194 ಎಸೆತಗಳು… ಸ್ಪಿನ್ನರ್ಗಳೊಂದಿಗೆ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ
Australia vs England: ಇಂಗ್ಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಆ್ಯಡಂ ಝಂಪಾ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ 10 ಓವರ್ಗಳನ್ನು ಎಸೆದರು. ಇನ್ನು ಕೂಪರ್ ಕೊನೊಲಿ 4 ಓವರ್ ಎಸೆದರೆ, ಮ್ಯಾಥ್ಯೂ ಶಾರ್ಟ್ 2 ಓವರ್ ಬೌಲ್ ಮಾಡಿದರು. ಹಾಗೆಯೇ ಟ್ರಾವಿಸ್ ಹೆಡ್ 6.2 ಓವರ್ ಎಸೆದು 4 ವಿಕೆಟ್ ಕಬಳಿಸಿ ಮಿಂಚಿದರು.
1 / 7
ಬ್ರಿಸ್ಟಲ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿಶೇಷ ವಿಶ್ವ ದಾಖಲೆ ಬರೆದಿದೆ. ಅದು ಸಹ ಐವರು ಸ್ಪಿನ್ನರ್ಗಳನ್ನು ಬಳಸಿಕೊಳ್ಳುವ ಮೂಲಕ ಎಂಬುದೇ ವಿಶೇಷ.
2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಈ ಬ್ಯಾಟಿಂಗ್ ಅಬ್ಬರವನ್ನು ತಡೆಯಲು ಸ್ಮಿತ್ ಐವರು ಸ್ಪಿನ್ನರ್ಗಳನ್ನು ಬಳಸಿಕೊಂಡರು.
3 / 7
ಆ್ಯಡಂ ಝಂಪಾರಿಂದ ಶುರುವಾದ ಸ್ಪಿನ್ ದಾಳಿಯು ವರ್ಕ್ ಆಗುತ್ತಿಲ್ಲ ಎಂದು ಕಂಡು ಬಂದಾಗ, ಸ್ಮಿತ್ ಚೆಂಡನ್ನು ಗ್ಲೆನ್ ಮ್ಯಾಕ್ವೆಲ್ ಕೈಗಿತ್ತರು. ಇದರ ಬೆನ್ನಲ್ಲೇ ಕೂಪರ್ ಕೊನೊಲಿ ಕೈಯಲ್ಲೂ ಸ್ಪಿನ್ ಬೌಲಿಂಗ್ ಮಾಡಿಸಿದರು. ಆ ಬಳಿಕ ಮ್ಯಾಥ್ಯೂ ಶಾರ್ಟ್ ಕೂಡ ಸ್ಪಿನ್ ಮೋಡಿ ಮಾಡಿದರು. ಇನ್ನು ಟ್ರಾವಿಸ್ ಹೆಡ್ಗೂ ಚೆಂಡು ನೀಡುವ ಮೂಲಕ ಸ್ಮಿತ್ ಗಮನ ಸೆಳೆದರು.
4 / 7
ಈ ಮೂಲಕ ಆಸ್ಟ್ರೇಲಿಯಾದ ಐವರು ಸ್ಪಿನ್ನರ್ಗಳು ಒಟ್ಟು 194 ಎಸೆತಗಳನ್ನು ಎಸೆದರು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಅಂದರೆ 300 ಎಸೆತಗಳಲ್ಲಿ ಇದೇ ಮೊದಲ ಬಾರಿಗೆ ತಂಡವೊಂದರ ಪರ ಬೌಲರ್ಗಳು 190+ ಎಸೆತಗಳನ್ನು ಸ್ಪಿನ್ನರ್ಗಳು ಎಸೆದಿದ್ದಾರೆ.
5 / 7
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಒಟ್ಟು 8 ಬೌಲರ್ಗಳನ್ನು ಸಹ ಬಳಸಿಕೊಂಡಿದ್ದಾರೆ. ಇಲ್ಲಿ ವೇಗಿಗಳಾಗಿ ಜೋಶ್ ಹ್ಯಾಝಲ್ವುಡ್, ಮಿಚೆಲ್ ಸ್ಟಾರ್ಕ್ ಹಾಗೂ ಆರೋನ್ ಹಾರ್ಡಿ ಕಾಣಿಸಿಕೊಂಡರೆ, ಸ್ಪಿನ್ನರ್ಗಳಾಗಿ ಆ್ಯಡಂ ಝಂಪಾ, ಗ್ಲೆನ್ ಮ್ಯಾಕ್ಸ್ವೆಲ್, ಕೂಪರ್ ಕೊನೊಲಿ, ಮ್ಯಾಥ್ಯೂ ಶಾರ್ಟ್ ಹಾಗೂ ಟ್ರಾವಿಸ್ ಹೆಡ್ ಬೌಲಿಂಗ್ ಮಾಡಿದ್ದಾರೆ.
6 / 7
ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರ ಐವರು ಸ್ಪಿನ್ನರ್ಗಳಿಂದ ಬೌಲಿಂಗ್ ಮಾಡಿಸಿದ ಮೊದಲ ನಾಯಕನೆಂಬ ಹೆಗ್ಗಳಿಕೆಯು ಸ್ಟೀವ್ ಸ್ಮಿತ್ ಪಾಲಾಗಿದೆ. ಅಷ್ಟೇ ಅಲ್ಲದೆ 194 ಸ್ಪಿನ್ ಎಸೆತಗಳೊಂದಿಗೆ ಆಸ್ಟ್ರೇಲಿಯಾ ತಂಡವು ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನು ಸಹ ರಚಿಸಿದ್ದಾರೆ.
7 / 7
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 49.2 ಓವರ್ಗಳಲ್ಲಿ 309 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 20.4 ಓವರ್ಗಳಲ್ಲಿ 165 ರನ್ ಕಲೆಹಾಕಿತು. ಇದೇ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿಯಿತು. ಆ ಬಳಿಕ ಮಳೆ ನಿಲ್ಲದ ಕಾರಣ ಫಲಿತಾಂಶ ನಿರ್ಣಯಕ್ಕಾಗಿ ಡಕ್ ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಇಂಗ್ಲೆಂಡ್ ತಂಡಕ್ಕಿಂತ 49 ರನ್ಗಳ ಮುಂದಿದ್ದ ಆಸ್ಟ್ರೇಲಿಯಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.