7 ಜನ ಒಡಹುಟ್ಟಿದವರು, ಧಾರವಿಯಲ್ಲಿ ವಾಸ, SSLC ಫೇಲ್; ಈ ಕ್ರಿಕೆಟರ್ ಬದುಕೇ ಒಂದು ಹೋರಾಟ!
WPL 2023: ಸಿಮ್ರಾನ್ ಅವರಿಗೆ 7 ಜನ ಒಡಹುಟ್ಟಿದವರಿದ್ದು, ತಂದೆ ವೈರಿಂಗ್ ಕೆಲಸ ಮಾಡುತ್ತಾರೆ. 10ನೇ ತರಗತಿಯಲ್ಲಿ ಅನುತ್ತೀರ್ಣಳಾದ ಸಿಮ್ರಾನ್, ಓದಿಗೆ ತೀಲಾಂಜಲಿ ಇಟ್ಟ ಬಳಿಕ ಕ್ರಿಕೆಟ್ನತ್ತ ಗಮನಹರಿಸಿದರು.
1 / 5
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಇಂದು ಡಬಲ್ ಹೆಡರ್ ಪಂದ್ಯವಾಗಿದ್ದು, ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಇದರಲ್ಲಿ ಯುಪಿ ವಾರಿಯರ್ಸ್ ತಂಡದ ಭಾಗವಾಗಿರುವ ಸಿಮ್ರಾನ್ ಶೇಖ್ ಕೂಡ ತಂಡದಲ್ಲಿ ಸ್ಥಾನಪಡೆಯುವ ನಿರೀಕ್ಷೆ ಇದ್ದು, ಈ ಆಟಗಾರ್ತಿಯ ಕ್ರಿಕೆಟ್ ಬದುಕಿನ ಪಯಣ ಎಷ್ಟು ರೋಚಕವಾಗಿದೆ ಎಂಬುದನ್ನು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯು ತಿಳಿದುಕೊಳ್ಳಲೇಬೇಕಾಗಿದೆ.
2 / 5
ವಾಸ್ತವವಾಗಿ ಸಿಮ್ರಾನ್ ಶೇಖ್ ಅವರನ್ನು ಯುಪಿ ವಾರಿಯರ್ಸ್ ಫ್ರಂಚೈಸ್ ಮೂಲಬೆಲೆ 10 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದು, ಈ ಆಟಗಾರ್ತಿ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಗಳು ಹೆಚ್ಚಾಗಿವೆ.
3 / 5
ಮೂಲತಃ ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರವಿಯಲ್ಲಿ ವಾಸಿಸುತ್ತಿರುವ ಸಿಮ್ರಾನ್, ಕಡು ಬಡ ಕುಟುಂಬಕ್ಕೆ ಸೇರಿದವರು. ಸಿಮ್ರಾನ್ ಅವರಿಗೆ 7 ಜನ ಒಡಹುಟ್ಟಿದವರಿದ್ದು, ತಂದೆ ವೈರಿಂಗ್ ಕೆಲಸ ಮಾಡುತ್ತಾರೆ. 10ನೇ ತರಗತಿಯಲ್ಲಿ ಅನುತ್ತೀರ್ಣಳಾದ ಸಿಮ್ರಾನ್, ಓದಿಗೆ ತೀಲಾಂಜಲಿ ಇಟ್ಟ ಬಳಿಕ ಕ್ರಿಕೆಟ್ನತ್ತ ಗಮನಹರಿಸಿದರು.
4 / 5
ಬಲಗೈ ಬ್ಯಾಟರ್ ಆಗಿರುವ ಸಿಮ್ರಾನ್ ಶೇಖ್ ಲೆಗ್ ಸ್ಪಿನ್ನರ್ ಕೂಡ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಿಮ್ರಾನ್ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿದ್ದಾರೆ.
5 / 5
ಸಿಮ್ರಾನ್ ಶೇಖ್ ಕಳೆದ ವರ್ಷ ಹಿರಿಯ ಮಹಿಳಾ ಟಿ20 ಚಾಲೆಂಜರ್ ಟ್ರೋಫಿಯಲ್ಲಿ ಆಡಿದ್ದರು. ಈ 21 ವರ್ಷದ ಆಟಗಾರ್ತಿಯ ಕನಸು ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವುದಾಗಿದ್ದು, ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮಿಂಚುವ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳಲು ಶೇಖ್ ಹೊರಾಡಲಿದ್ದಾರೆ.