Updated on: Mar 13, 2022 | 4:39 PM
ವೆಸ್ಟ್ ಇಂಡೀಸ್ ಆಟಗಾರರು ಭಾರತ ವಿರುದ್ಧದ ಐಸಿಸಿ ಮಹಿಳಾ ODI ವಿಶ್ವಕಪ್ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ಗಾಗಿ ಪಂದ್ಯದ ಶೇಕಡಾ 40 ರಷ್ಟು ಸಂಪಾದನೆಯನ್ನು ದಂಡವಾಗಿ ಕಟ್ಟಬೇಕಿದೆ. ಸ್ಟೆಫನಿ ಟೇಲರ್ ಅವರ ತಂಡವು ನಿಗದಿತ ಸಮಯಕ್ಕಿಂತ ಎರಡು ಓವರ್ಗಳನ್ನು ಕಡಿಮೆ ಮಾಡಿತ್ತು. ಐಸಿಸಿ ಮ್ಯಾಚ್ ರೆಫರಿಗಳ ಅಂತರರಾಷ್ಟ್ರೀಯ ಪ್ಯಾನೆಲ್ನ ಸದಸ್ಯ ಸ್ಯಾಂಡ್ರೆ ಫಿಟ್ಜ್ ದಂಡವನ್ನು ವಿಧಿಸಲು ಸೂಚಿಸಿದ್ದರು. ಹೀಗಾಗಿ ವಿಂಡೀಸ್ಗೆ ದಂಡದ ಬರೆ ಬಿದ್ದಿದೆ.
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಹೇಳಿಕೆಯಲ್ಲಿ, "ಆಟಗಾರರು ಮತ್ತು ಬೆಂಬಲ ಸಿಬ್ಬಂದಿಯ ಕನಿಷ್ಠ ಓವರ್ ರೇಟ್ ಉಲ್ಲಂಘನೆಗಳ ಮೇಲಿನ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಆಟಗಾರರು ನಿಗದಿತ ಸಮಯದೊಳಗೆ ಬೌಲ್ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಅವರ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ ಎಂದಿದೆ.
Published On - 4:32 pm, Sun, 13 March 22