400 + 300: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಝಿಂಬಾಬ್ವೆ ಹೊಸ ವಿಶ್ವ ದಾಖಲೆ

|

Updated on: Oct 24, 2024 | 9:54 AM

Zimbabwe vs Gambia: ಟಿ20 ಕ್ರಿಕೆಟ್​ನಲ್ಲಿ ಝಿಂಬಾಬ್ವೆ ಹೊಸ ಚರಿತ್ರೆ ಬರೆದಿದೆ. ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಝಿಂಬಾಬ್ವೆ 344 ರನ್ ಕಲೆಹಾಕಿದೆ. ಇದರೊಂದಿಗೆ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಬೃಹತ್ ಮೊತ್ತ ಕಲೆಹಾಕಿದ ವಿಶೇಷ ದಾಖಲೆಯೊಂದು ಸಿಕಂದರ್ ರಾಝ ಪಡೆಯ ಹೆಸರಿಗೆ ಸೇರ್ಪಡೆಯಾಗಿದೆ.

1 / 5
ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ನೈರೋಬಿಯಾದಲ್ಲಿ ನಡೆದ ಗ್ಯಾಂಬಿಯಾ ವಿರುದ್ಧದ ಈ ಪಂದ್ಯದಲ್ಲಿ ಝಿಂಬಾಬ್ವೆ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿತು. ಈ ಮೂಲಕ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದೆ.

2 / 5
ಇದರೊಂದಿಗೆ ಸೀಮಿತ ಓವರ್​ಗಳ ಪಂದ್ಯಗಳಲ್ಲಿ 300+ ಹಾಗೂ 400+ ರನ್​ಗಳಿಸಿದ ವಿಶ್ವದ ಏಕೈಕ ತಂಡವೆಂಬ ವಿಶ್ವ ದಾಖಲೆ ಕೂಡ ಝಿಂಬಾಬ್ವೆ ಪಾಲಾಯಿತು. ಅಂದರೆ ಅಂತಾರಾಷ್ಟ್ರೀಯ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 300+ ಹಾಗೂ 400+ ರನ್​ಗಳಿಸಿದ ವಿಶೇಷ ದಾಖಲೆಯೊಂದನ್ನು ಝಿಂಬಾಬ್ವೆ ತನ್ನದಾಗಿಸಿಕೊಂಡಿದೆ.

3 / 5
2023ರ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ತಂಡವು 50 ಓವರ್​ಗಳಲ್ಲಿ 408 ರನ್​ಗಳನ್ನು ಕಲೆಹಾಕಿದ್ದರು. ಇದೀಗ ಟಿ20 ಕ್ರಿಕೆಟ್​ನಲ್ಲಿ 20 ಓವರ್​ಗಳಲ್ಲಿ 344 ರನ್ ಬಾರಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ 300 ಹಾಗೂ ಏಕದಿನ ಕ್ರಿಕೆಟ್​ನಲ್ಲಿ 400 ರನ್​​ಗಳ ಗಡಿದಾಟಿದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆಗೆ ಝಿಂಬಾಬ್ವೆ ಪಾತ್ರವಾಗಿದೆ.

4 / 5
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಸೇರಿದಂತೆ ಒಟ್ಟು 6 ತಂಡಗಳು 400+ ರನ್​ ಕಲೆಹಾಕಿದೆ. ಆದರೆ ಈ ತಂಡಗಳಿಗೆ ಟಿ20 ಕ್ರಿಕೆಟ್​ನಲ್ಲಿ 300ರ ಗಡಿದಾಟಲು ಸಾಧ್ಯವಾಗಿಲ್ಲ. ಇದೀಗ ಅಸಾಧ್ಯವಾದ ದಾಖಲೆಯನ್ನು ಝಿಂಬಾಬ್ವೆ ತಂಡ ಮಾಡಿ ತೋರಿಸಿದೆ. ಈ ಮೂಲಕ ಸೀಮಿತ ಓವರ್​ಗಳ ಪಂದ್ಯಗಳಲ್ಲಿ 300+ ಹಾಗೂ 400+ ಸ್ಕೋರ್​ಗಳಿಸಿದ ಐತಿಹಾಸಿಕ ಸಾಧನೆ ಮಾಡಿದೆ.

5 / 5
ಇನ್ನು ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ 344 ರನ್​ಗಳನ್ನು ಕಲೆಹಾಕಿದ ಝಿಂಬಾಬ್ವೆ ಆ ಪಂದ್ಯವನ್ನು ಗೆದ್ದಿರುವುದು ಬರೋಬ್ಬರಿ 290 ರನ್​ಗಳಿಂದ. ಅಂದರೆ ವಿಶ್ವ ದಾಖಲೆಯ ಗುರಿ ಬೆನ್ನತ್ತಿದ ಗ್ಯಾಂಬಿಯಾ ಕೇವಲ 54 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರೀ ಅಂತರದಿಂದ ಗೆದ್ದ ವಿಶ್ವ ದಾಖಲೆಯನ್ನು ಸಹ ಝಿಂಬಾಬ್ವೆ ತನ್ನದಾಗಿಸಿಕೊಂಡಿದೆ.