
ಜನರಲ್ಲಿ ಹಾವುಗಳೆಂದರೆ ಅತಿ ಹೆಚ್ಚು ಭಯ. ಆದರೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಶೆಟ್ಪಾಲ್ ಎಂಬ ಗ್ರಾಮವಿದೆ. ಇಲ್ಲಿನ ಗ್ರಾಮದಲ್ಲಿ ಮನುಷ್ಯರೊಂದಿಗೆ ನಾನಾ ಬಗೆಯ ಹಾವುಗಳಿವೆ. ಇಲ್ಲಿ ಪ್ರತಿಯೊಬ್ಬರ ಕುಟುಂಬದಲ್ಲಿ ಹಾವುಗಳಿವೆ.ಈ ಗ್ರಾಮದಲ್ಲಿ ಮಕ್ಕಳು ಹಾವುಗಳೊಂದಿಗೆ ಆಟವಾಡುತ್ತಾರೆ.

ಶೆಟ್ಪಾಲ್ ಗ್ರಾಮವನ್ನು ಹಾವುಗಳ ಗ್ರಾಮ ಎಂದು ಕರೆಯಲಾಗುತ್ತದೆ. ಗ್ರಾಮವು ಆರ್ಥಿಕವಾಗಿ ಹಿಂದುಳಿದಿದ್ದು, ಹಲವು ರೀತಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಇಲ್ಲಿನ ಜನರ ಜೊತೆಗೆ ಹಾವುಗಳೂ ಸಹ ವಾಸಿಸುತ್ತವೆ. ಇಲ್ಲಿ ಮನೆ ಬಾಗಿಲಿಗೆ ಹಾವುಗಳು ಕಾಣಸಿಗುತ್ತವೆ. ಈ ಗ್ರಾಮದಲ್ಲಿ ಹಾವುಗಳನ್ನು ಕುಟುಂಬದ ಸದಸ್ಯರು ಎಂದು ಪರಿಗಣಿಸಲಾಗುತ್ತದೆ.



Published On - 7:00 am, Wed, 2 March 22