Saree Draping: ಕರ್ನಾಟಕದಲ್ಲಿ ನೀರೆಯರು ಸೀರೆಯುಡುವ ಶೈಲಿ ಕಂಡಿರಾ?
TV9 Web | Updated By: ಅಕ್ಷತಾ ವರ್ಕಾಡಿ
Updated on:
Dec 22, 2022 | 7:02 PM
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದ ವಿವಿಧ ಭಾಗಗಳಲ್ಲಿ ಜನಾಂಗ ಹಾಗೂ ಪ್ರದೇಶಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ಸೀರೆಗಳನ್ನು ಉಡುವ ಪದ್ದತಿ ಇದೆ. ಅದರಲ್ಲಿ ಕರ್ನಾಟಕದ ಕೆಲವೊಂದು ಪ್ರದೇಶಕ್ಕೆ ಹಾಗೂ ಜನಾಂಗದ ಜನರು ಉಡುವ ಸೀರೆಯ ಕುರಿತು ಮಾಹಿತಿ ಇಲ್ಲಿದೆ.
1 / 7
ಅಯ್ಯಂಗಾರಿ ಸಮುದಾಯದವರು ಸೀರೆ ಉಡುವ ಶೈಲಿ: ಸಾಮಾನ್ಯವಾಗಿ ಉಡುವ ಸೀರೆಗಿಂತ ಕಚ್ಚೆಯ ರೀತಿಯಲ್ಲಿ ಸೀರೆಯನ್ನು ಉಡುವುದು ಅಯ್ಯಂಗಾರಿ ಸಮುದಾಯ ಸಂಸ್ಕೃತಿಯಾಗಿದೆ. ಈ ಶೈಲಿಯು ನೆರೆಯ ರಾಜ್ಯವಾದ ತಮಿಳುನಾಡಿನಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಇದು ಹೆಣ್ಣನ್ನು ಆಕರ್ಷಕವಾಗಿ ಕಾಣಿಸುವುದರ ಜೊತೆಗೆ ಆರಾಮದಾಯಕವು ಕೂಡ ಆಗಿದೆ.
2 / 7
ಕೊಡಗಿನವರು ಸೀರೆ ಉಡುವ ಶೈಲಿ: ಸೀರೆ ಉಡುವ ಶೈಲಿಯಲ್ಲಿಯೇ ಅವರು ಯಾವ ಊರಿನವರೆಂದು ಗುರುತಿಸುವಷ್ಟು ಕೊಡಗಿನ ಸೀರೆಯು ಜನಪ್ರಿಯತೆಯನ್ನು ಹೊಂದಿದೆ. ಕೊಡವರ ಸೀರೆಯ ಸೆರಗಿನ ಕೊನೆಯ ತುದಿಯು ಮುಂಭಾಗಕ್ಕೆ ಬರುವಂತೆ ಉಡಲಾಗುತ್ತದೆ.
3 / 7
ಸಿದ್ದಿ ಜನಾಂಗದವರು ಸೀರೆ ಉಡುವ ಶೈಲಿ: ಸಿದ್ದಿ ಬುಡಕಟ್ಟು ಜನಾಂಗದವರು ಮೂಲತಃ ಆಫ್ರಿಕಾದವರು. ಕಳೆದ ಮೂರು ಶತಮಾನಗಳಿಗೂ ಹೆಚ್ಚು ಕಾಲ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಸಿದ್ದಿ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇವರು ಉಡುವ ಸೀರೆಯೂ ಸಾಮಾನ್ಯವಾಗಿ ಮೊಣಕಾಲಿಗಿಂತ ಸ್ವಲ್ಪ ಉದ್ದ ಇರುತ್ತದೆ.
4 / 7
ಭೂತೇಯರು ಸೀರೆ ಶೈಲಿ: ಬೀದರ್ ಮತ್ತು ಕಲಬುರಗಿ ಸುತ್ತಮುತ್ತಲಿನ ಅಲೆಮಾರಿ ಕಲಾವಿದರು ವಿಶಿಷ್ಟವಾಗಿ ಸೀರೆಯನ್ನು ಉಡುತ್ತಾರೆ. ಇವರು ಸೀರೆಯ ಅರ್ಧಭಾಗವನ್ನು ಸೊಗಸಾದ ಪ್ಯಾಂಟ್ನ ರೀತಿಯಲ್ಲಿ ಪರಿವರ್ತಿಸುತ್ತಾರೆ ಮತ್ತು ಉಳಿದ ಅರ್ಧವನ್ನು ಸೆರಗಿನ ರೀತಿಯಲ್ಲಿ ಉಟ್ಟುಕೊಳ್ಳುತ್ತಾರೆ.
5 / 7
ಹಾಲಕ್ಕಿ ಒಕ್ಕಲಿಗರ ಸೀರೆ ಉಡುವ ಶೈಲಿ: ಕರ್ನಾಟಕದ ಉತ್ತರ ಭಾಗದ ಸ್ಥಳೀಯ ಬುಡಕಟ್ಟು ಜನಾಂಗದವರು ಸೀರೆಯನ್ನು ಸ್ಕರ್ಟ್‌ನಂತೆ ಉಡುತ್ತಾರೆ. ಸೀರೆಯ ಮೇಲಿನ ಭಾಗವನ್ನು ಕೂರ್ಗಿ ಶೈಲಿಯಲ್ಲಿ ಧರಿಸುತ್ತಾರೆ.
6 / 7
ಮೈಸೂರಿನಲ್ಲಿ ಸೀರೆ ಉಡುವ ಶೈಲಿ: ಮೈಸೂರಿನ ಸೀರೆ ಉಡುವ ಶೈಲಿಯು ಅಯ್ಯಂಗಾರಿಯ ಕಚ್ಚೆ ಶೈಲಿಯಲ್ಲಿದೆ. ಯಾಕೆಂದರೆ ಇವರು ಸೀರೆಯನ್ನು ಪಂಚೆಯ ರೀತಿಯಲ್ಲಿ ಉಡುತ್ತಾರೆ. ಇದಲ್ಲದೇ ಕೆಲವೊಮ್ಮೆ ಸರಳವಾಗಿ ಸೀರೆಯುಟ್ಟು ಸೆರಗಿನ ತುದಿಯನ್ನು ಬಲಭಾಲದಿಂದ ಮುಂದಕ್ಕೆ ಹಾಕುತ್ತಾರೆ.
7 / 7
ಕೊಂಕಣೆ ಸಮುದಾಯ ಪ್ರಕಾರ ಮದುವೆಯ ದಿನದಂದು ಸಾರಿಯ ಮೇಲೆ ಬಿಳಿ ಬಣ್ಣದ ಶಾಲು ಹಾಕಲಾಗುತ್ತದೆ. ಬಿಳಿ ಬಣ್ಣದ ಶಾಲು ಎರಡು ಭುಜಗಳ ನಡುವೆ ಸೆರಗಿನಂತೆ ಕಾಣುತ್ತದೆ.
Published On - 7:02 pm, Thu, 22 December 22