ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಯಲ್ಲಿ ಸೋಲುಂಡ ಭಾರತಕ್ಕೆ ಮತ್ತೊಂದು ಆಘಾತ

|

Updated on: Aug 05, 2023 | 7:37 AM

IND vs WI 1st T20I: ಸೋಲಿನ ಆಘಾತದಲ್ಲಿರುವ ಟೀಮ್ ಇಂಡಿಯಾಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ಹಾರ್ದಿಕ್ ಪಾಂಡ್ಯ ಪಡೆಗೆ ಐಸಿಸಿ ಫೈನ್ ಹಾಕಿದೆ. ಭಾರತವು ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಐಸಿಸಿ ತನ್ನ ಪಂದ್ಯದ ಶುಲ್ಕದ ಐದು ಪ್ರತಿಶತದಷ್ಟು ದಂಡವನ್ನು ವಿಧಿಸಿದೆ.

1 / 8
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ವಶಪಡಿಸಿಕೊಂಡ ಭಾರತ ಇದೀಗ ಟಿ20 ಸರಣಿ ಆಡುತ್ತಿದೆ. ಆದರೆ, ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು. ಟ್ರಿನಿಡಾಡ್​ನ ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ರನ್​ಗಳ ರೋಚಕ ಜಯ ಸಾಧಿಸಿತು.

2 / 8
ಈ ಸೋಲಿನ ಆಘಾತದಲ್ಲಿರುವ ಟೀಮ್ ಇಂಡಿಯಾಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತೊಂದು ಶಾಕ್ ನೀಡಿದೆ. ಹಾರ್ದಿಕ್ ಪಾಂಡ್ಯ ಪಡೆಗೆ ಐಸಿಸಿ ಫೈನ್ ಹಾಕಿದೆ.  ಭಾರತವು ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಐಸಿಸಿ ತನ್ನ ಪಂದ್ಯದ ಶುಲ್ಕದ ಐದು ಪ್ರತಿಶತದಷ್ಟು ದಂಡವನ್ನು ವಿಧಿಸಿದೆ.

3 / 8
ಅತ್ತ ವೆಸ್ಟ್ ಇಂಡೀಸ್ ತಂಡಕ್ಕೆ ಕೂಡ ಇದೇ ಅಪರಾಧಕ್ಕಾಗಿ ಪಂದ್ಯದ 10 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಹಾರ್ದಿಕ್ ಪಾಂಡ್ಯ ಮತ್ತು ರೋವ್‌ಮನ್ ಪೊವೆಲ್, ನಿಗದಿತ ಸಮಯದಲ್ಲಿ ಓವರ್‌ಗಳ ಸಂಖ್ಯೆಯನ್ನು ಪೂರ್ಣಗೊಳಿಸದಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.

4 / 8
ಭಾರತ ನಿಗದಿತ ಅವಧಿಗಿಂತ ಒಂದು ಓವರ್‌ ಹಿಂದಿದ್ದರೆ, ವೆಸ್ಟ್‌ ಇಂಡೀಸ್‌ 2 ಓವರ್‌ ಹಿಂದಿತ್ತು. ಆದ್ದರಿಂದ, ಪಾಂಡ್ಯ ಪಡೆಗೆ ಪಂದ್ಯದ ಶುಲ್ಕದ 5 ಪ್ರತಿಶತ ದಂಡ ವಿಧಿಸಲಾಯಿತು, ಅಂತೆಯೆ ಆತಿಥೇಯರು 10 ಪ್ರತಿಶತ ದಂಡವನ್ನು ಕಟ್ಟಬೇಕಾಗಿದೆ.

5 / 8
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅನುಸಾರವಾಗಿ, ನಿಧಾನಗತಿಯ ಓವರ್ ಮಾಡಿದ್ದಕ್ಕಾಗಿ ಆಟಗಾರರು ತಮ್ಮ ಪಂದ್ಯದ ಶುಲ್ಕವನ್ನು ದಂಡವಾಗಿ ಕಟ್ಟವೇಕಿದೆ. ಈ ದಂಡವು ಶೇಕಡಾ 5 ರಿಂದ 50 ರ ವರೆಗೆ ತಲುಪುತ್ತದೆ.

6 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ನಾಯಕ ರೋವ್‌ಮನ್ ಪೊವೆಲ್ 48 ರನ್, ಪೂರನ್ 41 ರನ್ ಬಾರಿಸಿದರು. ಭಾರತ ಪರ ಅರ್ಶ್​ದೀಪ್ ಸಿಂಗ್ ಹಾಗೂ ಯುಜ್ವೇಂದ್ರ ಚಹಲ್ 2 ವಿಕೆಟ್ ಪಡೆದರು.

7 / 8
ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ತಂಡದ ಪರ ತಿಲಕ್ ವರ್ಮಾ 39 ಮತ್ತು ಸೂರ್ಯಕುಮಾರ್ 21 ರನ್ ಗಳಿಸಿದ್ದೇ ಹೆಚ್ಚು. ಭಾರತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಸೋಲುಂಡಿತು. ವಿಂಡೀಸ್ ಪರ ಶೆಫರ್ಡ್, ಹೋಲ್ಡರ್ ಮತ್ತು ಮೆಖಾಯ್ ತಲಾ 2 ವಿಕೆಟ್ ಪಡೆದರು.

8 / 8
ಇದೀಗ 4 ರನ್​ಗಳ ರೋಚಕ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0 ಮುನ್ನಡೆ ಪಡೆದುಕೊಂಡಿದೆ. ಮುಂದಿನ ಪಂದ್ಯ ಆಗಸ್ಟ್ 6 ರಂದು ನಡೆಯಲಿದ್ದು, ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದೆ.