
ಮುಲ್ಲನ್ಪುರ್ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ( Yashasvi Jaiswal) ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಸತತ 29 ಮೈದಾನದಲ್ಲಿ ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. (PC: BCCI)

ಅಂದರೆ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್, ಇದುವರೆಗೆ ಯಾವುದೇ ಮೈದಾನದಲ್ಲಿ ಎರಡನೇ ಬಾರಿ ಕಣಕ್ಕಿಳಿದಿಲ್ಲ. ಅಂದರೆ ಈವರೆಗೆ ಆಡಿದ 29 ಟೆಸ್ಟ್ ಪಂದ್ಯಗಳನ್ನು ವಿಭಿನ್ನ ಮೈದಾನದಲ್ಲಿ ಆಡಿದ್ದಾರೆ. ಯಶಸ್ವಿ ಜೈಸ್ವಾಲ್ ಆಡಿದ 29 ಮೈದಾನಗಳ ಪಟ್ಟಿ ಈ ಕೆಳಗಿನಂತಿದೆ... (PC: BCCI)

ವಿದೇಶಿ ಮೈದಾನಗಳು: ವೆಸ್ಟ್ ಇಂಡೀಸ್‌ನ ರೊಸೊ, ಸೌತ್ ಆಫ್ರಿಕಾದ ಸೆಂಚುರಿಯನ್, ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿ, ಪರ್ತ್, ಬ್ರಿಸ್ಬೇನ್, ಅಡಿಲೇಡ್ ಹಾಗೂ ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಮತ್ತು ದಿ ಓವಲ್ ಮೈದಾನಗಳು. (PC: BCCI)

ಭಾರತದ ಮೈದಾನಗಳು: ಹೈದರಾಬಾದ್, ವಿಶಾಖಪಟ್ಟಣಂ, ರಾಜ್‌ಕೋಟ್, ರಾಂಚಿ, ಧರ್ಮಶಾಲಾ, ಚೆನ್ನೈ, ಕಾನ್ಪುರ, ಬೆಂಗಳೂರು, ಪುಣೆ, ಮುಂಬೈ ಮತ್ತು ಈಗ ನ್ಯೂ ಚಂಡೀಗಢ. ಹೀಗೆ ಒಟ್ಟು 29 ಟೆಸ್ಟ್ ಪಂದ್ಯಗಳನ್ನು 29 ಕಡೆ ಆಡುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. (PC: BCCI)

ಇದಾಗ್ಯೂ ಇದು ವಿಶ್ವ ದಾಖಲೆಯಲ್ಲ. ಇಂತಹೊಂದು ಅಪರೂಪದ ವಿಶ್ವ ದಾಖಲೆ ನಿರ್ಮಿಸಿರುವುದು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್. ಮಂಜ್ರೇಕರ್ ತಮ್ಮ ಮೊದಲ ಟೆಸ್ಟ್ ಪಂದ್ಯದಿಂದ 33 ಪಂದ್ಯಗಳವರೆಗೆ ವಿಭಿನ್ನ ಮೈದಾನಗಳಲ್ಲಿ ಕಣಕ್ಕಿಳಿದಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ ವಿಭಿನ್ನ ಮೈದಾನದಲ್ಲಿ ಕಣಕ್ಕಿಳಿದ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಇದೀಗ ಈ ಅಪರೂಪದ ದಾಖಲೆ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಹೆಸರು ಕೂಡ ಕಾಣಿಸಿಕೊಂಡಿರುವುದು ವಿಶೇಷ. (PC: GettyImages)
Published On - 2:07 pm, Sat, 6 June 26