Updated on: Jun 10, 2023 | 5:46 PM
ಟೀಂ ಇಂಡಿಯಾದ ಯುವ ಬ್ಯಾಟರ್ ಹಾಗೂ ಭವಿಷ್ಯದ ನಾಯಕ ಎನಿಸಿಕೊಂಡಿರುವ ಶುಭ್ಮನ್ ಗಿಲ್ ಸದ್ಯ ಅದ್ಭುತ ಫಾರ್ಮ್ನಲ್ಲಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸುವುದರೊಂದಿಗೆ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ಗಿಲ್ಗೆ ಇದೀಗ ಓವಲ್ ಮೈದಾನದಲ್ಲಿ ಮದುವೆ ಪ್ರಪೋಸಲ್ ಬಂದಿದೆ.
ಸದ್ಯ ಓವಲ್ ಮೈದಾನದಲ್ಲಿ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುತ್ತಿದೆ. ಈಗಾಗಲೇ 3 ದಿನಗಳ ಆಟ ಮುಗಿದಿದ್ದು, 4ನೇ ದಿನದ ಮೊದಲ ಸೆಷನ್ ಕೂಡ ಮುಗಿದಿದೆ. ಆದರೆ ಈ ನಡುವೆ ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ಗೆ ಓವಲ್ ಮೈದಾನದಲ್ಲಿ ಮ್ಯಾಚ್ ನೋಡಲು ಬಂದಿದ್ದ ಯುವತಿಯೊಬ್ಬರು ಮದುವೆಯ ಪ್ರಸ್ತಾಪ ಮಾಡಿದ್ದಾರೆ.
ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 3ನೇ ದಿನದಂದು ಈ ಘಟನೆ ನಡೆದಿದ್ದು, ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಯುವತಿಯೊಬ್ಬರು ಮ್ಯಾರೀ ಮೀ ಶುಭ್ಮನ್ ಅಂತ ಬೋರ್ಡ್ ಹಿಡಿದ್ದು ನಿಂತ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಶುಭ್ಮನ್ ಗಿಲ್ ವೈಯಕ್ತಿಕ ಬದುಕಿಗೆ ಬರುವುದಾದರೆ ಈ ಯುವ ಕ್ರಿಕೆಟಿಗನ ಹೆಸರಿನೊಂದಿಗೆ ಪ್ರಮುಖವಾಗಿ ಇಬ್ಬರು ಹುಡುಗಿಯರ ಹೆಸರು ತಳುಕು ಹಾಕಿಕೊಂಡಿದೆ. ಮೊದಲನೆಯದಾಗಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಆಗಿದ್ದರೆ, ಇನ್ನೊಬ್ಬರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್.
ಪ್ರಿನ್ಸ್ ಗಿಲ್ ಹಾಗೂ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಲಾರಂಭಿಸಿತ್ತು. ಹೋಟೆಲ್ ಒಂದರಲ್ಲಿ ಇಬ್ಬರೂ ಭೇಟಿ ಆಗಿದ್ದು ಈ ಸುದ್ದಿ ಹುಟ್ಟಲು ಪ್ರಮುಖ ಕಾರಣವಾಗಿತ್ತು. ಇದಾದ ಬಳಿಕ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಭೇಟಿ ಆಗಿ ಗಂಟೆಗಟ್ಟಲೆ ಹರಟೆ ಹೊಡೆದಿದ್ದಾರೆ ಎನ್ನುವ ಸುದ್ದಿಯೂ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಕೇಳಿಬಂದಿರುವ ಮಾಹಿತಿ ಪ್ರಕಾರ ಈ ಇಬ್ಬರ ನಸಂಬಂಧ ಕೊನೆಯಾಗಿದೆ ಎಂದು ವರದಿ ಆಗಿದೆ.
ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ಜೊತೆಯೂ ಗಿಲ್ ಹೆಸರು ತಳುಕು ಹಾಕಿಕೊಂಡಿದ್ದು, ಈ ಇಬ್ಬರೂ ಪ್ರೇಮಿಗಳ ದಿನದಂದು ಒಟ್ಟಿಗೆ ಒಂದೇ ಹೋಟೆಲ್ನಲ್ಲಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಈ ಇಬ್ಬರೂ ಒಂದೇ ಹೋಟೆಲ್ನಲ್ಲಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಗಿಲ್ ಯಾರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ.
ಇನ್ನು ಗಿಲ್ ಅವರ ಕ್ರಿಕೆಟ್ ಬದುಕಿನ ಕಡೆ ನೋಡುವುದಾದರೆ, ಸದ್ಯ ಟೀಂ ಇಂಡಿಯಾದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುತ್ತಿರುವ ಗಿಲ್, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 14 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದರು. ಹೀಗಾಗಿ ಗಿಲ್ ಮೇಲೆ ಟೀಕಾ ಪ್ರಹಾರವೇ ನಡೆದಿತ್ತು. ಇದೀಗ 2ನೇ ಇನ್ನಿಂಗ್ಸ್ನಲ್ಲಾದರೂ ಗಿಲ್ ಲಯ ಕಂಡುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.