿಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಫೇಸ್ ಬುಕ್ನಲ್ಲಿಯೇ ಇಬ್ಬರಿಗೂ ಪ್ರೀತಿ ಹುಟ್ಟಿಕೊಂಡಿದೆ. ಬಳಿಕ2009ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಇಬ್ಬರು ಇದಾದ ಬಳಿಕ ಧವನ್ 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
7 / 9
ಇದು ಶಿಖರ್ ಅವರ ಮೊದಲ ಮದುವೆಯಾಗಿದ್ದರೆ, ಆಯೇಷಾ ಅವರಿಗೆ ಎರಡನೇ ಮದುವೆಯಾಗಿತ್ತು. ಆಸ್ಟ್ರೇಲಿಯಾದ ಉದ್ಯಮಿಯೊಂದಿಗೆ ಆಯೇಷಾ ಮೊದಲ ಮದುವೆಯಾಗಿದ್ದರು. ಆದರೆ ಈ ಸಂಬಂಧ ಮುರಿದುಬಿದ್ದಿತ್ತು.
8 / 9
ಆಯೇಷಾ ಮತ್ತು ಅವರ ಮೊದಲ ಪತಿಗೆ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಶಿಖರ್ ಮತ್ತು ಆಯೇಷಾ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ.
9 / 9
ಆಯೇಷಾ ಮುಖರ್ಜಿ ಮೂಲತಃ ಆಂಗ್ಲೋ-ಇಂಡಿಯನ್. ಇವರ ತಂದೆ ಭಾರತೀಯರಾದರೆ ತಾಯಿ ಬ್ರಿಟಿಷ್ ಮೂಲದವರಾಗಿದ್ದಾರೆ. ಆಯೇಷಾ ಮೆಲ್ಬೋರ್ನ್ ಕಿಕ್ ಬಾಕ್ಸರ್ ಕೂಡ ಆಗಿದ್ದಾರೆ. ಅವರು ಯಶಸ್ವಿ ಕಿಕ್ ಬಾಕ್ಸರ್ ಆಗಿದ್ದು, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಖ್ಯಾತಿ ಹೊಂದಿದ್ದಾರೆ.
Published On - 10:57 am, Thu, 5 October 23